ಕೊಟ್ಟ ಮಾತು ಉಳಿಸ್ಕೊಂಡು ಮತ್ತಷ್ಟು ಒಳ್ಳೆ ಹುಡ್ಗನಾದ ಪ್ರಥಮ್

First Published 20, Feb 2020, 7:05 PM

ಎಂಎಲ್‌ಎ ಬಳಿಕ ಇನ್ನು ನಿರ್ಮಾಣಹಂತದಲ್ಲಿರುವ ನಟ ಭಯಂಕರ ಸಿನಿಮಾದ ಕೆಲಸಗಳನ್ನು ಮುಗಿಸಿ ಆಗಾಗ ನಾಪತ್ತೆಯಾಗಿದ್ದ ಒಳ್ಳೆ ಹುಡುಗ ಪ್ರಥಮ್ ಮತ್ತೆ ಸುದ್ದಿಯಾಗಿದ್ದಾರೆ. ಯಾವುದೇ ಡೈಲಾಗ್ ಹೊಡೆದು, ಕಾಮಿಡಿ ಮಾಡಿ ಸುದ್ದಿಯಾಗಿಲ್ಲ. ಬದಲಾಗಿ ತಾವು ಕೊಟ್ಟ. ಕೊಟ್ಟ ಮಾತು ಉಳಿಸಿಕೊಳ್ಳುವ ಮೂಲಕ ಪ್ರಥಮ್ ಮತ್ತಷ್ಟು ಒಳ್ಳೆ ಹುಡುಗ ಎನಿಸಿಕೊಂಡಿದ್ದಾರೆ. ಅಷ್ಟಕ್ಕೂ ಪ್ರಥಮ್ ಹೀಗಾಗ್ತಾರೆ ಅಂತಾ ಯಾರಿಗ್ ಗೊತ್ತಿತ್ತು?

‘ಬಿಗ್ ಬಾಸ್ ಕನ್ನಡ ಸೀಸನ್ 4’ ವಿನ್ನರ್ ಒಳ್ಳೆ ಹುಡುಗ ಪ್ರಥಮ ಕೊಟ್ಟ ಮಾತಿನಂತೆ ಕೃಷಿಯಲ್ಲಿ ತೊಡಗಿಸಿಕೊಂಡು ಮಾತು ಉಳಿಸಿಕೊಂಡಿದ್ದಾರೆ.

ಕೊಳ್ಳೇಗಾಲದಿಂದಾಚೆ ಒಂದು ಪುಟ್ಟ ಗ್ರಾಮದಲ್ಲಿ ಭೂಮಿ ಖರೀದಿಸಿ ಭರ್ಜರಿ ವ್ಯವಸಾಯ ಮಾಡಿ ಜೋಳ, ಹುರುಳಿಕಾಳು ಬೆಳೆದು ಸರಿ ಸುಮಾರು ಎರಡು ವರೆ ಲಕ್ಷ ರೂ ಬೆಳೆ ಬೆಳೆದು ಲಾಭ ಮಾಡಿದ್ದಾರೆ

ಎಮ್.ಎಲ್.ಎ, ನಟಭಯಂಕರ ಇತ್ಯಾದಿ ಸಿನಿಮಾ ಮಾಡಿದ ಪ್ರಥಮ್ ಮೂರೂ ಸಿನಿಮಾದಲ್ಲಿ ಪಡೆದ ಅಷ್ಟೂ ಸಂಭಾವನೆಯ ದುಡ್ಡನ್ನು ಭೂಮಿ ಮೇಲೆ ಹಾಕಿ, ಈ ಬಾರಿ ನೀರಿನ ಅಭಾವವಿದ್ದರೂ ಸಹ ಭರ್ಜರಿ ಬೆಳೆ ಬೆಳೆದು ಲಾಭಗಳಿಸಿದ್ದಾರೆ.

ಇದರ ಪೂರ್ಣ ಜವಾಬ್ದಾರಿ ಹೊತ್ತವರು ಅವರ ತಂದೆ. ತಿಂಗಳಲ್ಲಿ ಮೂರು ಬಾರಿ ಊರಿಗೆ ಹೋಗಿ ವ್ಯವಸಾಯ ಏನಾಯ್ತು ಎಂಬುದರ ಕಡೆ ಪ್ರಥಮ್ ಗಮನವಿಟ್ಟಿದ್ದರು. ನಾಲ್ಕು ಎಕರೆ ಭೂಮಿಯಲ್ಲಿ ಹುರುಳಿ ಹಾಗೂ ಜೋಳದ ಭರ್ಜರಿ ಬೆಳೆ ಬೆಳೆದಿದ್ದಾರೆ.

ಪ್ರಥಮ್  ವ್ಯವಸಾಯ ಮಾಡ್ತೀನಿ ಅಂದಾಗ ಬಹಳಷ್ಟು ಮಂದಿ ನಕ್ಕವರೇ ಜಾಸ್ತಿ

ಬಹಳಷ್ಟು ಮಂದಿ ನಾನು ಊರಿನಲ್ಲಿ ವ್ಯವಸಾಯ ಮಾಡ್ತೀನಿ ಅಂದಾಗ ನಕ್ಕವರೇ ಜಾಸ್ತಿ. ಇವತ್ತು ಅವರೆಲ್ಲಾ call ಮಾಡಿ wish ಮಾಡಿದಾಗ ಆಗೋ ಸಂತೋಷ ಹೇಳೋಕಾಗ್ತಿಲ್ಲ....ಅದಕ್ಕಿಂತ ನಾನೇ ಬೆಳೆದಿರೋ ಬೆಳೆಯಿಂದ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದ ಪ್ರಥಮ್

ನನ್ನ ಕೈಲಾದ ಭೂದೇವಿಯ ಸೇವೆ ಮಾಡಿದ್ದೀನಿ. ನೀವು ಸಾಧ್ಯವಾದರೆ ಈ ಹಾಳಾದ್ ಬೆಂಗಳೂರು ಬಿಟ್ಟು ನಿಮ್ಮ ಊರಲ್ಲಿ ಭವಿಷ್ಯ ಅರಸಿ ಎಂದು ಕರೆ ಕೊಟ್ಟ ಒಳ್ಳೆ ಹುಡುಗ

loader