ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ  ಕಿಚ್ಚ ಸುದೀಪ್‌ ಮತ್ತು ಬಾಲಿವುಡ್‌ ಬ್ಯಾಡ್‌ ಬಾಯ್ ಸಲ್ಮಾನ್ ಖಾನ್ ಆತ್ಮೀಯ ಸ್ನೇಹಿತರು. ಪ್ರತಿ ವರ್ಷ ಗೆಳೆಯನ ಹುಟ್ಟುಹಬ್ಬಕ್ಕೆ ಡಿಫರೆಂಟಾಗಿ ಕಿಚ್ಚ ಶುಭಾಶಯ ತಿಳಿಸುತ್ತಾರೆ. ಈ ಬಾರಿಯೂ ಶೇರ್ ಮಾಡಿಕೊಂಡಿರುವ ಫೋಟೋ ಸಿಕ್ಕಾಪಟ್ಟೆ ಡಿಫರೆಂಟ್‌ ಆಗಿದೆ. ನೀವೇ ನೋಡಿ...

ಕಿಚ್ಚ ಸುದೀಪ್ ಜೊತೆಗೆ ಜಿಮ್‌ಗೆ ಬಂದಿದ್ದು ಯಾರು ಗೊತ್ತಾ?

ಕಿಚ್ಚ ಪೋಸ್ಟ್:
ಫೋಟೋದಲ್ಲಿ ಸುದೀಪ್‌ ಹುಲಿಯಂಥಾ ನಾಯಿಯ ಚಿತ್ರ ಇರೋ ಜಾಕೆಟ್‌ ತೊಟ್ಟಿದ್ದಾರೆ. ಆ ಚಿತ್ರದಲ್ಲಿರುವ ನಾಯಿಗೆ ಸಲ್ಮಾನ್‌ ಮುತ್ತಿಡುತ್ತಿದ್ದಾರೆ. ಈ ಫೋಟೋ ಜೊತೆಗೆ ‘ಬದುಕಿನ ಎಲ್ಲಾ ಖುಷಿಗಳೂ ನಿಮಗೆ ಸಿಕ್ಕಲಿ, ನಮ್ಮಿಂದ ಭರಪೂರ ಪ್ರೀತಿಯ ಹಾರೈಕೆಗಳು,’ ಎಂಬರ್ಥದಲ್ಲಿ ಕಿಚ್ಚ ಶುಭ ಹಾರೈಸಿದ್ದಾರೆ.

ಮತ್ತೆ ಪ್ಯಾನ್‌ ಇಂಡಿಯಾ ಹೊರಟ ಕಿಚ್ಚ ಸುದೀಪ್‌; ನಾಗಾರ್ಜುನ ಮೆಚ್ಚಿಕೊಂಡ ಸಿನಿಮಾ 'ಫ್ಯಾಂಟಮ್‌' 

ಸುತ್ತ ಮುತ್ತಲಿರುವ ರಾಜ್ಯದಲ್ಲಿ ಖ್ಯಾತಿ ಪಡೆದಿರುವ ಕಿಚ್ಚ ಸುದೀಪ್, ಪ್ರತಿಯೊಬ್ಬ ಸ್ಟಾರ್ ನಟನ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅದರಂತೇ ಅವರು ಸುದೀಪ್‌ ಮೇಲೆ ಅಭಿಮಾನ ಹೊಂದಿದ್ದಾರೆ. ಇನ್ನು ಕೊರೋನಾ ಮುನ್ನೆಚ್ಚರಿಕೆಯಿಂದ 55ನೇ ಹುಟ್ಟುಹಬ್ಬವನ್ನು ಸಲ್ಮಾನ್ ಸರಳವಾಗಿ ಆಚರಿಸಿದ್ದಾರೆ. ಯಾರೂ ಮನೆ ಮುಂದೆ ಮಾಸ್ಕ್‌ ಧರಿಸದೇ, ಸ್ಯಾನಿಟೈಸರ್ ಬಳಸದೆ ಗುಂಪು ಗೂಡುವಂತಿಲ್ಲವೆಂದು ಎಂದು ಪತ್ರದ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದರು.