ಬಿಗ್‌ಬಾಸ್‌ ಖ್ಯಾತಿಯ ಉಗ್ರಂ ಮಂಜು, ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ನಟಿಸುತ್ತಿರುವ 'ಮ್ಯಾಂಗೋ ಪಚ್ಚ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ವಿವೇಕ್ ನಿರ್ದೇಶನ ಮಾಡುತ್ತಿದ್ದಾರೆ. ಬಿಗ್‌ಬಾಸ್ ನಂತರ ಮಂಜು ಬೇಡಿಕೆ ಹೆಚ್ಚಿದ್ದು, ಸಂಭಾವನೆ ಕೂಡ ಏರಿಕೆಯಾಗಿದೆ ಎನ್ನಲಾಗಿದೆ. ಚಿತ್ರದಲ್ಲಿ ಮಂಜು ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ ಚಿತ್ರರಂಗದ ಅದ್ಭುತ ನಟ ಕಿಚ್ಚ ಸುದೀಪ್ ಜೊತೆ ಉಗ್ರಂ ಮಂಜು ಮ್ಯಾಕ್ಸ್ ಸಿನಿಮಾದಲ್ಲಿ ನಟಿಸಿದ್ದರು. ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಯಾಗಿ ಆಟವಾಡುತ್ತಿರುವಾಗ ಮ್ಯಾಕ್ಸ್ ಸಿನಿಮಾ ರಿಲೀಸ್ ಆಯ್ತು. ಉಗ್ರಂ ಮಂಜು ಒಳಗಿದ್ದರೂ ಹೊರಗೆ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದರು. ಅಲ್ಲದೆ ಫೈನಲಿಸ್ಟ್‌ಗಳ ಪಟ್ಟೆಯಲ್ಲಿ ಉಗ್ರಂ ಮಂಜು ಇದ್ದರು. ಪ್ರತಿ ವೀಕೆಂಡ್ ಸುದೀಪ್ ಆಗಮಿಸಿದಾಗ ಮ್ಯಾಕ್ಸಿಮಮ್‌ ಎಂಬ ಪದವನ್ನು ಮಂಜು ಬಳಸಿ ಮಾಡುತ್ತಿದ್ದರು. ಬಿಗ್ ಬಾಸ್ ಮುಗಿಸಿಕೊಂಡು ಸಣ್ಣ ಬ್ರೇಕ್ ಎಂಜಾಯ್ ಮಾಡುತ್ತಿದ್ದ ಮಂಜುಗೆ ಮ್ಯಾಕ್ಸಿಮಮ್ ಆಫರ್‌ಗಳು ಹುಡುಕಿಕೊಂಡು ಬರುತ್ತಿದೆ. ಕಥೆಗಳನ್ನು ಕೇಳುವುದರಲ್ಲಿ ಬ್ಯುಸಿಯಾಗಿರುವ ಮಂಜು ಈಗ ಸಂಚಿತ್ ಸಂಜೀವ್ ಸಿನಿಮಾವನ್ನು ಅವಕಾಶ ಸಿಕ್ಕಿದೆ.

ಪ್ರಿಯಾ ಸುದೀಪ್ ಅವರ ಸುಪ್ರಿಯಾನ್ವಿ ಮತ್ತು ಕೆಆರ್‌ಜೆ ಸ್ಟುಡಿಯೋಸ್‌ ಪ್ರೊಡಕ್ಷನ್‌ ಹೌಸ್‌ನಲ್ಲಿ ಅನೌನ್ಸ್‌ ಆಗಿರುವ 'ಮ್ಯಾಂಗೋ ಪಚ್ಚ' ಸಿನಿಮಾದಲ್ಲಿ ಸುದೀಪ್‌ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟಿಸಲು ಉಗ್ರಂ ಮಂಜು ಆಫರ್ ಪಡೆದಿದ್ದಾರೆ. ಈ ಮಾಹಿತಿಯನ್ನು ಸ್ವತಃ ಮಂಜು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 'ಮ್ಯಾಂಗೋ ಪಚ್ಚ' ಸಂಚಿತ್ ಜೊತೆ ಶೂಟಿಂಗ್ ಸಂದರ್ಭದಲ್ಲಿ ತೆಗೆಸಿಕೊಂಡಿರುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಈ ಚಿತ್ರಕ್ಕೆ ವಿವೇಕ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರವನ್ನು ಮೈಸೂರಿನಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. 

ಒಂದು ವರ್ಷ ಆದ್ಮೇಲೆ ಅರಿಶಿಣ ಶಾಸ್ತ್ರದ ಫೋಟೋ ಹಂಚಿಕೊಂಡ ಸೌಂದರ್ಯ; ಜಗದೀಶ್ ನಗು ನೋಡಿ ಅಭಿಮಾನಿಗಳು ಭಾವುಕ

ಮ್ಯಾಂಗೀ ಪಚ್ಚ ಸಿನಿಮಾದ ಪ್ರೋಮೋವನ್ನು ರಿಲೀಸ್ ಮಾಡಲಾಗಿದೆ. ಸಿಗರೇಟ್ ಎಳೆಯುತ್ತಿರುವ ರೆಟ್ರೋ ಹುಡುಗನ ಲುಕ್‌ನಲ್ಲಿ ಸಂಚಿತ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಉಗ್ರಂ ಮಂಜು ಕೂಡ ರೆಟ್ರೋ ಕಾಸ್ಟ್ಯೂಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 'ಸುದೀಪ್ ಕಡೆಯಿಂದ ಮಂಜುಗೆ ಈ ಆಫರ್ ಬಂದಿರಬಹುದು ಹೀಗಾಗಿ ಸಂಭಾವನೆ ಇಸಕ್ಕಾಪಟ್ಟೆ ಇದೆ' ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಬಿಗ್ ಬಾಸ್ ಸೀನಸ್ 11 ಮುಗಿದ ಮೇಲೆ ಮಂಜು ಡಿಮ್ಯಾಂಡ್ ಹೆಚ್ಚಾಗಿರುವ ಕಾರಣ ಸಂಭಾವನೆ ಕೂಡ ಹೆಚ್ಚಿಸಿಕೊಂಡಿದ್ದಾರೆ.

ವ್ಯಾಲೆಂಟೈನ್ಸ್ ಡೇಗೂ ತಲೆ ಕೆಡಿಸಿಕೊಳ್ಳದೆ ಕುಟುಂಬದ ಜೊತೆ ಶಿರಡಿಗೆ ಹೊರಟ ಬಿಗ್ ಬಾಸ್ ಮೋಕ್ಷಿತಾ ಪೈ!