Asianet Suvarna News Asianet Suvarna News

Badava Rascal: ಟೈಟಲ್‌ ಟ್ರ್ಯಾಕ್‌ಗೆ ಟಪ್ಪಾಂಗುಚ್ಚಿ ಸ್ಟೆಪ್ ಹಾಕಿದ ಡಾಲಿ ಧನಂಜಯ್

ಡಾಲಿ ಧನಂಜಯ್‌ ನಟನೆಯ 'ಬಡವ ರಾಸ್ಕಲ್‌' ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರತಂಡ ಪ್ರಚಾರ ಕಾರ್ಯಗಳನ್ನು ಭರ್ಜರಿಯಾಗಿ ನಡೆಸುತ್ತಿದೆ. ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಇದೀಗ ಚಿತ್ರದ ಟೈಟಲ್ ಟ್ರ್ಯಾಕ್‌ ಬಿಡುಗಡೆಯಾಗಿದೆ.

badava rascal title track out starrer Dhananjay Amrutha Iyengar gvd
Author
Bangalore, First Published Dec 18, 2021, 6:10 PM IST
  • Facebook
  • Twitter
  • Whatsapp

ಸ್ಯಾಂಡಲ್‌ವುಡ್‌ನ (Sandalwood) ನಟ ರಾಕ್ಷಸ ಡಾಲಿ ಧನಂಜಯ್‌ (Dolly Dhananjay) ನಟನೆಯ 'ಬಡವ ರಾಸ್ಕಲ್‌' (Badava Rascal) ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರತಂಡ ಪ್ರಚಾರ ಕಾರ್ಯಗಳನ್ನು ಭರ್ಜರಿಯಾಗಿ ನಡೆಸುತ್ತಿದೆ. ಈಗಾಗಲೇ ಚಿತ್ರದ ಟ್ರೇಲರ್ (Trailer) ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿ, ಯೂಟ್ಯೂಬ್‌ ಟ್ರೆಂಡಿಂಗ್‌ನಲ್ಲಿ ಸ್ಥಾನವನ್ನು ಪಡೆದಿತ್ತು. ಹಾಗೂ ಚಿತ್ರದ 'ಉಡುಪಿ ಹೋಟೆಲು' ಮತ್ತು 'ಆಗಾಗ ನೆನಪಾಗುತಾಳೆ' ಹಾಡುಗಳು ಬಿಡುಗಡೆಯಾಗಿ ಸಿನಿಮಂದಿಯಿಂದ ಮೆಚ್ಚುಗೆಯನ್ನು ಪಡೆದಿದೆ. ಇದೀಗ ಚಿತ್ರದ ಟೈಟಲ್ ಟ್ರ್ಯಾಕ್‌ (Title Track) ಬಿಡುಗಡೆಯಾಗಿದೆ. 'ಬಂದ ನಮ್ಮ್ವೋನು ಕಾಮನ್ನು ಮ್ಯಾನ್ ಎಂಬ ಹಾಡನ್ನು ಚಿತ್ರತಂಡ ರಿಲೀಸ್ ಮಾಡಿದೆ.

ಈ ಹಾಡಿಗೆ ಭರ್ಜರಿ ಚೇತನ್ ಕುಮಾರ್ (Chethan Kumar) ಸಾಹಿತ್ಯ ರಚಿಸಿದ್ದು, ಸಂಜೀತ್ ಹೆಗ್ಡೆ (Sanjith Hegde) ಕಂಠಸಿರಿಯಲ್ಲಿ ಈ ಹಾಡು ಮೂಡಿಬಂದಿದೆ.  ವಾಸುಕಿ ವೈಭವ್ (Vasuki Vaibhav) ಟೈಟಲ್ ಟ್ರ್ಯಾಕ್ ಹಾಡಿಗೆ ಟಪ್ಪಾಂಗುಚ್ಚಿ ಟ್ಯೂನ್ ಸಂಯೋಜಿಸಿದ್ದಾರೆ. ಈ ಬಗ್ಗೆ ಧನಂಜಯ್ ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ಫ್ರೆಂಡ್ಶಿಪ್ಪೆ ರಿಲಿಜನ್ನು, ಫ್ರೆಂಡ್ಶಿಪ್ಪೆ ಎಮೋಷನ್ನು, ಫ್ರೆಂಡ್ಶಿಪ್ಪೆ ಸೊಲ್ಯೂಷನ್ನು, 'ಬಡವ ರಾಸ್ಕಲ್‌' ಚಿತ್ರದ ಟೈಟಲ್ ಟ್ರ್ಯಾಕ್‌ ಆನಂದ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ ಎಂದು ಬರೆದುಕೊಂಡು ಹಾಡಿನ ಪೋಸ್ಟರನ್ನು ಶೇರ್ ಮಾಡಿಕೊಂಡಿದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಧನಂಜಯ್ ಅವರ 'ಬಡವ ರಾಸ್ಕಲ್‌' ಚಿತ್ರವು ಇದೇ ಡಿಸೆಂಬರ್ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. 

Badava Rascal: ಶಂಕರ್ ಅಲಿಯಾಸ್ ಡಾಲಿ ಧನಂಜಯ್‌ ಚಿತ್ರದ ಟ್ರೇಲರ್ ರಿಲೀಸ್

'ಬಡವ ರಾಸ್ಕಲ್‌' ಚಿತ್ರಕ್ಕೆ ಶಂಕರ್‌ ಗುರು (Shankar Guru) ಆಕ್ಷನ್ ಕಟ್ ಹೇಳಿದ್ದು, ಅಮೃತ ಅಯ್ಯಂಗಾರ್‌ (Amrutha Iyengar) ಹಾಗೂ ನಾಗಭೂಷಣ್‌ (Nagabhushan) ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಧನಂಜಯ್ ಸ್ನೇಹಿತರಿಗಾಗಿ ಪ್ರಾಣ ಬೇಕಾದರೂ ಕೊಡೋಕೆ ಸಿದ್ಧನಿರುವ ಮಧ್ಯಮ ವರ್ಗದ ಯುವಕನಾಗಿ ಕಾಣಿಸಿಕೊಂಡಿದ್ದು, ಆಟೋ ಓಡಿಸುವ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ. ತನ್ನ ಗೆಳೆಯರಿಗಾಗಿ ಏನು ಮಾಡೋಕೂ ಧನಂಜಯ್ ರೆಡಿ ಇರುತ್ತಾನೆ. ವಿಶೇಷವಾಗಿ ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್‌ ಕೊನೆಯಲ್ಲಿ 'ಫಿಲ್ಮ್ ಹೋಗೋಣ್ವಾ..? ಹೇ ಎಲ್ಲ ನೋಡಿದ್ದಿವಲ್ಲ ಪಾರ್ಕ್​ಗೆ ಹೋಗೋಣ್ವಾ..? ನಾವೇನ್ ಪೊದೆ ಪ್ರೇಮಿಗಳಾ ಪಾರ್ಕ್​ಗೆ ಹೋಗೋಕೆ? ಅಲ್ವಾ...ಎಣ್ಣೆ ಹೊಡೆಯೋಣ..? ನಾ ಯಾವತ್ತಾದ್ರೂ ನಿನ್ನ್ ಮಾತ್ ಮೀರಿದ್ದೀನಾ ಎಂಬ ಡೈಲಾಗ್​​ಗಳು ಸಿನಿರಸಿಕರಿಗೆ ಸಖತ್​ ಕಿಕ್​​​ ಕೊಡುತ್ತಿವೆ. 
 

 
 
 
 
 
 
 
 
 
 
 
 
 
 
 

A post shared by Dhananjaya (@dhananjaya_ka)


'ಬಡವ ರಾಸ್ಕಲ್‌' ಮಿಡಲ್‌ ಕ್ಲಾಸ್‌ ಮಾಸ್‌ ಎಂಟರ್‌ಟೈನರ್‌. ಮಿಡಲ್‌ ಕ್ಲಾಸ್‌ ಮಕ್ಕಳಿಗೆ ತಂದೆ ತಾಯಿನೇ ಹೀರೋ ಹೀರೋಯಿನ್‌. ಇಂಥಾ ಪ್ರತೀ ಹುಡುಗನ ಲೈಫಲ್ಲೂ ಎಜುಕೇಶನ್‌ ಮುಗಿಸಿದ, ಕೆಲಸ ಇನ್ನೂ ಸಿಗದ ಪೇಸ್‌ ಬಹಳ ಚಾಲೆಂಜಿಂಗ್‌. ಆ ಸೂಕ್ಷ್ಮ ಎಳೆಯಿಟ್ಟುಕೊಂಡು ಮಾಡಿದ ಚಿತ್ರವಿದು. ನಗಿಸುವ, ಕಣ್ಣಂಚು ಒದ್ದೆ ಮಾಡೋ ಈ ಸಿನಿಮಾವನ್ನು ಗೆಳೆಯರನ್ನು ಬೆಳೆಸಿ ನಾನೂ ಬೆಳೆಯಬೇಕು ಅಂತ ಮಾಡಿದ್ದು. ಬಡವ ರಾಸ್ಕಲ್‌ ನಮ್ಮನ್ನೆಲ್ಲ ಬೆಳೆಸುವ ಚಿತ್ರವಾಗಲಿ' ಎಂದು ಧನಂಜಯ್ ಇತ್ತೀಚೆಗೆ ನಡೆದ ಚಿತ್ರದ ಟ್ರೈಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ತಿಳಿಸಿದರು.

ಶಂಕರ್ ಅಲಿಯಾಸ್ 'ಬಡವ ರಾಸ್ಕಲ್': ಡಾಲಿ ಧನಂಜಯ್ ಹೊಸ ಅವತಾರ!

ಇನ್ನು 'ಡಾಲಿ ಪಿಕ್ಚರ್' (Dolly Picture) ಬ್ಯಾನರ್‌ನಲ್ಲಿ ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಿಸುತ್ತಿರುವ 'ಬಡವ ರಾಸ್ಕಲ್‌' ಚಿತ್ರಕ್ಕೆ ಶಂಕರ್‌ ಗುರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಈ ಚಿತ್ರದಲ್ಲಿ 'ಮಠ' ಗುರುಪ್ರಸಾದ್‌ (Guruprasad) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಕತೆಗೆ ತಿರುವು ಕೊಡುವ ಪಾತ್ರ ಇದಾಗಿದ್ದು, ಚಿತ್ರದಲ್ಲಿನ ಅವರ ಗೆಟಪ್‌ ಈ ಹಿಂದೆ ರಿವೀಲ್ ಆಗಿತ್ತು. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ವಾಸುಕಿ ವೈಭವ್‌ (Vasuki Vaibhav) ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಪ್ರೀತ ಜಯರಾಮನ್‌ ಛಾಯಾಗ್ರಹಣ, ನಿರಂಜನ್‌ ದೇವರಮನೆ ಸಂಕಲನ ಹಾಗೂ ವಿನೋದ್‌ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
 

Follow Us:
Download App:
  • android
  • ios