- Home
- Entertainment
- Sandalwood
- ಒಂದು ವರ್ಷ ಆದ್ಮೇಲೆ ಅರಿಶಿಣ ಶಾಸ್ತ್ರದ ಫೋಟೋ ಹಂಚಿಕೊಂಡ ಸೌಂದರ್ಯ; ಜಗದೀಶ್ ನಗು ನೋಡಿ ಅಭಿಮಾನಿಗಳು ಭಾವುಕ
ಒಂದು ವರ್ಷ ಆದ್ಮೇಲೆ ಅರಿಶಿಣ ಶಾಸ್ತ್ರದ ಫೋಟೋ ಹಂಚಿಕೊಂಡ ಸೌಂದರ್ಯ; ಜಗದೀಶ್ ನಗು ನೋಡಿ ಅಭಿಮಾನಿಗಳು ಭಾವುಕ
ಮದ್ವೆಯಾಗಿ ವರ್ಷ ಮುಟ್ಟುತ್ತಿದ್ದಂತೆ ಮದುವೆ ಫೋಟೋಗಳನ್ನು ರಿವೀಲ್ ಮಾಡಿದ ಸೌಂದರ್ಯ. ಜನರಿಗೆ ಈಗಲೂ ಜಗದೀಶ್ ಮೇಲೆ ಅನುಕಂಪ...........

ಕನ್ನಡ ಚಿತ್ರರಂಗ ಖ್ಯಾತ ನಿರ್ಮಾಪಕ ಹಾಗೂ ಉದ್ಯಮಿ ಜಗದೀಶ್ ಇನ್ನಿಲ್ಲವಾದರೂ ಅವರ ಕನಸುಗಳನ್ನು ಈಡೇರಿಸುತ್ತಿರುವುದು ಅವರ ಮಕ್ಕಳಾದ ಸೌಂದರ್ಯ ಮತ್ತು ಸ್ನೇಹಿತ್.
ಕಳೆದ ವರ್ಷ ಇದೇ ಸಮಯದಲ್ಲಿ ಸೌಂದರ್ಯ ಮದುವೆ ಸಮಾರಂಭ ಶುರುವಾಗಿತ್ತು. ಆದರೆ ಜೀವನದಲ್ಲಿ ನಡೆದ ಕಹಿ ಘಟನೆಗಳಿಂದ ಯಾವುದೇ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳದೆ ಮೌನಕ್ಕೆ ಜಾರಿದ್ದು.
ಹೀಗಾಗಿ ಕರೆಕ್ಟ್ ಒಂದು ವರ್ಷಕ್ಕೆ ತಮ್ಮ ಅರಿಶಿಣ ಶಾಸ್ತ್ರ ಹೇಗಿತ್ತು ಎಂದು ಸೌಂದರ್ಯ ಅಪ್ಲೋಡ್ ಮಾಡಿದ್ದಾರೆ. 'ಒನ್ ಇಯರ್ ಟು ದಿಸ್ ಡೇ' ಎಂದು ಬರೆದುಕೊಂಡಿದ್ದಾರೆ.
ಬಳಿ ಮತ್ತು ಅರಿಶಿಣ ಬಣ್ಣದ ಕಾಂಬಿನೇಷನ್ ಲೆಹೆಂಗಾದಲ್ಲಿ ಸೌಂದರ್ಯ ಕಾಣಿಸಿಕೊಂಡಿದ್ದಾರೆ. ಅದೇ ಕಾಂಬಿನೇಷನ್ ಔಟ್‌ಫಿಟ್‌ನಲ್ಲಿ ಅಳಿಯ ಗೌತಮಿ ಮಿಂಚಿದ್ದಾರೆ.
ಮಗಳು ಸೌಂದರ್ಯ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕು ಅನ್ನೋದು ಜಗದೀಶ್ ಕನಸು. ಹೀಗಾಗಿ ಪ್ರತಿಯೊಂದು ಕಾರ್ಯಕ್ರಮನ್ನು ವಿಭಿನ್ನತೆಯಿಂದ ಮಾಡಿಕೊಟ್ಟಿದ್ದಾರೆ.
ಸೌಂದರ್ಯ ಹಂಚಿಕೊಂಡಿರುವ ಫೋಟೋದಲ್ಲಿ ಜಗದೀಶ್ ಸಖತ್ ಖುಷಿಯಾಗಿರುವುದನ್ನು ನೋಡಬಹುದು. ಈ ಫೋಟೋ ನೋಡಿ ಅಭಿಮಾನಿಗಳು ಹಾಗೂ ಅವರ ಸಂಸ್ಥೆಯ ಕಾರ್ಮಿಕರು ಭಾವುಕರಾಗಿದ್ದಾರೆ.