Bairagee Yathre: ಸ್ಟೆಪ್ ಹಾಕಿ ರಂಜಿಸಿದ ಕರುನಾಡ ಚಕ್ರವರ್ತಿ ಶಿವಣ್ಣ
ನಟ ಶಿವರಾಜ್‌ಕುಮಾರ್ ಅಭಿನಯದ ಬೈರಾಗಿ ಚಿತ್ರದ ಪ್ರಚಾರಕ್ಕೆ ಮೈಸೂರಿಗೆ ತೆರಳುವ ವೇಳೆ ಮಂಡ್ಯದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ಟೆಪ್ ಹಾಕಿ ಅಭಿಮಾನಿಗಳನ್ನು ರಂಜಿಸಿದರು.
ಮಂಡ್ಯ (ಜೂ.25): ನಟ ಶಿವರಾಜ್‌ಕುಮಾರ್ ಅಭಿನಯದ ಬೈರಾಗಿ ಚಿತ್ರದ ಪ್ರಚಾರಕ್ಕೆ ಮೈಸೂರಿಗೆ ತೆರಳುವ ವೇಳೆ ಮಂಡ್ಯದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ಟೆಪ್ ಹಾಕಿ ಅಭಿಮಾನಿಗಳನ್ನು ರಂಜಿಸಿದರು. ಬೆಂಗಳೂರಿನಿಂದ ಮೈಸೂರಿಗೆ ಚಿತ್ರದ ಪ್ರಚಾರ ವಾಹನದಲ್ಲಿ ತೆರಳುತ್ತಿದ್ದ ಶಿವರಾಜ್‌ಕುಮಾರ್ ಅವರನ್ನು ಅಭಿನಂದಿಸಲು ನೂರಾರು ಅಭಿಮಾನಿಗಳು ಜೆಸಿ ವೃತ್ತದಲ್ಲಿ ಕಾದುನಿಂತಿದ್ದರು. ಮಧ್ಯಾಹ್ನ 2 ಗಂಟೆಯ ಸಮಯಕ್ಕೆ ಬೈರಾಗಿ ಚಿತ್ರ ಪ್ರಚಾರ ವಾಹನದಲ್ಲಿ ಆಗಮಿಸಿದ ಶಿವರಾಜ್‌ಕುಮಾರ್ ಅವರಿಗೆ ಅಭಿಮಾನಿಗಳು ಭಾರೀ ಗಾತ್ರದ ಹೂವಿನಹಾರ ಹಾಕಿ ಅಭಿನಂದಿಸಿದರು.
ಜೆಸಿಬಿ ವಾಹನದ ಮೇಲೆ ನಿಂತು ನೆಚ್ಚಿನ ನಟನಿಗೆ ಪುಷ್ಪವೃಷ್ಟಿಮಾಡಿದರು. ವಾಹನದಿಂದ ಕೆಳಗಿಳಿದು ಬಂದ ಶಿವರಾಜ್‌ಕುಮಾರ್ ಅಲ್ಲೇ ಇದ್ದ ಡಾ.ರಾಜಕುಮಾರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಈ ಸಮಯದಲ್ಲಿ ಶಿವಣ್ಣನ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಫೋಟೋಗೆ ಫೋಸ್ ಕೊಟ್ಟು ಶಿವರಾಜ್‌ಕುಮಾರ್ ಅಭಿಮಾನಿಗಳ ಆಸೆಯನ್ನು ತಣಿಸಿದರು. ನಂತರ ಪ್ರಚಾರ ವಾಹನದ ಮೇಲೇರಿದ ಶಿವರಾಜ್‌ಕುಮಾರ್ ಅಭಿಮಾನಿಗಳ ಕೋರಿಕೆ ಮೇರೆಗೆ ಅಲ್ಲೇ ಡ್ಯಾನ್ಸ್ ಸ್ಟೆಪ್ ಹಾಕಿ ರಂಜಿಸಿದರು. ಚಿತ್ರವನ್ನು ನೋಡಿ ಬೆಂಬಲಿಸುವಂತೆ ಕೋರಿ ನಿರ್ಗಮಿಸಿದರು.
Shiva Rajkumar: 'ಬೈರಾಗಿ' ಟೀಸರ್‌ನಲ್ಲಿ ಹುಲಿಯಾಗಿ ಘರ್ಜಿಸಿದ ಕರುನಾಡ ಚಕ್ರವರ್ತಿ ಶಿವಣ್ಣ
ಪ್ರಿ-ರಿಲೀಸ್ ಈವೆಂಟ್: ಸದ್ಯ ಸಿನಿಮಾತಂಡ ಪ್ರಮೋಷನ್ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಪ್ರಿ ರಿಲೀಸ್ ಈವೆಂಟ್‌ಅನ್ನು ದೊಡ್ಡ ಮಟ್ಟದಲ್ಲಿ ಮಾಡಲು ಸಿನಿಮಾತಂಡ ಪ್ಲಾನ್ ಮಾಡಿದೆ. ಹೌದು, ಚಾಮರಾಜನಗರದಲ್ಲಿ ಬೈರಾಗಿ ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೆಯುತ್ತಿದೆ. ಜೂನ್ 25ಕ್ಕೆ ಪ್ರಿ ರಿಲೀಸ್ ಈವೆಂಟ್ ನಡೆಯಲಿದೆ ಎನ್ನಲಾಗಿದೆ. ಅಂದಹಾಗೆ 24 ರಂದು ರಾಮನಗರದಿಂದ ಮೈಸೂರುವರೆಗೆ ರೋಡ್ ಶೋ ಕೂಡ ಹಮ್ಮಿಕೊಳ್ಳಲಾಗಿದೆ. ಜುಲೈ 1ಕ್ಕೆ ಸಿನಿಮಾ ಬೈರಾಗಿ ಅದ್ದೂರಿಯಾಗಿ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.
Shiva Rajkumar: 'ಬೈರಾಗಿ' ಹಾಡು ಬಿಡುಗಡೆ ಮಾಡಿದ ದುನಿಯಾ ವಿಜಯ್
ಇನ್ನು 'ಟಗರು' (Tagaru) ಸಿನಿಮಾದ ನಂತರ ಮತ್ತೆ ಶಿವರಾಜ್‌ಕುಮಾರ್ ಹಾಗೂ ಡಾಲಿ ಧನಂಜಯ್ (Dhananjay) ಎದುರಾಗಿದ್ದಾರೆ. ವಿಜಯ್ ಮಿಲ್ಟನ್ (Vijay Milton) ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಬೈರಾಗಿ' ಸಿನಿಮಾದಲ್ಲಿ ಸೆಂಚ್ಯುರಿ ಸ್ಟಾರ್ ಮತ್ತು ಡಾಲಿ ಅಬ್ಬರಿಸಲಿದ್ದಾರೆ. ಪ್ರಮುಖವಾಗಿ 'ದಿಯಾ' ಖ್ಯಾತಿಯ ನಟ ಪೃಥ್ವಿ ಅಂಬರ್ (Prithvi Ambaar) ಅವರು ಸಹ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಗುರು ಕಶ್ಯಪ್ ಸಂಭಾಷಣೆ ಬರೆದಿದ್ದಾರೆ. ಕೃಷ್ಣ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣ ಸಾರ್ಥಕ್ 'ಬೈರಾಗಿ' ಚಿತ್ರವನ್ನು ನಿರ್ಮಿಸಿದ್ದಾರೆ. ರಾಜ್ಯಾದ್ಯಂತ ಜಗದೀಶ್ ಗೌಡ ಈ ಸಿನಿಮಾವನ್ನು ವಿತರಣೆ ಮಾಡಲಿದ್ದಾರೆ.