ಮೊನ್ನೆ ಒಂದು ದಿನ ಬೆಳ್‌ ಬೆಳಗ್ಗೆ ಕನ್ನಡದ ಹೀರೋ ಕಿಚ್ಚ ಸುದೀಪ್ ಜೊತೆ ಅವರ ಜಿಮ್‌ನಲ್ಲಿ ಬಾಲಿವುಡ್ ಹೀರೋ ಸಲ್ಮಾನ್ ಖಾನ್ ಕಾಣಿಸಿಕೊಂಡರು. ನಿಜಕ್ಕೂ! ಅವರು ಕಿಚ್ಚ ಸುದೀಪ್ ಅವರ ಜೊತೆ ಫೋಟೋ ತೆಗೆಸಿಕೊಳ್ಳೋಕೆ ಅಂತ್ಲೇ ಬಂದಿದ್ದರಂತೆ! 

ಇದು ನಿಜವಾ ಅಂತ ಕೇಳಬೇಡಿ. ಬದಲಾಗಿ ಇಲ್ಲಿರೋ ಫೋಟೋ ಅಥವಾ ಇನ್‌ಸ್ಟಾ ಲಿಂಕ್ ನೋಡಿ. ಕಿಚ್ಚ ಸುದೀಪ್ ಜೊತೆಗಿರೋರು ಅವರೇ ತಾನೆ?

ಅಲ್ಲ! ಅವರು ಸಲ್ಮಾನ್ ಖಾನ್ ಹಾಗೇನೇ ಕಾಣುವ, ಹಲವಾರು ಫಿಲಂಗಳಲ್ಲಿ ಸಲ್ಮಾನ್ ಖಾನ್‌ಗೆ ಡ್ಯೂಪ್ ಆಗಿ ನಟಿಸಿರುವ ವ್ಯಕ್ತಿ. ಹೆಸರು ಪರ್ವೇಜ್ ಖಾಜಿ. ಇವರ ಇನ್‌ಸ್ಟಾಗ್ರಾಮ್ ಅಕೌಂಟಿಗೆ ಅಥವಾ ಟ್ವಿಟರ್ ಅಕೌಂಟಿಗೆ ಒಮ್ಮೆ ಹೋಗಿ ನೋಡಿ. ಇಂಥ ನೂರಾರು ಫೋಟೋಗಳು ನಿಮಗೆ ಕಾಣಸಿಗುತ್ತವೆ. ಸಲ್ಮಾನ್ ಖಾನ್ ಜೊತೆಗೆ ಶೂಟಿಂಗ್ ಸೆಟ್‌ಗಳಲ್ಲಿ ತೆಗೆಸಿಕೊಂಡ ಫೋಟೋಗಳು, ಶಾರುಕ್, ಅಮೀರ್ ಖಾನ್ ಮುಂತಾದ ಹೀರೋಗಳ ಜೊತೆಗೆ, ಕತ್ರಿನಾ ಕೈಫ್ ಮುಂತಾದ ಹೀರೋಯಿನ್‌ಗಳ ಜತೆಗೆ ತೆಗೆಸಿಕೊಂಡ ಚಿತ್ರಗಳು. ಇವಲ್ಲದೆ ದಕ್ಷಿಣ ಭಾರತದ ಹೀರೋಗಳಾದ ಕಿಚ್ಚ ಸುದೀಪ್, ಪ್ರಭುದೇವ, ಚಿರಂಜೀವಿ ಮುಂತಾದ ನಟರ ಜೊತೆಗೆ ತೆಗೆಸಿಕೊಂಡ ಫೋಟೋಗಳನ್ನೂ ಅವರು ಅಕೌಂಟ್‌ನಲ್ಲಿ ಹಾಕಿಕೊಂಡಿದ್ದಾರೆ. 
 


ಪರ್ವೇಜ್ ಅಕೌಂಟ್‌ಗೆ ೫೦,೦೦೦ಕ್ಕೂ ಹೆಚ್ಚು ಫಾಲೋವರ್ಸ್ ಇದ್ದರು. ತುಂಬಾ ಮಂದಿ ಅವರ ಫೋಟೋಗಳಿಗೆ ಲೈಕ್, ಕಾಮೆಂಟ್ ಮಾಡುತ್ತಿದ್ದರು. ಇತ್ತೀಚೆಗೆ ಅವರ ಅಕೌಂಟ್ ಹ್ಯಾಕ್ ಆಗಿದೆ. ನಂತರ ಅವರ ಹ್ಯಾಕ್ ಆದ ಬಗೆಯನ್ನೂ ಹೇಳಿಕೊಂಡಿದ್ದರು. ಇವರು ಬಾಲಿವುಡ್ ವಲಯದಲ್ಲಿ ಸಾಕಷ್ಟು ಫೇಮಸ್ ಕೂಡ. ಕೆಲವೊಮ್ಮೆ ಇವರು ರಾತ್ರಿ ಬೈಕ್‌ನಲ್ಲಿ ಮುಂಬಯಿಯ ಬೀದಿಗಳಲ್ಲಿ ರೈಡ್ ಹೋಗುವುದುಂಟು. ಆಗ ಸಾಮಾನ್ಯ ಜನ, ಓಹೋ ಸಲ್ಮಾನ್ ಖಾನನೇ ಬಂದಿದ್ದಾನೆ ಎಂದು ಮೋಸ ಹೋಗುವುದೂ ಉಂಟಂತೆ. ಇವರು ಕೂಡ ಅವರ ಜೊತೆ ನಕ್ಕು ನಲಿದು ನಿಜವನ್ನು ತಿಳಿಸಿ ಫೋಟೋ ತೆಗೆಸಿಕೊಂಡು ಬರುತ್ತಾರೆ. ಲೈವ್‌ಲೀ ಮನುಷ್ಯ. 

ಶಾರುಕ್, ಸಲ್ಮಾನ್, ಸನ್ನಿ ಲಿಯೋನ್ ವಿಚಿತ್ರ ಖಯಾಲಿಗಳು ನಿಮಗೆ ಗೊತ್ತಾ? ...

ಸಲ್ಮಾನ್ ಖಾನ್‌ನನ್ನು ಹೋಲುವ ಮೂರು ವ್ಯಕ್ತಿಗಳಿದ್ದಾರೆ. ಅವರೆಲ್ಲರೂ ಒಂದಲ್ಲ ಒಂದು ಫಿಲಂನಲ್ಲಿ ಸಲ್ಮಾನ್‌ಗೆ ಡ್ಯೂಪ್ ಆಗಿ ನಟಿಸಿದ್ದುಂಟು. ಆದರೆ ಸಲ್ಮಾನ್‌ನನ್ನು ಹೆಚ್ಚು ಹೋಲುವ ವ್ಯಕ್ತಿ ಎಂದರೆ ಪರ್ವೇಜ್. ಈತನ ಎತ್ತರವೂ ಸಲ್ಮಾನ್‌ನಷ್ಟೇ ಇದೆ. ಜಿಮ್‌ಗೆ ಹೋಗಿ ಸಲ್ಮಾನ್ ಥರಾ ಚೆನ್ನಾಗಿ ಬಾಡಿ ಬೆಳೆಸಿಕೊಂಡಿದ್ದಾನೆ. ಫೈಟಿಂಗ್ ಸೀನ್‌ಗಳಿದ್ದರೆ ಈತನನ್ನೇ ಸಲ್ಮಾನ್ ಪ್ರಿಫರ್ ಮಾಡುತ್ತಾನೆ. ಫೈಟಿಂಗ್ ದೃಶ್ಯಗಳಲ್ಲಿ ನಿರ್ಭೀತನಾಗಿ ನಟಿಸುತ್ತಾನೆ. ಸಲ್ಮಾನ್‌ನ ಇತ್ತೀಚೆಗಿನ ಚಿತ್ರ ಟೈಗರ್ ಜಿಂದಾ ಹೈಯಲ್ಲಿ ಸಲ್ಮಾನ್ ಫೈಟ್ ದೃಶ್ಯಗಳಲ್ಲಿ ನಟಿಸಿರುವಾತ ಈತನೇ. ಸುಲ್ತಾನ್, ಟ್ಯೂಬ್‌ಲೈಟ್ ಮೊದಲಾದ ಫಿಲಂಗಳಲ್ಲೂ ಈತ ನಟಿಸಿದ್ದಾನೆ.

54 ಆದ್ರೂ ಸಲ್ಮಾನ್ ಖಾನ್ ಕಟ್ಟುಮಸ್ತಾಗಿರೋ ಸೀಕ್ರೇಟ್ ...

ಮುಂಬಯಿಯಲ್ಲಿ ಹುಟ್ಟಿ ಬೆಳೆದ ಪರ್ವೇಜ್, ಮಾಡೆಲ್ ಆಗಿ ವೃತ್ತಿ ಬದುಕು ಆರಂಭಿಸಿದ. ಮಾಡೆಲ್ ಆಗಿ ಸಾಕಷ್ಟು ಸಂಪಾದನೆಯನ್ನೂ ಮಾಡಿದ್ದಾನೆ. ತಾನು ಸಲ್ಮಾನ್ ಥರಾ ಇದ್ದೇನೆ ಎಂದು ಆತನಿಗೆ ಗೊತ್ತಾಯಿತು. ಇತರರೂ ಹೇಳತೊಡಗಿದರು. ಆಗ ಆತನಿಗೆ ಇನ್ನೊಂದು ಆದಾಯದ ದಾರಿ ಕಾಣಿಸಿದಂತಾಯಿತು. ಟಿಕ್‌ಟಾಕ್‌ನಲ್ಲಿ ಸಲ್ಮಾನ್ ಥರಾ ನಟಿಸಿ ವಿಡಿಯೋಗಳನ್ನು ಅಪ್‌ಲೋಡ್ ಮಾಡತೊಡಗಿದ. ಇದನ್ನು ಕೆಲವು ಚಿತ್ರ ನಿರ್ದೇಶಕರು ಗಮನಿಸಿದರು. ಈತನನ್ನು ಕೊಂಡೊಯ್ದು ಸಲ್ಮಾನ್ ಮುಂದೆ ನಿಲ್ಲಿಸಿದರು. ಆತನಿಗೂ ತನಗೂ ಇರುವ ಹೋಲಿಕೆಯನ್ನು ಕಂಡು ಸಲ್ಮಾನ್ ಅವಕ್ಕಾದನಂತೆ. ತಾನು ಫೈಟಿಂಗ್ ಮಾಡಲು ಸಮರ್ಥ ಎಂದು ಈತ ತೋರಿಸಿಕೊಟ್ಟ ನಂತರ ಈತ ಸಲ್ಮಾನ್‌ನ ಫಿಲಂಗಳಲ್ಲಿ ಡ್ಯೂಪ್ ಆಗಿ ನಟಿಸತೊಡಗಿದ. ಈಗ ಈತ ಸಲ್ಮಾನ್‌ನ ಕಾಯಂ ಡ್ಯೂಪ್. 

ಸಲ್ಮಾನ್‌ ಖಾನ್‌ನನ್ನು ಬೋಲ್ಡ್ ಆಗಿ ಅಪ್ಪಿಕೊಂಡ ನಟಿ ಈಗ ಮೌಲ್ವಿ ಪತ್ನಿ! ...


 

 
 
 
 
 
 
 
 
 
 
 
 
 
 
 

A post shared by Parvez Kazi (@parvezzkazii)