ಬಿಗ್‌ ಬಾಸ್‌ ರಿಯಾ​ಲಿಟಿ ಶೋ ವಿನ್ನರ್‌ ಪ್ರಥಮ್‌ ಮತ್ತೊಂದು ಸಿನಿಮಾ ಶುರು ಮಾಡಿ​ದ್ದಾರೆ. ಮೊನ್ನೆ​ಯಷ್ಟೆ‘ನಟ ಭಯಂಕ​ರ’ ಎನ್ನುವ ಸಿನಿಮಾ ಮುಗಿಸಿ ಬಂದಿ​ರುವ ಪ್ರಥಮ್‌, ಆ ಸಿನಿಮಾ ಬಿಡು​ಗ​ಡೆಗೂ ಮುನ್ನವೇ ‘99 ಲಕ್ಷ​ಕ್ಕೊ​ಬ್ಬ’ ಎನ್ನುವ ಚಿತ್ರ​ವನ್ನು ಘೋಸಿ​ದ್ದಾರೆ.

 ತಮ್ಮ ಈ ಹೊಸ ಸಿನಿಮಾ ಕುರಿತು ಹೇಳಿ​ಕೊ​ಳ್ಳಲು ತಂಡದ ಸಮೇ​ತ​ರಾಗಿ ಮಾಧ್ಯ​ಮ​ಗಳ ಮುಂದೆ ಬಂದರು. ಟೈಟಲ್‌ ಬಿಡು​ಗ​ಡೆ​ಯನ್ನೇ ಒಂದು ಟೀಸರ್‌ ರೀತಿ​ಯಲ್ಲಿ ರೂಪಿ​ಸಿದ್ದ ಪ್ರಥಮ್‌, ಅದರ ಪ್ರದ​ರ್ಶನ ನಂತರ ಎಂದಿ​ನಂತೆ ಅವರ ಮಾತು​ಗಾ​ರಿಕೆ ಶುರು​ವಾ​ಯಿತು. ‘ಈ ಚಿತ್ರದ ಟೈಟಲ್‌ ಪ್ರಕ​ಟಿ​ಸುವ ಮುನ್ನ ನಾನು ನಟ ಸುದೀಪ್‌ ವರೊಂದಿಗೆ ಮಾತ​ನಾ​ಡಿದೆ. ಯಾಕೆಂದರೆ ಅವರು ಕೋಟಿ​ಗೊಬ್ಬ 3 ಸಿನಿಮಾ ಮಾಡು​ತ್ತಿ​ದ್ದಾರೆ. ನನ್ನ ಚಿತ್ರಕ್ಕೆ ಒಂದು ಲಕ್ಷ ಕಡಿಮೆ.

ಕೊಟ್ಟ ಮಾತು ಉಳಿಸ್ಕೊಂಡು ಮತ್ತಷ್ಟು ಒಳ್ಳೆ ಹುಡ್ಗನಾದ ಪ್ರಥಮ್

ಹೀಗಾಗಿ ಸುದೀಪ್‌ ಅವರು ಅನು​ಮತಿ ಕೊಟ್ಟಮೇಲೆಯೇ 99 ಲಕ್ಷ​ಕ್ಕೊಬ್ಬ ಹೆಸರು ಘೋಷಣೆ ಮಾಡೋಣ ಎಂದು​ಕೊಂಡೆ. ಸುದೀಪ್‌ ಅವರು ಅನು​ಮತಿ ಕೊಟ್ಟಿ​ದ್ದಾರೆ. ಈ ಕಾರ​ಣಕ್ಕೆ ಧೈರ್ಯದಿಂದ ಇದೇ ಟೈಟ​ಲ್‌​ನಲ್ಲಿ ಸಿನಿಮಾ ಮಾಡು​ತ್ತಿ​ದ್ದೇನೆ. ಈಗ ನಟ ಭಯಂಕರ ಸಿನಿಮಾ ತೆರೆಗೆ ಸಜ್ಜಾ​ಗಿದೆ. ಇದರ ಜತೆಗೆ ಈ ಹೊಸ ಸಿನಿಮಾ ಶುರು ಮಾಡು​ತ್ತಿ​ದ್ದೇವೆ. ಸದ್ಯ​ದಲ್ಲೇ ಚಿತ್ರೀ​ಕ​ರ​ಣಕ್ಕೆ ತೆರ​ಳು​ತ್ತಿ​ದ್ದೇವೆ’ ಎಂದು ಪ್ರಥಮ್‌ ಹೇಳಿ​ಕೊಂಡರು.

'ಹುಚ್ಚ' ವೆಂಕಟ್‌ಗೆ ನಾನು ಮಾಡಿದ ದೊಡ್ಡ ಉಪಕಾರವಿದು: ಪ್ರಥಮ್

ಮಹಾ​ಭಾ​ರ​ತ​ದಿಂದ ಸ್ಫೂರ್ತಿ​ಗೊಂಡು ರೂಪಿ​ಸು​ತ್ತಿ​ರುವ ಈ ಚಿತ್ರಕ್ಕೆ ಬೆಟ್ಟಿಂಗ್‌ ದಂಧೆಯ ಕರಾಳ ಮುಖವನ್ನು ಈ ಚಿತ್ರದ ಮೂಲಕ ಹೇಳ​ಲಿ​ದ್ದಾ​ರಂತೆ. ನಿಲೇಶ್‌ ಎಚ್‌ ಪಿ ಈ ಚಿತ್ರ​ವನ್ನು ನಿರ್ಮಾಣ ಮಾಡು​ತ್ತಿದ್ದು, ಅಣಜಿ ನಾಗ​ರಾಜ್‌ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿ​ಯು​ತ್ತಿ​ದ್ದಾರೆ. ಪ್ರಧ್ಯೋ​ತನ್‌ ಸಂಗೀತ ಇದೆ. ಹಿರಿಯ ನಟ ಉಮೇಶ್‌ ಅವರು ಚಿತ್ರ​ದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿ​ಸಿ​ಕೊ​ಳ್ಳು​ತ್ತಿ​ದ್ದಾರೆ. ‘ನಾನು ಈ ಹಿಂದೆ ಪಾದ​ರಸ ಚಿತ್ರಕ್ಕೆ ಸಹ ನಿರ್ಮಾ​ಪ​ಕ​ನಾ​ಗಿದ್ದೆ. ನನ್ನ ಬ್ಯಾನ​ರ್‌​ನಲ್ಲಿ ಪ್ರಥಮ್‌ ಅವ​ರಿಗೆ ಸಿನಿಮಾ ಮಾಡ​ಬೇಕು ಎಂಬುದು ನನ್ನ ಆಸೆ.

ಒಂದು ವರ್ಷದ ಹಿಂದೆ ಶುರು​ವಾದ ಸಿನಿಮಾ. ಈಗ ಅದು ಶೂಟಿಂಗ್‌ಗೆ ಹೋಗು​ತ್ತಿದೆ. ಒಳ್ಳೆಯ ಸಿನಿಮಾ ಎಂಬುದು ನನ್ನ ಅನಿ​ಸಿ​ಕೆ’ ಎಂದರು ನಿಲೇಶ್‌. ಅಂದ​ಹಾಗೆ ನಟನೆ ಜತೆಗೆ ಪ್ರಥಮ್‌ ಅವರೇ ಚಿತ್ರ​ವನ್ನು ನಿರ್ದೇ​ಶನ ಮಾಡು​ತ್ತಿ​ದ್ದಾರೆ. ಹೊಸ ಚಿತ್ರದ ಪ್ರಕ​ಟಣೆ ಜತೆಗೆ ಪ್ರಥಮ್‌ ತಮ್ಮ ಹುಟ್ಟು ಹಬ್ಬ​ವನ್ನೂ ಆಚ​ರಿ​ಸಿ​ಕೊಂಡರು. ನಟ ಅಭಿ​ಷೇಕ್‌ ಅಂಬ​ರೀಶ್‌ ಆಗ​ಮಿಸಿ ಕೇಕ್‌ ಕಟ್‌ ಮಾಡಿ ಪ್ರಥಮ್‌ ಅವ​ರಿಗೆ ಶುಭ ಕೋರಿ​ದರು.

View post on Instagram