ದರ್ಶನ್ ಪರ ಧ್ವನಿ ಎತ್ತಿದ ಲಾಯರ್ ಜಗದೀಶ್. ನನ್ನ ಕೆಲಸ ಮಾಡುತ್ತಿರುವೆ ಈಗ ಅವರ ಫ್ಯಾಮಿಲಿ ಮುಂದೆ ಬರಬೇಕು ಎಂದ ಬಿಗ್ ಬಾಸ್ ಸ್ಪರ್ಧಿ...... 

ಸೋಷಿಯಲ್ ಮೀಡಿಯಾದಲ್ಲಿ ಪ್ರತಿಯೊಂದು ವಿಚಾರಕ್ಕೂ ಲೈವ್‌ ಬಂದು ಚರ್ಚೆ ಮಾಡುವ ಲಾಯರ್ ಜಗದೀಶ್ ಈಗಾಗಲೆ ದರ್ಶನ್ ಪರವಾಗಿ ಧ್ವನಿ ಎತ್ತಿದ್ದಾರೆ. ದರ್ಶನ್ ಪರ ಮಾತನಾಡಿದ್ದಕ್ಕೆ ಬಿಗ್ ಬಾಸ್‌ ಆಫರ್‌ ಪಡೆದಿದ್ದು ಎನ್ನುವ ಗಾಸಿಪ್ ಕೂಡ ಇತ್ತು.ಲಾಯರ್ ಜಗದೀಶ್ ಮತ್ತು ಸ್ಪರ್ಧಿ ರಂಜಿತ್ ಜಗಳವಾಡಿಕೊಂಡು ಎರಡನೇ ವಾರಕ್ಕೆ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಹೀಗಾಗಿ ಮಾಧ್ಯಮಗಳ ಜೊತೆ ಮತ್ತಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಿರುವ ಜಗದೀಶ್ ಅಭಿಮಾನಿಗ ಕೇಳಿದ ಪ್ರಶ್ನೆಗೆ ಬೋಲ್ಡ್ ಆಗಿ ಉತ್ತರಿಸಿದ್ದಾರೆ. 

ಖಾಸಗಿ ಕನ್ನಡ ಟಿವಿ ಸಂದರ್ಶನದಲ್ಲಿ ಲಾಯರ್‌ ಜಗದೀಶ್‌ರನ್ನು ದರ್ಶನ್ ಕೇಸ್ ವಿಚಾರವಾಗಿ ಪ್ರಶ್ನೆ ಮಾಡಲಾಗಿತ್ತು. ಆಗ 'ದರ್ಶನ್‌ಗೆ ಬೇಲ್ ಸಿಗಬೇಕು, ಸಿಗುವಂತೆ ನಾನು ಮಾಡಿಸುತ್ತೀನಿ ಆದರೆ ಇದುವರೆಗೂ ಯಾರೂ ಸಂಪರ್ಕ ಮಾಡಿಲ್ಲ. ದರ್ಶನ್ ಫ್ಯಾಮಿಲಿ ಅವರು ಸಂಪರ್ಕ ಮಾಡುವ ಮುನ್ನವೇ ನಾವು ಹೊರಗಡೆ ಸಾಕಷ್ಟು ಕೆಲಸಗಳನ್ನು ಮಾಡುತ್ತಿರುವೆ...ಈಗಾಗಲೆ ಪ್ರೊಟೆಸ್ಟ್‌ ಮಾಡಿಸಿದೆ, ಕ್ಯಾಂಪೇನ್ ಮಾಡಿಸಿದೆ, ಸೋಷಿಯಲ್ ಮೀಡಿಯಾದಲ್ಲಿ ಧ್ವನಿ ಎತ್ತಿರುವೆ ಅಲ್ಲದೆ ದರ್ಶನ್ ಕೊಲೆನೇ ಮಾಡಿಲ್ಲ ಎಂದು ಪೊಲೀಸ್ ತನಿಖೆ ವಿರುದ್ಧ ಧ್ವನಿ ಎತ್ತಿರುವ ಏಕೈಕಾ ವ್ಯಕ್ತಿ ಅಂದ್ರೆ ನಾನೇ' ಎಂದು ಲಾಯರ್ ಜಗದೀಶ್ ಮಾತನಾಡಿದ್ದಾರೆ.

ನಿಮ್ಮಂತೆ ನಿಮ್ಮ ಫ್ಯಾಮಿಲಿಯಲ್ಲೂ ಯಾರೂ ಇಲ್ಲ; ಅಪ್ಪು ನೆನೆದು ದೊಡ್ಡಮನೆ ಸೊಸೆ ಶ್ರೀದೇವಿ ಭಾವುಕ

'ನನ್ನ ಕೈಯಲ್ಲಿ ಆಗುವಷ್ಟು ನಾನು ಪ್ರಯತ್ನ ಮಾಡಿದ್ದೀನಿ ಏನೇ ಇದ್ದರೆ ಅವನ ಹಣೆ ಬರಹ. ವಿಜಯಲಕ್ಷ್ಮಿ ಜೊತೆ ದರ್ಶನ್‌ನ ನೋಡಬೇಕು ಅನ್ನೋ ಆಸೆ ನಮಗಿದೆ ಅಲ್ಲದೆ ದರ್ಶನ್ ಹೊರ ಬಂದ ಮೇಲೆ ವಿಜಯಲಕ್ಷ್ಮಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು...ಆತ ಸಂಜೆ ಆದ ಮೇಲೆ ಗ್ರೇ ಏರಿಯಾಗೆ ಹೋಗಬೇಡ ಶೆಡ್‌ ಕಡೆ ಹೋಗಬೇಡ ಅಂತ ನಿಮಗೆ ಸಿಕ್ಕರೆ ಹೇಳಿ' ಎಂದು ಜಗದೀಶ್ ಹೇಳಿದ್ದಾರೆ. ಜಗದೀಶ್ ಮಾತುಗಳು ವೈರಲ್ ಆಗಿದೆ. ಲಾಯರ್ ಜಗದೀಶ್ ಎಂಟ್ರಿ ಕೊಟ್ಟರೆ ದರ್ಶನ್‌ಗೆ ಸಿಗುವ ಬೇಲ್ ಕೂಡ ಸಿಗುವುದಿಲ್ಲ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. 

10 ರೂಪಾಯಿ ಕೊಟ್ಟು ಯಾರೂ ಮಲ್ಲಿಗೆ ಹೂ ತರಲ್ಲ ಅನ್ನೋ ಬೇಸರ ಜಯಂತಿ ಅಮ್ಮನಿಗಿತ್ತು: ಅನು

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೇಲೆ ನಟ ದರ್ಶನ್ ಜೈಲು ಸೇರಿದ್ದಾರೆ. 17 ಆರೋಪಿಗಳಲ್ಲಿ ಮೂವರಿಗೆ ಬೇಲ್ ಸಿಕ್ಕಿದೆ ಇನ್ನೂ ಕೆಲವರು ಕೋರ್ಟ್‌ನಲ್ಲಿ ಹೋರಾಡುತ್ತಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಜಾಲಿ ಮಾಡುತ್ತಿದ್ದ ವಿಡಿಯೋ ಮತ್ತು ಫೋಟೋ ವೈರಲ್ ಆಗುತ್ತಿದ್ದಂತೆ ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಲಾಗಿತ್ತು. ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್‌ ಆಗುತ್ತಿದ್ದಂತೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದೆ. ವಿಪರೀತ ಬೆನ್ನು ನೋವು ಇದ್ದ ಕಾರಣ ಸದ್ಯ ಚಿಕಿತ್ಸೆ ಪಡೆಯಲು ಮುಂದಾಗಿದ್ದಾರೆ. ದರ್ಶನ್‌ಗೆ ಆದಷ್ಟು ಬೇಗ ಬೇಲ್‌ ಸಿಗಲಿ ಎಂದು ಅಭಿಮಾನಿಗಳು ಪ್ರಾರ್ಥಣೆ ಮಾಡುತ್ತಿದ್ದಾರೆ.