ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಆಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಕೆಡಿ ಸಿನಿಮಾದ ಶೂಟಿಂಗ್‌ಗಾಗಿ ಮೈಸೂರಿನಲ್ಲಿ ಉಳಿದುಕೊಂಡಿದ್ದರು. ಇದೀಗ ತಮ್ಮ ಭಾಗದ ಬಹುತೇಕ ಚಿತ್ರೀಕರಣವನ್ನು ಶಿಲ್ಪಾ ಮುಗಿಸಿಕೊಟ್ಟಿದ್ದಾರೆ.  

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಆಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಕೆಡಿ ಸಿನಿಮಾದ ಶೂಟಿಂಗ್‌ಗಾಗಿ ಮೈಸೂರಿನಲ್ಲಿ ಉಳಿದುಕೊಂಡಿದ್ದರು. ಇದೀಗ ತಮ್ಮ ಭಾಗದ ಬಹುತೇಕ ಚಿತ್ರೀಕರಣವನ್ನು ಶಿಲ್ಪಾ ಮುಗಿಸಿಕೊಟ್ಟಿದ್ದಾರೆ. ಆನಂತರ ಸೆಟ್‌ನಲ್ಲಿ ನಿರ್ದೇಶಕ ಜೋಗಿ ಪ್ರೇಮ್ ಜೊತೆ ತಮಾಷೆ ಮಾಡಿದ್ದಾರೆ. ಜೊತೆಗೆ ಈವರೆಗಿನ ಚಿತ್ರೀಕರಣದ ನೆನಪುಗಳನ್ನೂ ಅವರು ಹಂಚಿಕೊಂಡಿದ್ದಾರೆ. ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ಬ್ಲಡಿ ಬಿಜಿನೆಸ್‌ ಎಂದು ಕರ್‌ಚೀಪ್‌ನಲ್ಲಿ ಜೋಗಿ ಪ್ರೇಮ್ ಕತ್ತು ಹಿಸುಕಿ ತಮಾಷೆ ಮಾಡಿದ್ದು, ಇಡೀ ಚಿತ್ರತಂಡದವರ ಜೊತೆ ಶಿಲ್ಪಾ ಶೆಟ್ಟಿ ಖುಷಿ ಖುಷಿಯಿಂದ ಪೋಸ್​ ನೀಡಿದ್ದಾರೆ.

‘ಕೆಡಿ’ ಸಿನಿಮಾದಲ್ಲಿ ರೆಟ್ರೋ ಕಾಲದ ಕಥೆ ಇರಲಿದೆ. ಅದಕ್ಕೆ ತಕ್ಕಂತೆಯೇ ಕಲಾವಿದರ ವೇಷಭೂಷಣ ಇದೆ. ಶಿಲ್ಪಾ ಶೆಟ್ಟಿ ಅವರು ಫಸ್ಟ್​ ಲುಕ್​ ಪೋಸ್ಟರ್​ ಅನ್ನು ಕೆಲವು ತಿಂಗಳ ಹಿಂದೆ ಬಿಡುಗಡೆ ಮಾಡಲಾಗಿತ್ತು. ಸೀರೆ ಗೆಟಪ್​ನಲ್ಲಿ ಅವರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೊನೇ ದಿನ ಶೂಟಿಂಗ್​ನಲ್ಲೂ ಅವರು ಇದೇ ಗೆಟಪ್​ ಧರಿಸಿದ್ದಾರೆ. ಶೂಟಿಂಗ್​ ಮುಗಿದ ಖುಷಿಯಲ್ಲಿ ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ‘ಕೆಡಿ’ ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಅದ್ಧೂರಿಯಾಗಿ ಈ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿದೆ. ಈ ಸಿನಿಮಾ ಚಿತ್ರೀಕರಣ ಮುಗಿಸಿದೆ. 

View post on Instagram


‘ಕೆಡಿ’ ರೆಟ್ರೋ ಸ್ಟೈಲ್ ಸಿನಿಮಾ. ಹಾಗಾಗಿ ಚಿತ್ರತಂಡ ಕೂಡ ಅದೇ ಲುಕ್‌ನಲ್ಲಿ ಸುದ್ದಿಗೋಷ್ಠಿಗೆ ಆಗಮಿಸಿದ್ದರು. ಕನ್ನಡ ಚಿತ್ರರಂಗದಲ್ಲೇ ದಾಖಲೆ ಮೊತ್ತಕ್ಕೆ ‘ಕೆಡಿ’ ಆಡಿಯೋ ರೈಟ್ಸ್ ಮಾರಾಟವಾಗಿದೆ ಎಂದು ಚಿತ್ರತಂಡ ಹೇಳಿದೆ. ಆನಂದ್ ಆಡಿಯೋ ಸಂಸ್ಥೆ ರೈಟ್ಸ್ ಕೊಂಡುಕೊಂಡಿದೆ. 17.70 ಕೋಟಿ ರೂ.ಗೆ ಆಡಿಯೋ ರೈಟ್ಸ್ ಸೇಲ್ ಆಗಿದೆ ಎಂದು ತಿಳಿಸಿದ್ದಾರೆ. ಅಂದಹಾಗೆ, ಶಾರುಖ್ ನಟನೆಯ ‘ಪಠಾಣ್’ ಚಿತ್ರಕ್ಕೆ 180 ಜನರನ್ನು ಬಳಸಿ, ಆರ್ಕೆಸ್ಟ್ರಾ ಮಾಡಿಸಲಾಗಿತ್ತು. ಆದರೆ ‘ಕೆಡಿ’ ಸಿನಿಮಾ ಅದನ್ನು ಮೀರಿಸಿದೆ. ಆ ಮೂಲಕ ಮೇಕಿಂಗ್ ಹಂತದಲ್ಲೇ ಸಿನಿಮಾ ಹೊಸ ದಾಖಲೆ ಬರೆದಿದೆ ಎಂದು ಮಾಹಿತಿ ನೀಡಿದ್ದಾರೆ.

ಕತೆಯೇ ಮುಖ್ಯ, ಕತೆ ಇಲ್ಲದೆ ಸ್ಟಾರ್‌ ಸಿನಿಮಾ ಆಗಲ್ಲ: ರವಿಚಂದ್ರನ್‌, ಧ್ರುವ ಸರ್ಜಾ ಹೇಳಿದ್ಧೇನು?

ಶಿಲ್ಪಾ ಶೆಟ್ಟಿ ಅವರು ಇತ್ತೀಚೆಗೆ ‘ಕೆಡಿ’ ಸಿನಿಮಾದ ಶೂಟಿಂಗ್​ ಬಿಡುವಿನಲ್ಲಿ ನಂಜನಗೂಡಿನ ನಂಜುಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವರಿಗೆ ಪ್ರಾರ್ಥನೆ ಸಲ್ಲಿಸಿ, ದೇವಾಲಯದ ಆವರಣದಲ್ಲಿ ಕುಳಿತು ಅವರು ಧ್ಯಾನ ಮಾಡಿದ್ದರು. ಆ ಸಂದರ್ಭದ ವಿಡಿಯೋ ಮತ್ತು ಫೋಟೋಗಳು ವೈರಲ್​ ಆಗಿದ್ದವು. ‘ಕೆಡಿ’ ಸಿನಿಮಾ ಈ ವರ್ಷ ಡಿಸೆಂಬರ್​ನಲ್ಲಿ ತೆರೆಕಾಣಲಿದೆ. ರವಿಚಂದ್ರನ್​, ರಮೇಶ್​ ಅರವಿಂದ್​ ಮುಂತಾದ ಕಲಾವಿದರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿದ್ದಾರೆ. ಇನ್ನು ಕನ್ನಡ ಚಿತ್ರರಂಗಕ್ಕೂ ಶಿಲ್ಪಾ ಶೆಟ್ಟಿ ಅವರಿಗೂ ಹಳೆಯ ನಂಟು. ‘ಪ್ರೀತ್ಸೋದ್​ ತಪ್ಪಾ’, ‘ಆಟೋ ಶಂಕರ್​’, ‘ಒಂದಾಗೋಣ ಬಾ’ ಚಿತ್ರಗಳಲ್ಲಿ ಅವರು ನಟಿಸುವ ಮೂಲಕ ಕನ್ನಡದ ಸಿನಿಪ್ರಿಯರನ್ನು ರಂಜಿಸಿದ್ದರು. ಅನೇಕ ವರ್ಷಗಳ ಬಳಿಕ ಮತ್ತೆ ಅವರು ‘ಕೆಡಿ’ ಸಿನಿಮಾದ ಮೂಲಕ ಕನ್ನಡಕ್ಕೆ ಕಮ್​ಬ್ಯಾಕ್​ ಮಾಡಿದ್ದಾರೆ. ಇದು ಪ್ಯಾನ್​ ಇಂಡಿಯಾ ಸಿನಿಮಾ. ಕನ್ನಡದ ಜೊತೆ ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.