ಗುರುರಾಜ್‌ ಕುಲಕರ್ಣಿ ನಿರ್ದೇಶನ, ನಿರ್ಮಾಣದ 'ದಿ ಜಡ್ಜ್‌ಮೆಂಟ್‌' ಸಿನಿಮಾದಲ್ಲಿ ಮೇಘನಾ ಗಾಂವ್ಕರ್ ಮುಖ್ಯ ಪಾತ್ರದಲ್ಲಿದ್ದಾರೆ. ಸಿನಿಮಾ ಬಗ್ಗೆ, ಪಾತ್ರದ ಬಗ್ಗೆ ಅವರ ಮಾತುಗಳು 

ದಿ ಜಡ್ಜ್‌ಮೆಂಟ್‌ನಲ್ಲಿ ನಿಮ್ಮ ಪಾತ್ರ?

ರೋಹಿಣಿ ಅನ್ನೋ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕಿ. ಇದೊಂದು ಸ್ಟ್ರಾಂಗ್‌ ಪಾತ್ರ.

ಆಗ್ಲೇ ಶೂಟಿಂಗ್‌ ಶುರುವಾದ ಹಾಗಿದೆ?

ಹೌದು. ನನಗೆ ಈ ಪಾತ್ರ ಬಂದಿದ್ದು ಕಳೆದ ವಾರ. ಆಗ ‘ಶಿವಾಜಿ ಸುರತ್ಕಲ್‌ 2’ ಸಿನಿಮಾ ಪ್ರಮೋಶನ್‌ನಲ್ಲಿ ಬ್ಯುಸಿ ಆಗಿದ್ದೆ. ಈ ವಾರವೇ ಶೂಟಿಂಗ್‌ ಇತ್ತು. ಇಷ್ಟುಕಡಿಮೆ ಅವಧಿ ಇರೋದು, ಸಿನಿಮಾ ಒಪ್ಪಿಕೊಳ್ಳೋದಾ ಬೇಡವಾ ಅನ್ನುವ ಗೊಂದಲ ಇತ್ತು. ಆದರೆ ನಿರ್ದೇಶಕ ಗುರುರಾಜ್‌ ಈ ಪಾತ್ರದ ಬಗ್ಗೆ ಎಷ್ಟುಪ್ಯಾಶನೇಟ್‌ ಆಗಿ ಮಾತಾಡಿದ್ರು ಅಂದ್ರೆ ನಾನು ಪೂರ್ಣ ಮನಸ್ಸಿಂದ ಒಪ್ಪಿಕೊಂಡೆ. ಸೋಮವಾರದಿಂದ ಶೂಟಿಂಗ್‌ ಶುರುವಾಯ್ತು. ಬೆಂಗಳೂರು ಹೊರವಲಯದಲ್ಲಿ ಚಿತ್ರೀಕರಣ ನಡೀತಿದೆ.

ಮೊದಲ ಕ್ರಶ್, ಲವ್ ಬಗ್ಗೆ ಗುಟ್ಟು ಬಿಚ್ಚಿಟ್ಟ ಮೇಘನಾ ಗಾಂವ್ಕರ್!

 ಶಿವಾಜಿ ಸುರತ್ಕಲ್‌ನಲ್ಲಿ ಡಿಸಿಪಿ ದೀಪಾ ಕಾಮತ್‌, ಇಲ್ಲಿ ಲೆಕ್ಚರರ್‌ ರೋಹಿಣಿ. ಇಂಥಾ ಪಾತ್ರಗಳನ್ನೇ ನೀವು ಆಯ್ಕೆ ಮಾಡುವುದಾ?

ಸಿನಿಮಾ ಒಪ್ಪಿಕೊಳ್ಳುವಾಗ ನಾನು ಮುಖ್ಯವಾಗಿ ಗಮನಿಸೋದು ಎರಡು ಅಂಶ. ಮೊದಲನೆಯದು ಕಥೆ, ಎರಡನೆಯದು ಪಾತ್ರ. ಇಂಥಾ ಪಾತ್ರಗಳೇ ಬೇಕು ಅಂದುಕೊಂಡವಳಲ್ಲ. ಒಳ್ಳೆಯ ಪಾತ್ರ ಮಾಡಬೇಕು, ಅದಕ್ಕೆ ನನ್ನ ಹಂಡ್ರೆಡ್‌ ಪರ್ಸೆಂಟ್‌ ಕೊಡಬೇಕು ಅನ್ನೋದಷ್ಟೇ ನನ್ನ ಆಸೆ.

ಬ್ಯೂಟಿ ಸೀಕ್ರೆಟ್‌ ರಿವೀಲ್ ಮಾಡಿದ ನಟಿ Meghana Gaonkar; ಸರಳ ಟಿಪ್ಸ್‌ ಇದು!

ರವಿಚಂದ್ರನ್‌ ಅವರನ್ನು ಚಿಕ್ಕಂದಿನಿಂದಲೇ ನೋಡಿಕೊಂಡು ಬೆಳೆದಿರುತ್ತೀರಿ. ಅವರ ಜೊತೆ ನಟಿಸುವಾಗ ಹೇಗಿತ್ತು ಅನುಭವ?

ಅವರೆದುರು ನಿಂತಾಗ, ಅವರು ಡೈಲಾಗ್‌ ಹೇಳುವಾಗ, ‘ರಾಮಾಚಾರಿ’ ಸಿನಿಮಾದ ‘ಯಾರಿವಳು ಯಾರಿವಳು..’ ಹಾಡೇ ಕಣ್ಮುಂದೆ ಬರುತ್ತಿತ್ತು. ರವಿಚಂದ್ರನ್‌ ಅಂದರೆ ಕನ್ನಡ ಚಿತ್ರರಂಗದ ಲೆಜೆಂಡ್‌. ಅವರ ಸಿನಿಮಾ ನೋಡುತ್ತ ಬೆಳೆದವಳು ನಾನು. ಅಂಥ ನಟನ ಜೊತೆ ತೆರೆ ಹಂಚಿಕೊಳ್ಳುವಾಗ ಖುಷಿ ಇದ್ದೇ ಇರುತ್ತೆ.