ಕಿಚ್ಚ ಸುದೀಪ್ ಅಭಿನಯದ 47ನೇ ಸಿನಿಮಾ ಹೆಸರು ಬಹಿರಂಗವಾಗಿದೆ. ಚಿತ್ರತಂಡ ಹೆಸರಿನ ಟೀಸರ್ ಬಿಡುಗಡೆ ಮಾಡಿದೆ. ಮ್ಯಾಕ್ಸ್ ಭಾಗ 2 ಎಂದೇ ಅಭಿಮಾನಿಗಳು ಚರ್ಚಿಸುತ್ತಿದ್ದ ಬೆನ್ನಲ್ಲೇ ಸಿನಿಮಾ ಹೆಸರು ಮಾರ್ಕ್ ಎಂದು ಬಹಿರಂಗಗೊಂಡಿದೆ. 

ಬೆಂಗಳೂರು (ಸೆ.01) ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್. ಸುದೀಪ್ ಅಭಿನಯದ 47ನೇ ಸಿನಿಮಾದ ಹೆಸರು ರಿವೀಲ್ ಆಗಿದೆ. ಮ್ಯಾಕ್ಸ್ ಯಶಸ್ಸಿನ ಬಳಿಕ ಅದೇ ಚಿತ್ರತಂಡ ಮ್ಯಾಕ್ಸ್ ಭಾಗ 2 ಬಿಡುಗಡೆ ಮಾಡುತ್ತಿದೆ ಅನ್ನೋ ಚರ್ಚೆಗಳು ಬಲವಾಗಿ ಕೇಳಿಬರುತ್ತಿದ್ದ ಬೆನ್ನಲ್ಲೇ ಇದೀಗ ಸಿನಿಮಾ ಹೆಸರು ಬಹಿರಂಗವಾಗಿದೆ. ಸುದೀಪ್ 47ನೇ ಸಿನಿಮಾ ಹೆಸರು ಮಾರ್ಕ್. ಮ್ಯಾಕ್ಸ್ ಸಿನಿಮಾ ಬಳಿಕ ಇದೀಗ ಮಾರ್ಕ್ ಸಿನಿಮಾ ನಿರ್ಮಾಣ ವೇಗವಾಗಿ ನಡೆಯುತ್ತಿದೆ. ಡಿಸೆಂಬರ್ 25ಕ್ಕೆ ಮಾರ್ಕ್ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ. ಸೆಪ್ಟೆಂಬರ್ 2 ರಂದು ಸುದೀಪ್ ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟಹಬ್ಬಕ್ಕೆ ಚಿತ್ರತಂಡ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಿದೆ.

ಹೊಸ ಹೇರ್‌ಸ್ಟೈಲ್‌ನಲ್ಲಿ ಸುದೀಪ್

ಮಾರ್ಕ್ ಸಿನಿಮಾ ತಂಡ ಇಂದು ಸುದೀಪ್ ಅಭಿನಯದ ಮಾರ್ಕ್ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆ ಮಾಡಿದೆ. ಜೊತೆಗೆ ಕಿಚ್ಚ ಸುದೀಪ್ ಫಸ್ಟ್ ಲುಕ್ ಕೂಡ ರಿವೀಲ್ ಆಗಿದೆ. ಹೊಸ ಅವತಾರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ಆ್ಯಕ್ಷನ್ ಥ್ರಿಲ್ಲರ್ ಕತೆ ಹಂದರದ ಲುಕ್ ಪೋಸ್ಟ್‌ನಲ್ಲಿ ರಿವೀಲ್ ಆಗಿದೆ. ಸುದೀಪ್ ಹೊಸ ಹೇರ್‌ಸ್ಟೈಲ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿಲ್ಕಿ ಹೇರ್‌ಸ್ಟೈಲ್‌ನಿಂದ ಸುದೀಪ್ ಕರ್ಲಿ ಹೇರ್‌ಸ್ಟೇಲ್‌ಗೆ ಬದಲಾಗಿದ್ದಾರೆ. ಈ ಸಿನಿಮಾದ ಕತೆಗಾಗಿ ಸುದೀಪ್ ತಮ್ಮ ಹೇರ್‌ಸ್ಟೈಲ್ ಬದಲಿಸಿಕೊಂಡಿದ್ದಾರೆ. ಇನ್ನು ಸಿನಿಮಾ ಹೆಸರಿನಲ್ಲೂ ಕೆಲ ಕುತೂಹಲ ಇಟ್ಟಿದ್ದಾರೆ. ಹೆಸರಿನ ಅಕ್ಷರಗಳ ಮೇಲೆ ಮುಷ್ಠಿ ಹಿಡಿದಿರುವ ಕೈ, ಜೊತೆಗೆ ಸರಪಳಿಯಿಂದ ಸುತ್ತಿದ ಅಕ್ಷರಗಳನ್ನು ಚಿತ್ರಿಸಲಾಗಿದೆ. ಈ ಮೂಲಕ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿಸಿದ್ದಾರೆ.

ಟೀಸರ್ ವಿಡಿಯೋದಲ್ಲಿ ತೀವ್ರ ಸಸ್ಪೆನ್ಸ್ ಇಡಲಾಗಿದೆ. ಕ್ರೈಮ್ ಸೀನ್‌ ಸ್ಥಳದಿಂದ ಟೀಸರ್ ವಿಡಿಯೋ ಆರಂಭಗೊಳ್ಳುತ್ತಿದೆ. ಇತ್ತ ಕಿಚ್ಚ ಸುದೀಪ್ ಸಣ್ಣ ಝಲಕ್ ಇದರಲ್ಲಿದೆ. ಟೀಸರ್ ಅದ್ಭುತವಾಗಿ ಮೂಡಿ ಬಂದಿದೆ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ.

ವಿಷ್ಣುವರ್ಧನ್‌ ಸ್ಮಾರಕದ ಬಗ್ಗೆ ನಾಳೆ ಸರಿಯಾದ ಚಿತ್ರಣ ಸಿಗುತ್ತೆ ಎಂದ ಕಿಚ್ಚ ಸುದೀಪ್‌!

ಮ್ಯಾಕ್ಸ್ ಯಶಸ್ಸಿನ ಬಳಿಕ ಮಾರ್ಕ್

ಕೆ47 ಹೆಸರಿನಲ್ಲಿ ಈ ಸಿನಿಮಾ ಆರಂಭಗೊಂಡಿತ್ತು. ಸಿನಿಮಾ ಹೆಸರು ಸೇರಿದಂತೆ ಯಾವುದೇ ಮಾಹಿತಿ ಬಹಿರಂಗವಾಗಿರಲಿಲ್ಲ. ಇದೀಗ ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೂ ಒಂದು ದಿನ ಮೊದಲು ಸಿನಿಮಾದ ಟೈಟಲ್ ಟೀಸರ್ ಹಾಗೂ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಮ್ಯಾಕ್ಸ್ ಸಿನಿಮಾ ನಿರ್ದೇಶನ ಮಾಡಿದ್ದ ವಿಜಯ್ ಕಾರ್ತಿಕೇಯ ಮಾರ್ಕ್ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ವಿಶೇಷ ಅಂದರೆ ಮ್ಯಾಕ್ಸ್ ಸಿನಿಮಾ ತಂಡದ ಸದಸ್ಯರೇ ಮಾರ್ಕ್ ಸಿನಿಮಾದಲ್ಲೂ ಕೆಲಸ ಮಾಡುತ್ತಿದ್ದಾರೆ. ಹೀಗಾಗಿಯೇ ಇದು ಮ್ಯಾಕ್ಸ್ ಸಿನಿಮಾದ ಭಾಗ 2 ಎಂದೇ ಚರ್ಚಿಸಲಾಗಿತ್ತು.

ಡಿಸೆಂಬರ್ 25ಕ್ಕೆ ಸಿನಿಮಾ ಬಿಡುಗಡೆ

ಮಾರ್ಕ್ ಸಿನಿಮಾ ಡಿಸೆಂಬರ್ 25ಕ್ಕೆ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರತಂಡ ಸತತವಾಗಿ ಸಿನಿಮಾ ನಿರ್ಮಾಣ ಮಾಡುತ್ತಿದೆ. ಶೂಟಿಂಗ್, ಪ್ರೊಡಕ್ಷನ್ ಸೇರಿದಂತೆ ಹಲವು ಕೆಲಸದಲ್ಲಿ ತೊಡಗಿಸಿಕೊಂಡಿದೆ. ಶಿಸ್ತಿನಿಂದ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ. ಈ ಕುರಿತು ಕಿಚ್ಚ ಸುದೀಪ್ ಕೂಡ ಹೇಳಿಕೊಂಡಿದ್ದಾರೆ. ರಾತ್ರಿ ಹಗಲು ಶೂಟಿಂಗ್, ಸಮಯವನ್ನು ಸದುಪಯೋಗ ಪಡಿಸಿಕೊಂಡು ಕೆಲಸ ಮಾಡುತ್ತಿರುವ ಕಾರಣ ಅನಗತ್ಯ ಖರ್ಚು ಕಡಿಮೆ ಮಾಡಲು ಸಾಧ್ಯವಿದೆ ಎಂದು ಸುದೀಪ್ ಹೇಳಿದ್ದರು. ಸಿನಿಮಾ ಟೀಸರ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಸುದೀಪ್ ಮತ್ತೊಂದು ಭರ್ಜರಿ ಯಶಸ್ಸಿನ ಚಿತ್ರಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಇತ್ತ ಚಿತ್ರತಂಡ ಕೂಡ ಈ ಸಿನಿಮಾ ಸುದೀಪ್ ಉತ್ತಮ ಯಶಸ್ಸು ತಂದುಕೊಡಲಿದೆ ಎಂದಿದೆ. 

YouTube video player