Asianet Suvarna News Asianet Suvarna News

ಬೆಂಗಳೂರಿನಲ್ಲಿ ಒಳ್ಳೆ ಕುಟುಂಬ ಸಿಕ್ಕಿದೆ: ಮೇಘನಾ ಗಾಂವ್ಕರ್

ಬೆಂಗಳೂರು ನನ್ನ ಮನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಮೇಘನಾ ಗಾಂವ್ಕರ್‌ ಹಂಚಿಕೊಂಡ ಅಭಿಪ್ರಾಯವಿದು...  

Bengaluru is like home says kannada actress Meghana Gaonkar vcs
Author
First Published Feb 12, 2024, 4:31 PM IST

ಕನ್ನಡ ಚಿತ್ರರಂಗದ ಸಿಂಪಲ್ ಹುಡುಗಿ ಮೇಘನಾ ಗಾಂವ್ಕರ್ ಆಯ್ಕೆ ಮಾಡುವ ವಿಭಿನ್ನ ಪಾತ್ರಗಳ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ. ಮೂಲತಃ ಗುಲ್ಬರ್ಗ ಈ ಚೆಲುವೆ ಬೆಂಗಳೂರಿನ ಜೀವನ ಎಂಜಾಯ್ ಮಾಡುತ್ತಿದ್ದಾರೆ. ಒಂದಿಷ್ಟು ಅವಕಾಶಗಳನ್ನು ಗಳಿಸಿರುವುದು ಮಾತ್ರವಲ್ಲದೆ ಒಳ್ಳೆ ಸ್ನೇಹಿತರನ್ನು ಸಂಪಾದನೆ ಮಾಡಿದ್ದಾರೆ. 'ಈ ಸಿಟಿಯನ್ನು ನಾನು ತುಂಬಾನೇ ಇಷ್ಟ ಪಡುತ್ತೀನಿ. ಇಂದು ನಾನು ಹೇಗೆ ರೂಪಗೊಂಡಿದ್ದರು ಅದಕ್ಕೆ ಬೆಂಗಳೂರು ಕಾರಣ. ಇದು ನನ್ನ ವ್ಯಕ್ತಿತ್ವವನ್ನು ಮಾತ್ರ ಶೇಪ್ ಮಾಡಿದಲ್ಲ ನನಗೆ ಒಳ್ಳೆ ಸ್ನೇಹಿತರು ಮತ್ತು ಕುಟುಂಬ ಕೊಟ್ಟಿದೆ' ಎಂದು ಮೇಘನಾ ಗಾಂವ್ಕರ್ ಮಾತನಾಡಿದ್ದಾರೆ.

'ನಾನು ಟ್ರ್ಯಾವಲ್ ಮಾಡುವುದಕ್ಕೆ ತುಂಬಾನೇ ಇಷ್ಟ ಪಡುತ್ತೀನಿ ಆದರೆ ನಮ್ಮ ಬೆಂಗಳೂರು ಸಿಟಿ ಬರಲು ಕಾಯುತ್ತಿರುತ್ತೀನಿ. ಈಗ ಬೆಂಗಳೂರನ್ನು ನಮ್ಮ ಮನೆ ಎಂದು ಕರೆಯುತ್ತೀನಿ. ಎಂದು ಯಾರಾದರೂ ನಿಮ್ಮ ಸಿಟಿ ಹೆಸರು ಹೇಳಿ ಎಂದು ಕೇಳಿದರೆ ನಾನು ಮೊದಲು ಬೆಂಗಳೂರು ಎಂದು ಹೇಳುತ್ತೀನಿ. ಈ ಸಿಟಿಯಲ್ಲಿ ಏನು ಇಷ್ಟ ಆಗಲ್ಲ ಹೇಳಿ? ಪ್ರತಿಯೊಂದು ಇಷ್ಟ ಪಡುತ್ತೀನಿ' ಎಂದು ಮೇಘನಾ ಟೈಮ್ಸ್‌ ಆಫ್‌ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ರವಿಚಂದ್ರನ್‌ ನೋಡುವಾಗ ಯಾರಿವಳು ಹಾಡು ಕಣ್ಮುಂದೆ ಬರ್ತಿತ್ತು: ಮೇಘನಾ ಗಾಂವ್ಕರ್

'ನಾನು ಕಾಲೇಜ್‌ಗೆ ಕಾಲಿಟ್ಟಾಗ ಮೊದಲು ಸಿಕ್ಕ ಸ್ನೇಹಿತರೇ ರಚನಾ ಮತ್ತು ಪ್ರಿಯಾ. ಈಗಲೂ ನಾವು ತುಂಬಾ ಕ್ಲೋಸ್ ಆಗಿದ್ದೀವಿ. ವರ್ಷಗಳು ಕಳೆಯುತ್ತಿದ್ದಂತೆ ನಾವು ಕ್ಲೋಸ್ ಆಗಿದಲ್ಲದೆ ನಮ್ಮ ಕುಟುಂಬಗಳು ಕ್ಲೋಸ್ ಅಗಿದೆ. ಅಂದು ಒಟ್ಟಿಗೆ ಸಮಯ ಕಳೆದಷ್ಟು ಈಗ ಆಗುತ್ತಿಲ್ಲ ಆದರೆ ನಮ್ಮ ಬಾಂಡ್ ಹಾಗೆ ಇದೆ. ಬೆಂಗಳೂರಿನಲ್ಲಿ ನಾನು ಡ್ಯಾನ್ಸ್‌ ಕ್ಲಾಸ್‌ ಸೇರಿಕೊಂಡೆ. ಇಲ್ಲಿನ ಆರ್ಟ್‌ ಮತ್ತು ಥಿಯೇಟರ್‌ನಲ್ಲಿ ಕಲಿತು ನಮ್ಮ ಸಿಟಿಯನ್ನು ಎಕ್ಸ್‌ಪ್ಲೋರ್ ಮಾಡಿ ಸಿಟಿಯನ್ನು ಎಂಜಾಯ್ ಮಾಡಿರುವೆ. ಸಿಂಗಲ್ ಸ್ಕ್ರೀನ್‌ ಥಿಯೇಟರ್‌ ಆಗಿರುವ ರೆಕ್ಸ್‌ ಮತ್ತು ಉರ್ವಯಲ್ಲಿ ಸಿನಿಮಾ ನೋಡುತ್ತಿರುವೆ. ಸಾಕಷ್ಟು ಬುಕ್‌ ಅಂಗಡಿಗಳು ಮತ್ತು ಕೆಫೆಗಳಿಗೆ ಭೇಟಿ ನೀಡಿರುವೆ' ಎಂದಿದ್ದಾರೆ ಮೇಘನಾ ಗಾಂವ್ಕರ್. 

ಮೊದಲ ಕ್ರಶ್, ಲವ್ ಬಗ್ಗೆ ಗುಟ್ಟು ಬಿಚ್ಚಿಟ್ಟ ಮೇಘನಾ ಗಾಂವ್ಕರ್!

 

Follow Us:
Download App:
  • android
  • ios