IMDB ಲಿಸ್ಟ್‌ ಸೇರಿದ ಎರಡು ಕನ್ನಡ ಸಿನಿಮಾಗಳು. 777 ಚಾರ್ಲಿ 10ನೇ ಸ್ಥಾನ ಪಡೆದರೆ ಕಾಂತಾರ ಮತ್ತು ಕೆಜಿಎಫ್?

2022 ಅಂತ್ಯಕ್ಕೆ ಕೆಲವೇ ದಿನಗಳು ಉಳಿಸಿದೆ. ಈ ವರ್ಷ ಭಾರತದಲ್ಲಿ ಅತಿ ಹೆಚ್ಚು ಸಿನಿಮಾಗಳು ಬಿಡುಗಡೆಯಾಗಿದೆ ಅದರಲ್ಲೂ ಬಿಗ್ ಬಜೆಟ್‌ ಪ್ಯಾನ್ ಇಂಡಿಯಾ ಸಿನಿಮಾಗಳೇ ಹೆಚ್ಚು. 2022ರ ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳು ಮತ್ತು ವೆಬ್ ಸರಣಿಗಳ ಲಿಸ್ಟ್‌ನ IMDB ಪ್ರಕಟಿಸಿದೆ. ಈ ಸಾರಿನಲ್ಲಿ ಕನ್ನಡ ಸಿನಿಮಾ ಇರುವುದನ್ನು ನೋಡಿ ಕನ್ನಡಿಗರ ಸಂಭ್ರಮಿಸಿದ್ದಾರೆ. ಸಣ್ಣ ಅಂಕಿಅಂಶಗಳ ಮಾದರಿಗಳು ಅಥವಾ ವೃತ್ತಿಪರ ವಿಮರ್ಶಕರ ವಿಮರ್ಶೆಗಳ ಮೇಲೆ ತನ್ನ ವಾರ್ಷಿಕ ಶ್ರೇಯಾಂಕಗಳನ್ನು ಆಧರಿಸಿರುವುದಕ್ಕಿಂತ ಹೆಚ್ಚಾಗಿ, IMDb 200 ಮಿಲಿಯನ್‌ಗಿಂತಲೂ ಹೆಚ್ಚು ಮಾಸಿಕ ಸಂದರ್ಶಕರ ನೈಜ ಪುಟ ವೀಕ್ಷಣೆಗಳಿಂದ IMDb ತನ್ನ ಜನಪ್ರಿಯ ಚಲನಚಿತ್ರಗಳು ಮತ್ತು ವೆಬ್ ಸರಣಿಗಳ ಪಟ್ಟಿಯನ್ನು ನಿರ್ಧರಿಸುತ್ತದೆ.

ಲಿಸ್ಟ್‌ನಲ್ಲಿರುವ ಸಿನಿಮಾ:

1. RRR (ರೈಸ್‌ ರೋರ್‌ ರಿವೋಲ್ಟ್‌)
2. ದಿ ಕಾಶ್ಮೀರ್ ಫೈಲ್ಸ್‌
3. ಕೆಜಿಎಫ್ ಚಾಪ್ಟರ್ 2
4. ವಿಕ್ರಂ
5. ಕಾಂತಾರ 
6. ರಾಕೆಟ್ರಿ: ದಿ ನಂಬಿ ಎಫೆಕ್ಟ್‌
7. ಮೇಜರ್
8. ಸೀತಾ ರಾಮಂ
9. ಪೊನ್ನಿಯನ್ ಸೆಲ್ವನ್: ಭಾಗ ಒಂದು
10. 777 ಚಾರ್ಲಿ

ಮೊದಲ ಸ್ಥಾನದಲ್ಲಿ ಎಸ್‌ಎಸ್‌ ರಾಜಮೌಳಿ ನಿರ್ದೆಶನ ಮಾಡಿರುವ ಆರ್‌ಆರ್‌ಆರ್‌ ಸಿನಿಮಾ ಇದ್ದರೆ, ಮೂರನೇ ಸ್ಥಾನದಲ್ಲಿ ಕೆಜಿಎಫ್ ಚಾಪ್ಟರ್ 2, 5ನೇ ಸ್ಥಾನದಲ್ಲಿ ಕಾಂತಾರ ಹಾಗೂ 10ನೇ ಸ್ಥಾನದಲ್ಲಿ 777 ಚಾರ್ಲಿ ಸಿನಿಮಾ ಇದೆ. ದಿ ಕಾಶ್ಮೀರ್‌ ಫೈಲ್ಸ್‌ ಬಿಟ್ಟರೆ ಅತಿ ಹೆಚ್ಚು ಸೌತ್‌ ಸಿನಿಮಾಗಳು ಇರುವುದು ಸೌತ್ ಸಿನಿ ರಂಗಕ್ಕೆ ಹೆಮ್ಮೆ ವಿಚಾರ. 

ರಣವೀರ್ ನ್ಯೂಡ್‌ ಫೋಟೋಶೂಟ್ -ಲಾಲ್ ಸಿಂಗ್ ಚಡ್ಡಾ ಬಹಿಷ್ಕಾರ: 2022ರ ಬಾಲಿವುಡ್‌ ವಿವಾದಗಳು

ವೆಬ್‌ ಸರಣಿ:

1.ಪಂಚಾಯತ್
2.ಡೆಲ್ಲಿ ಕ್ರೈಂ
3.ರಾಕೆಟ್ ಬಾಯ್ಸ್
4.ಹ್ಯೂಮನ್
5.ಅಫರಾನ್
6.ಗುಲ್ಲಕ್
7.NCRಡೇಸ್
8.ಅಭಯ್
9.ಕ್ಯಾಂಪಸ್ ಡೈರೀಸ್
10.ಕಾಲೇಜ್ ರೊಮ್ಯಾನ್ಸ್

Celebrity Divorce: ಸಾಲು ಸಾಲು ಡಿವೋರ್ಸ್, 2022ರಲ್ಲಿ ಅಭಿಮಾನಿಗಳಿಗೆ ಶಾಕ್ ನೀಡಿದ ಜೋಡಿಗಳಿವರು

2022 ರ ಟಾಪ್ ಜನಪ್ರಿಯ ಭಾರತೀಯ ತಾರೆಯರು:

1. ಸಮಂತಾ ರುತ್ ಪ್ರಭ್ರು
2. ಹೃತಿಕ್ ರೋಷನ್
3. ಅಲ್ಲು ಅರ್ಜುನ್
ಕೆಜಿಎಫ್ ಸ್ಟಾರ್ ರಾಕಿಂಗ್ ಸ್ಟಾರ್ ಟಾಪ್ 10 ಲಿಸ್ಟ್ ನಲ್ಲಿದ್ದಾರೆ. ಅಂದಹಾಗೆ ಯಶ್ 10ನೇ ಸ್ಥಾನ ಅಲಂಕರಿಸಿದ್ದಾರೆ. ಇನ್ನೂ ವಿಶೇಷ ಎಂದರೆ IMDbಬಿಡುಗಡೆ ಮಾಡಿರುವ ಜನಪ್ರಿಯ ಸ್ಟಾರ್ಸ್ ಪಟ್ಟಿಯಲ್ಲಿ ತೆಲುಗಿನ ಮೂವರು ನಟರು ಸ್ಥಾನ ಪಡೆದಿದ್ದಾರೆ. ರಾಮ್ ಚರಣ್, ಜೂ.ಎನ್ ಟಿ ಆರ್ ಮತ್ತು ಅಲ್ಲು ಅರ್ಜುನ್ ಈ ಪಟ್ಟಿಯಲ್ಲಿ ಇರುವುದು ತೆಲುಗು ಅಭಿಮಾನಿಗಳಿಗೆ ಸಂತಸಕ್ಕೆ ಕಾರಣವಾಗಿದೆ.