ಸ್ಟಾರ್‌ ನಟರು ವರ್ಷಕ್ಕೆ 3-4 ಸಿನಿಮಾಗಳನ್ನು ಮಾಡಿದರೆ ಥಿಯೇಟರ್‌ಗಳು ಉಳಿಯುತ್ತವೆ ಎನ್ನುವ ಚಿತ್ರರಂಗದ ವಾದಕ್ಕೆ ಕ್ರೇಜಿಸ್ಟಾರ್‌ ರವಿಚಂದ್ರನ್‌ ಖಾರವಾಗಿ ಉತ್ತರಿಸಿದ್ದಾರೆ. ಧ್ರುವ ಸರ್ಜಾ ಅಭಿಪ್ರಾಯ ಹೇಳಿಕೊಂಡಿದ್ದಾರೆ. ಇಬ್ಬರ ಮಾತುಗಳೂ ಇಲ್ಲಿವೆ. 

ಸ್ಟಾರ್‌ ನಟರು ವರ್ಷಕ್ಕೆ 3-4 ಸಿನಿಮಾಗಳನ್ನು ಮಾಡಿದರೆ ಥಿಯೇಟರ್‌ಗಳು ಉಳಿಯುತ್ತವೆ ಎನ್ನುವ ಚಿತ್ರರಂಗದ ವಾದಕ್ಕೆ ಕ್ರೇಜಿಸ್ಟಾರ್‌ ರವಿಚಂದ್ರನ್‌ ಖಾರವಾಗಿ ಉತ್ತರಿಸಿದ್ದಾರೆ. ಧ್ರುವ ಸರ್ಜಾ ಅಭಿಪ್ರಾಯ ಹೇಳಿಕೊಂಡಿದ್ದಾರೆ. ಇಬ್ಬರ ಮಾತುಗಳೂ ಇಲ್ಲಿವೆ.

ಸ್ಟಾರ್‌ ಹೀರೋಗಳನ್ನು ಎರಡೇ ವರ್ಷಕ್ಕೆ ಮನೆ ಕಳುಹಿಸಿಬಿಡಿ,ರವಿಚಂದ್ರನ್‌: ನಾನು ನಾಳೆಯಿಂದಲೇ 10 ಸಿನಿಮಾ ಮಾಡಕ್ಕೆ ರೆಡಿ ಇದ್ದೇನೆ. ನಿರ್ಮಾಪಕರು ರೆಡಿ ಇದ್ದಾರಾ? ಅವರಿಗೆಲ್ಲ ಯಶ್‌, ದರ್ಶನ್‌ ಅವರೇ ಬೇಕು. ಯಾರು ಎಷ್ಟು ಸಿನಿಮಾ ಮಾಡಬೇಕು ಎಂಬುದು ಅವರವರ ಇಷ್ಟ. ಸ್ಟಾರ್‌ಗಳು ವರ್ಷಕ್ಕೆ 3-4 ಸಿನಿಮಾ ಮಾಡಿಬಿಡಿ ಎಂದರೆ ಹೇಗೆ? ಕತೆ ಓಕೆ ಆಗೋದು ಬೇಡವಾ? ನಾಳೆ ಬೆಳಗ್ಗೆಯೇ ದರ್ಶನ್‌ 3, ಯಶ್‌ 3 ಸಿನಿಮಾಗಳನ್ನು ಮಾಡಲಿ. ಎಲ್ಲರು ಸೇರಿಕೊಂಡು ಎರಡೇ ವರ್ಷಕ್ಕೆ ಅವರನ್ನು ಮನೆಗೆ ಕಳುಹಿಸಿಬಿಡಿ.

ಸ್ಯಾಂಡಲ್‌ವುಡ್ Vs ಸ್ಟಾರ್ಸ್‌: ಟಿಕೆಟ್ ದರ ಇಳಿಸಿ, ಉದ್ಯಮ ಉಳಿಸಿ

ನಟರು ತಾವು ಎಷ್ಟು ಸಿನಿಮಾ ಮಾಡಬೇಕು ಎಂಬುದು ಅವರವರ ಆಯ್ಕೆ. ಹೀರೋ ಅಂದ ಮೇಲೆ ಅವನಿಗೊಂದು ಇಮೇಜ್‌ ಇದೆ. ಅದನ್ನ ಅವನು ಉಳಿಸಿಕೊಳ್ಳಬೇಕು. ಹಾಗೆ ಉಳಿಸಿಕೊಳ್ಳುವ ಕತೆ, ಬಜೆಟ್‌, ನಿರ್ಮಾಪಕ ಸಿಗಬೇಕು. ಯಶ್‌ ‘ಕೆಜಿಎಫ್‌’ ಆದ ಮೇಲೆ ಎಂಥ ಸಿನಿಮಾ ಮಾಡಬೇಕಿತ್ತು, ದರ್ಶನ್‌ ‘ಕಾಟೇರ’ ಚಿತ್ರದ ನಂತರ ಯಾವ ಸಿನಿಮಾ ಮಾಡಬೇಕಿತ್ತು ಹೇಳಿ?

ಸಿನಿಮಾ ಮಾಡೋದಕ್ಕೆ ಕತೆ ಓಕೆ ಆಗಬೇಕು ತಾನೆ? ಕತೆ ಇಲ್ಲದೆ ದುಡ್ಡು ಇದ್ದರೆ ಸಿನಿಮಾ ಆಗಲ್ಲ. ದುಡ್ಡು ಕೊಟ್ಟರೆ ನನ್ನಂಥವನು ಸಿನಿಮಾ ಮಾಡುತ್ತಾನೆ. ಉಳಿದವರು ಹಾಗಲ್ಲ. ಅವರ ಜೇಬು ತುಂಬಿದೆ. ಅವರಿಗೆ ದುಡ್ಡಿಗಿಂತ ಕತೆ ಬೇಕು. ಕತೆಗಳನ್ನು ತೆಗೆದುಕೊಂಡು ದರ್ಶನ್‌, ಯಶ್‌ ಅವರ ಹತ್ತಿರ ಹೋಗಿ, ಸಿನಿಮಾ ಮಾಡೋಣ ಅಂತ ಹೇಳಿ.

ಚಿನ್ನು ನನ್ನ ಮಗ, ಆತನನ್ನ ಇದೇ ಕೈಯಲ್ಲಿ ಕಳ್ಕೊಂಡೆ ಎಂದ ಆಂಕರ್‌ ಅನುಶ್ರೀ!

ದೂರದ ಬೆಟ್ಟ ನುಣ್ಣಗೆ ಕಾಣೋದು ಸಹಜ, ಧ್ರುವ ಸರ್ಜಾ: ಸ್ಟಾರ್‌ ಹೀರೋಗಳ ಸಿನಿಮಾಗಳು ತಡವಾಗುವುದಕ್ಕೆ ಕಾರಣಗಳು ಇವೆ. ಆದರೆ, ಅವುಗಳನ್ನು ಹೇಳಕ್ಕೆ ಆಗಲ್ಲ. ನಮ್ಮ ಕಾರಣಗಳು ನಮಗೆ ಸರಿ ಅನಿಸುತ್ತವೆ, ಬೇರೆಯವರಿಗೆ ಸರಿ ಅನಿಸಲ್ಲ. ಹೀಗಾಗಿ ಅವರವರ ದೃಷ್ಟಿಯಲ್ಲಿ ಮಾತನಾಡುತ್ತಿದ್ದಾರೆ. ಆದರೆ, ದೂರದ ಬೆಟ್ಟ ನುಣ್ಣಗೆ ಎಂಬ ಮಾತಿದೆ. ದೂರದಿಂದ ನೋಡಿದರೆ ಎಲ್ಲವೂ ಚೆನ್ನಾಗಿರುತ್ತದೆ. ಹತ್ತಿರ ಹೋಗಿ ನೋಡಿದರೆ, ಅಲ್ಲಿ ಕಲ್ಲಿರುವುದು ಗೊತ್ತಾಗುತ್ತದೆ. ಹೀಗಾಗಿ ನಮ್ಮ ದೃಷ್ಟಿಕೋನದಲ್ಲಿ ನಾವು ಸರಿ ಇರಬಹುದು. ಇನ್ನು ಮುಂದೆ ಹೀಗೆ ತಡ ಮಾಡುವುದಿಲ್ಲ.