- Home
- Entertainment
- Sandalwood
- ವ್ಯಾಲೆಂಟೈನ್ಸ್ ಡೇಗೂ ತಲೆ ಕೆಡಿಸಿಕೊಳ್ಳದೆ ಕುಟುಂಬದ ಜೊತೆ ಶಿರಡಿಗೆ ಹೊರಟ ಬಿಗ್ ಬಾಸ್ ಮೋಕ್ಷಿತಾ ಪೈ!
ವ್ಯಾಲೆಂಟೈನ್ಸ್ ಡೇಗೂ ತಲೆ ಕೆಡಿಸಿಕೊಳ್ಳದೆ ಕುಟುಂಬದ ಜೊತೆ ಶಿರಡಿಗೆ ಹೊರಟ ಬಿಗ್ ಬಾಸ್ ಮೋಕ್ಷಿತಾ ಪೈ!
ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಫ್ಯಾಮಿಲಿ ಸಮಯ ಕೊಟ್ಟು ಶಿರಡಿ ಕಡೆ ಪ್ರಯಾಣ ಮಾಡಿದ ಮೋಕ್ಷಿತಾ. ಫೋಟೋ ವೈರಲ್.....

ಕನ್ನಡ ಕಿರುತೆರೆಯ ಪಾರು, ಬಿಗ್ ಬಾಸ್ ಸ್ಪರ್ಧಿ ಮೋಕ್ಷಿತಾ ಪೈ ತಮ್ಮ ಫ್ಯಾಮಿಲಿ ಜೊತೆ ಶಿರಡಿ ಸಾಯಿ ಬಾಬ ದರ್ಶನ ಪಡೆಯಲು ಹೊರಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ.
ಪ್ರೇಮಿಗಳ ದಿನದಂದು ಸೆಲೆಬ್ರಿಟಿಗಳು ರೆಡ್ ಡ್ರೆಸ್ ಧರಿಸುವುದು, ತಮ್ಮ ಬಾಯ್‌ಫ್ರೆಂಡ್ ಜೊತೆ ಹೊರಗಡೆ ಸುತ್ತಾಡುವುದು ಇಲ್ಲವಾದರೆ ಸ್ನೇಹಿತೆಯರ ಜೊತೆ ಪಾರ್ಟಿ ಮಾಡುತ್ತಾರೆ. ಆದರೆ ಮೋಕ್ಷಿತಾ ಫುಲ್ ಡಿಫರೆಂಟ್.
ವ್ಯಾಲೆಂಟೈನ್ಸ್ ಡೇ ತಲೆ ಕೆಡಿಸಿಕೊಳ್ಳದ ಮೋಕ್ಷಿತಾ ಪೈ ಫ್ಯಾಮಿಲಿ ಜೊತೆ ಶಿರಡಿ ಸಾಯಿ ಬಾಬ ದರ್ಶನ ಪಡೆದಿರುವ ಫೋಟೋ ಹಾಕಿದ್ದಾರೆ. ಆದರೆ ಅಲ್ಲಿ ಕೆಂಪು ಬಣ್ಣದ ಸೀರೆ ಧರಿಸಿ ಪೋಸ್ ಕೊಟ್ಟಿದ್ದಾರೆ.
'ಓಂ ಸಾಯಿ ರಾಮ್' ಎಂದು ಮೋಕ್ಷಿತಾ ಬರೆದುಕೊಂಡಿದ್ದಾರೆ. ಮೋಕ್ಷಿ ಧರಿಸಿರುವುದು ಕ್ಯೂಟ್ ಇನ್ ಸ್ಟಾರಿ ಅವರು ಕೊಟ್ಟಿರುವ ಸೀರೆ ಮತ್ತು ಬ್ಲೌಸ್ ಡಿಸೈನ್ ಮಾಡಿರುವುದು ರತ್ನಂ ಡಿಸೈನ್ ಸ್ಟುಡಿಯೋದವರು.
ಮೋಕ್ಷಿತಾ ಪೈ ಜೊತೆ ತಾಯಿ ಮತ್ತು ಸ್ನೇಹಿತೆಯರು ಮಾತ್ರವಲ್ಲದೆ ಕಿರುತೆರೆ ಬಾಲನಟ ಗಗನ್ ದೀಪ್ ಕೂಡ ಭಾಗಿಯಾಗಿದ್ದಾರೆ. ಗಗನರನ್ನು ತಮ್ಮ ಎಂದು ಮೋಕ್ಷಿತಾ ಕರೆಯುತ್ತಾರೆ.
ಯ್ಯಪ್ಪಾ...ನಮ್ಮ ಹುಡುಗಿ ಎಷ್ಟು ಸಿಂಪಲ್ ನೋಡಿ, ಎಲ್ಲಂತೆ ವ್ಯಾಲೆಂಟೈನ್ಸ್ ಡೇಗೆ ಪಾರ್ಕ್‌ಗೆ ಅಥವಾ ಮಾಲ್‌ಗೆ ಹೋಗಲ್ಲ ನಮ್ಮ ಹುಡುಗಿ ಅದಿಕ್ಕೆ ದೇವಸ್ಥಾನಕ್ಕೆ ಹೋಗಿದ್ದಾಳೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.