Asianet Suvarna News Asianet Suvarna News

'ಬಿಸಿಲು ಕುದುರೆ' ಚಿತ್ರದ ಪೋಸ್ಟರ್‌ ರಿಲೀಸ್: ಹೃದಯ ಶಿವ ನಿರ್ದೇಶನ

ಗೀತ ರಚನೆಕಾರ ಹೃದಯ ಶಿವ ನಿರ್ದೇಶನದ ಹೊಸ ಸಿನಿಮಾದ ಹೆಸರು ‘ಬಿಸಿಲು ಕುದುರೆ’. ಸಂಪತ್‌ ಮೈತ್ರೇಯ, ಸುನಿತಾ, ಕರಿಸುಬ್ಬು, ಜೋಸೈಮನ್‌, ಮಳವಳ್ಳಿ ಸಾಯಿಕೃಷ್ಣ , ವಿಕ್ಟರಿ ವಾಸು, ವೆಂಕಟೇಶ್‌ ನಟಿಸಿರುವ ಈ ಚಿತ್ರದ ಪೋಸ್ಟರ್‌ ಬಿಡುಗಡೆ ಆಗಿದೆ.

Bisilu Kudure Movie to be Directed by Hrudaya Shiva gvd
Author
Bangalore, First Published Jan 8, 2022, 11:24 AM IST

ಗೀತ ರಚನೆಕಾರ ಹೃದಯ ಶಿವ (Hrudaya Shiva) ನಿರ್ದೇಶನದ ಹೊಸ ಸಿನಿಮಾದ ಹೆಸರು ‘ಬಿಸಿಲು ಕುದುರೆ’ (Bisilu Kudure). ಸಂಪತ್‌ ಮೈತ್ರೇಯ (Sampath Maitreya), ಸುನಿತಾ, ಕರಿಸುಬ್ಬು, ಜೋಸೈಮನ್‌, ಮಳವಳ್ಳಿ ಸಾಯಿಕೃಷ್ಣ , ವಿಕ್ಟರಿ ವಾಸು, ವೆಂಕಟೇಶ್‌ ನಟಿಸಿರುವ ಈ ಚಿತ್ರದ ಪೋಸ್ಟರ್‌ (Poster) ಬಿಡುಗಡೆ ಆಗಿದೆ.

‘ಚಿತ್ರದಲ್ಲಿ ಅರಣ್ಯದ ಅಂಚಿನ ಬಗರ್‌ ಹುಕುಂ ಸಾಗುವಳಿದಾರರ ತಲ್ಲಣಗಳನ್ನು ಚಿತ್ರಿಸಲಾಗಿದೆ. ಆಡಳಿತ ವ್ಯವಸ್ಥೆ ಹಾಗೂ ಮಧ್ಯವರ್ತಿಗಳ ನಡುವೆ ಸಿಲುಕಿದ ಮುಗ್ಧ ರೈತನೊಬ್ಬ ಸರ್ಕಾರಿ ಭೂಮಿಯನ್ನು ಪಡೆಯಲು ಮಾಡುವ ಹೋರಾಟ ಮತ್ತು ಆ ಭೂಮಿಯನ್ನು ಪಡೆದ ನಂತರ ಎದುರಾಗುವ ಅನಿರೀಕ್ಷಿತ ಸಂಕಷ್ಟಗಳು ಹಾಗು ಮಧ್ಯವರ್ತಿಗಳ ದೆಸೆಯಿಂದ ತಾನು ಎದುರಿಸುವ ಆಘಾತವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ’ ಎನ್ನುತ್ತಾರೆ ಹೃದಯ ಶಿವ. ಮೆಟಾಫರ್‌ ಮೀಡಿಯಾ ಹೌಸ್‌ ಮೂಲಕ ಈ ಚಿತ್ರವನ್ನು ನಿರ್ಮಿಸಲಾಗಿದೆ. ನಾಗಾರ್ಜುನ್‌ ಡಿ ಕ್ಯಾಮೆರಾ ಚಿತ್ರಕ್ಕಿದೆ.

Shivarajkumar: ಶಿವಣ್ಣ ಶೂಟಿಂಗ್‌ ಡೈರಿ: ಯಾವ ಚಿತ್ರ ಯಾವ ಹಂತದಲ್ಲಿದೆ

ಅಪ್ಪ ವಿಲನ್‌, ಮಗ ಹೀರೋ: ಚಿತ್ರದ ಹೆಸರು ‘ನನಗೂ ಲವ್ವಾಗಿದೆ’ ಎಂಬುದು. ವಿಜಯ್‌ ರಾಜಶೇಖರ್‌ ಇದರ ನಿರ್ದೇಶಕರು. ಸೋಮ ವಿಜಯ್‌ ಹಾಗೂ ರೋಶಿನಿ ಚಿತ್ರದ ನಾಯಕ, ನಾಯಕಿ. ಕೆ ನೀಲಕಂಠನ್‌ ಈ ಚಿತ್ರದ ನಿರ್ಮಾಪಕರು. ಸಿನಿಮಾಗಳಲ್ಲಿ ನಾಯಕನಾಗಿ ಕಾಣಿಸಿಕೊಳ್ಳಬೇಕು ಎಂಬುದು ನಿರ್ಮಾಪಕರ ಆಸೆ ಆಗಿತ್ತಂತೆ. ಆದರೆ, ಅವರಿಗೆ ಅಂಥ ಅವಕಾಶ ಸಿಗದ ಕಾರಣ ಈಗ ತಮ್ಮ ಪುತ್ರನನ್ನು ನಾಯಕನನ್ನಾಗಿಸಿ, ತಾವು ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಅನುಭವ ಇರುವ, ಸಾಕಷ್ಟುಚಿತ್ರಗಳಿಗೆ ಕೆಲಸ ಮಾಡಿರುವ ವಿಜಯ್‌ ರಾಜಶೇಖರ್‌ ಅವರು ತುಂಬಾ ವರ್ಷಗಳ ಗ್ಯಾಪ್‌ ನಂತರ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಬೆಳಗಾವಿ ಹಾಗೂ ಬೆಂಗಳೂರು ಹುಡುಗಿಯ ಪ್ರೇಮ ಕತೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಹಬ್ಬದ ದಿನ ಬೆಂಗಳೂರಿನ ಶಾಂತಿನಗರದಲ್ಲಿರುವ ಹಿಂದೂ ರುದ್ರಭೂಮಿಯ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಚಿತ್ರಕ್ಕೆ ಮುಹೂರ್ತ ನಡೆಯಿತು. ನಾಯಕ ನಾಯಕಿಗೆ ತಾಳಿ ಕಟ್ಟುವ ದೃಶ್ಯವನ್ನು ಚಿತ್ರೀಕರಣ ಮಾಡಿಕೊಳ್ಳುವ ಮೂಲಕ ಚಿತ್ರಕ್ಕೆ ಚಾಲನೆ ನೀಡಲಾಯಿತು. 

‘ಇದು ನನಗೆ ಐದನೇ ಸಿನಿಮಾ. ಇದೊಂದು ಯಂಗ್‌ ಜನರೇಷನ್‌ ಕತೆಯ ಚಿತ್ರ’ ಎಂಬುದು ನಿರ್ದೇಶಕರು ಕೊಟ್ಟವಿವರಣೆ. ‘ಸಿನಿಮಾಗಳಲ್ಲಿ ನಾನು ಹೀರೋ ಆಗಬೇಕು ಎಂಬುದು ನನ್ನ ಚಿಕ್ಕಂದಿನ ಕನಸಾಗಿತ್ತು. ಅದು ನನ್ನಿಂದ ಸಾಧ್ಯವಾಗಲಿಲ್ಲ. ಈಗ ನನಗೆ ವಯಸ್ಸಾಯಿತು. ಆದರೆ, ನನ್ನ ಆ ದಿನಗಳ ಸಿನಿಮಾ ಕನಸು ನನ್ನ ಮಗನ ಮೂಲಕ ಈಡೇರುತ್ತಿದೆ ಎನ್ನುವ ಖುಷಿ ಇದೆ’ ಎನ್ನುತ್ತಾರೆ ನೀಲಕಂಠನ್‌. ಚಿತ್ರದಲ್ಲಿ ಐದು ಹಾಡುಗಳಿದ್ದು, ಬಿ ಆರ್‌ ಹೇಮಂತ್‌ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ನಾಗೇಶ್‌ ಶೆಟ್ಟಿಕ್ಯಾಮೆರಾ ಹಿಡಿಯುತ್ತಿದ್ದು, ಎರಡು ಹಂತಗಳಲ್ಲಿ ಬೆಂಗಳೂರು, ಬೆಳಗಾವಿ, ಚಿಕ್ಕಮಗಳೂರು ಹಾಗೂ ಸಕಲೇಶಪುರದಲ್ಲಿ ಚಿತ್ರೀಕರಣ ನಡೆಯಲಿದೆ.

Puneeth Rajkumar: ಜೇಮ್ಸ್‌ ಚಿತ್ರಕ್ಕೆ ಅಪ್ಪು ಧ್ವನಿಯಲ್ಲೇ ಡಬ್ಬಿಂಗ್‌

ಹೊಸಬರ ಕೌಟುಂಬಿಕ ಚಿತ್ರ ಅನುಮಿತ: ಕೆ ದಿನೇಶ್‌ ನಾಚಪ್ಪ ಕಾಳಿಮಾಡ ನಿರ್ದೇಶನ, ನಿರ್ಮಾಣದಲ್ಲಿ ಮೂಡಿಬರುತ್ತಿರುವ ಹೊಸಬರ ಚಿತ್ರ ‘ಅನುಮಿತ’ (Anumita). ‘ಕೌಟುಂಬಿಕ ಬದುಕಿನ ಏರಿಳಿತಗಳು, ಮಮತೆಯಿಂದ ಸಲಹುವ ಗುಣ ಇತ್ಯಾದಿ ಅಂಶಗಳು ಚಿತ್ರದಲ್ಲಿವೆ’ ಎಂದು ನಿರ್ದೇಶಕ ದಿನೇಶ್‌ ನಾಚಪ್ಪ ತಿಳಿಸಿದ್ದಾರೆ. ಅವರೇ ಈ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ವಿಂಪಲ್‌ ಮುತ್ತಮ್ಮ ಚಿತ್ರದ ನಾಯಕಿ. ದೇವಯ್ಯ, ಪವನ್‌ ತಮ್ಮಯ್ಯ, ಡಿಂಪಲ್‌ ನಾಚಪ್ಪ, ನರವಂಡ ಉಮೇಶ್‌ ಮೊಣ್ಣಪ್ಪ, ಪದ್ಮಾ, ವಾಂಚಿರ ಜಯ ನಂಜಪ್ಪ, ನಲ್ಲಚೇಂದ್ರ ರೇಖಾ, ಮಂದೀರ ಬೋಪಯ್ಯ, ರೀಟಾ ನಾಚಪ್ಪ ನಟಿಸಿದ್ದಾರೆ. ಶಿವಸತ್ಯ ಮೋಹನ್‌ ಮತ್ತು ಕೌಸ್ತಿಕ್‌ ಹರ್ಷ ಸಂಗೀತ, ಬದ್ರಿನಾಥ್‌ ಎಸ್‌ ಛಾಯಾಗ್ರಹಣ, ಕುಮಾರ್‌ ಸಿ ಕೆ ಸಂಕಲನ, ಸುರೇಶ್‌ ಅವರ ನೃತ್ಯ ಸಂಯೋಜನೆ ಇದೆ. ಕೆ ಸಜನಿ ಸೋಮಯ್ಯ ಚಿತ್ರದ ಕಥೆ ಹೆಣೆದಿದ್ದಾರೆ.

Follow Us:
Download App:
  • android
  • ios