Asianet Suvarna News Asianet Suvarna News

Badava Rascal Trailer: ವಿಡಿಯೋ ಮೂಲಕ 'ಅಡಚಣೆಗಾಗಿ ಕ್ಷಮೆ'ಯಾಚಿಸಿದ ಧನಂಜಯ್‌

ಸ್ಯಾಂಡಲ್‌ವುಡ್‌ನ ಡಾಲಿ ಧನಂಜಯ್‌ ನಟನೆಯ 'ಬಡವ ರಾಸ್ಕಲ್‌' ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರತಂಡ ಪ್ರಚಾರ ಕಾರ್ಯಗಳನ್ನು ಭರ್ಜರಿಯಾಗಿ ನಡೆಸುತ್ತಿದೆ. ಈ ನಡುವೆ ಡಿಸೆಂಬರ್ 9ರಂದು ರಿಲೀಸ್ ಆಗಬೇಕಿದ್ದ ಚಿತ್ರದ ಟ್ರೇಲರ್‌ನ್ನು ಚಿತ್ರತಂಡ ಮುಂದೂಡಿದೆ.

Badava Rascal Movie New Tariler Release Date Announced Starrer Dhananjay gvd
Author
Bangalore, First Published Dec 8, 2021, 5:19 PM IST

ಸ್ಯಾಂಡಲ್‌ವುಡ್‌ನ ನಟ ರಾಕ್ಷಸ ಡಾಲಿ ಧನಂಜಯ್‌ ನಟನೆಯ 'ಬಡವ ರಾಸ್ಕಲ್‌' ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರತಂಡ ಪ್ರಚಾರ ಕಾರ್ಯಗಳನ್ನು ಭರ್ಜರಿಯಾಗಿ ನಡೆಸುತ್ತಿದೆ. ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಧನಂಜಯ್ ಅವರ 'ಬಡವ ರಾಸ್ಕಲ್‌' ಚಿತ್ರವು ಇದೇ ಡಿಸೆಂಬರ್ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಶಂಕರ್‌ ಗುರು ನಿರ್ದೇಶನ ಮಾಡಿದ್ದು, ಅಮೃತ ಅಯ್ಯಂಗಾರ್‌ (Amrutha Iyengar) ಹಾಗೂ ನಾಗಭೂಷಣ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಧನಂಜಯ್ ತಮ್ಮ ಇನ್‌ಸ್ಟಾಗ್ರಾಮ್‌ (Instagram) ಖಾತೆಯಲ್ಲಿ 'ಬಡವ ರಾಸ್ಕಲ್' ಚಿತ್ರದ ಟ್ರೇಲರ್ ಡಿಸೆಂಬರ್ 9 ರಂದು ಮಧ್ಯಾಹ್ನ 12:20ಕ್ಕೆ ಬಿಡುಗಡೆಯಾಗಲಿದೆ ಎಂದು ಪೋಸ್ಟ್ ಮಾಡಿದ್ದರು. ಆದರೆ ಇದೀಗ ಅಂದು ಚಿತ್ರದ ಟ್ರೇಲರ್ (Trailer) ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಧನಂಜಯ್ ತಿಳಿಸಿದ್ದಾರೆ.

ಈ ಬಗ್ಗೆ ಧನಂಜಯ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 'ಡಿಸೆಂಬರ್ 9ಕ್ಕೆ ರಿಲೀಸ್ ಆಗಬೇಕಿದ್ದ ನಮ್ಮ 'ಬಡವ ರಾಸ್ಕಲ್' ಸಿನಿಮಾದ ಟ್ರೇಲರ್  ಡಿಸೆಂಬರ್ 13ಕ್ಕೆ ರಿಲೀಸ್ ಆಗಲಿದೆ. ಅಡಚಣೆಗಾಗಿ ಕ್ಷಮೆಯಿರಲಿ. ನಿಮ್ಮ ಪ್ರೀತಿ ಹೀಗೆ ಇರಲಿ ಎಂದು ಬರೆದುಕೊಂಡು ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಧನಂಜಯ್ 'ಎಲ್ಲರಿಗೂ ನಮಸ್ಕಾರ, ಮೊದಲಿಗೆ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ 'ಬಡವ ರಾಸ್ಕಲ್‌' ಚಿತ್ರದ ಪ್ರಮೋಷನ್‌ ತುಂಬಾ ಚೆನ್ನಾಗಿ ಮುಂದಕ್ಕೆ ತಗೊಂಡು ಹೋಗುತ್ತಿದ್ದೀರಾ. ಅಭಿಮಾನಿಗಳೆಲ್ಲಾ ಕ್ರಿಯೆಟೀವ್ ಆಗಿ, ಇನ್ವಾಲ್ವ್ ಆಗಿ ಎಲ್ಲ ಕಡೆ ಪ್ರಮೋಟ್ ಮಾಡುತ್ತಿದ್ದೀರಾ. ಇದೇ ಡಿಸೆಂಬರ್ 24ರಂದು 'ಬಡವ ರಾಸ್ಕಲ್‌' ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಹಾಗೆ ನಮ್ಮ ಚಿತ್ರದ ಟ್ರೇಲರ್ ಡಿಸೆಂಬರ್ 9ರಂದು ಆನಂದ್ ಆಡಿಯೋ ಯೂಟ್ಯೂಬ್‌ ಚಾನೆಲ್‌ನಲ್ಲಿ ರಿಲೀಸ್ ಆಗಬೇಕಿತ್ತು. ನಾನಾ ಕಾರಣಗಳಿಂದ ಅಂದರೆ ಟೆಕ್ನಿಕಲ್ ಇಶ್ಯೂಗಳಿಂದ ಡಿಸೆಂಬರ್ 13ನೇ ತಾರೀಖು 'ಬಡವ ರಾಸ್ಕಲ್‌' ಚಿತ್ರದ ಟ್ರೇಲರ್ ಬಿಡುಗಡೆ ಮಾಡುತ್ತಿದ್ದೀವಿ. ಅಡಚಣೆಗಾಗಿ ಕ್ಷಮೆಯಿರಲಿ. ನಿಮ್ಮ ಪ್ರೀತಿ ಹೀಗೆ ಇರಲಿ ಎಂದು ತಿಳಿಸಿದ್ದಾರೆ.

ಶಂಕರ್ ಅಲಿಯಾಸ್ 'ಬಡವ ರಾಸ್ಕಲ್': ಡಾಲಿ ಧನಂಜಯ್ ಹೊಸ ಅವತಾರ!

'ಬಡವ ರಾಸ್ಕಲ್' ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡವು ಜನಸಾಮಾನ್ಯರನ್ನೇ ಬಳಸಿಕೊಂಡು ವಿಭಿನ್ನವಾಗಿ ಹೆಜ್ಜೆ ಇಟ್ಟಿದೆ. ಶಾಲಾ ಮಕ್ಕಳಿಂದ ಹಿಡಿದು ತರಕಾರಿ ಅಂಗಡಿ, ಮಾಂಸದ ಅಂಗಡಿ, ದಿನಸಿ ಅಂಗಡಿ, ಆಸ್ಪತ್ರೆ ರಶೀದಿ ಚೀಟಿ, ಎಳನೀರು ಗಾಡಿ, ಕಾರು ಗ್ಯಾರೇಜ್, ಬಿರಿಯಾನಿ ಹೋಟೆಲ್‌, ಆಟೋ ಚಾಲಕರವರೆಗೂ ಸೇರಿದಂತೆ ಹೀಗೆ ಎಲ್ಲೆಂದರಲ್ಲಿ ಇದೀಗ 'ಬಡವ ರಾಸ್ಕಲ್‌' ಪ್ರೊಮೋಷನ್ಸ್‌ ನಡೆಯುತ್ತಿದೆ. 'ಡಿ.24ಕ್ಕೆ ಬಡವ ರಾಸ್ಕಲ್‌' ಎನ್ನುವ ಸ್ಲೇಟ್‌ ಫಲಕ ಎಲ್ಲೆಡೆ ರಾರಾಜಿಸುತ್ತಿದೆ. ಈ ಹಿಂದೆ ಚಿತ್ರತಂಡ ಚಿತ್ರದ ಗ್ಲಿಂಪ್ಸ್ ವಿಡಿಯೋವನ್ನು ಬಿಡುಗಡೆ ಮಾಡಿತ್ತು. ವಿಡಿಯೋದಲ್ಲಿ ಧನಂಜಯ್, ಶಂಕರ್ ಅಲಿಯಾಸ್ ಬಡವ ರಾಸ್ಕಲ್... ಎಂದು ಮಾಸ್ ಎಂಟ್ರಿ ಕೊಟ್ಟಿದ್ದು, ಜೊತೆಯಲ್ಲಿ ಪಿಟ್ಟ, ಪ್ಯಾಕೆಟ್, ಕಬಾಬ್, ಬೆಂಕಿ,  ಸಣ್ಣಪ್ಪ, ಡೌನ್ ಟು ಅರ್ಥ್, ನಾಗ ಎಂಬ ಪಾತ್ರಗಳ ಪರಿಚಯವಿತ್ತು. 

Badava Rascal: ಟ್ರೇಲರ್‌ ರಿಲೀಸ್ ಬಗ್ಗೆ ಮಾಹಿತಿ ತಿಳಿಸಿದ ಡಾಲಿ ಧನಂಜಯ್

ಇನ್ನು 'ಡಾಲಿ ಪಿಕ್ಚರ್' (Dolly Picture) ಬ್ಯಾನರ್‌ನಲ್ಲಿ ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ'ಮಠ' ಗುರುಪ್ರಸಾದ್‌ (Guruprasad) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಕತೆಗೆ ತಿರುವು ಕೊಡುವ ಪಾತ್ರ ಇದಾಗಿದ್ದು, ಚಿತ್ರದಲ್ಲಿನ ಅವರ ಗೆಟಪ್‌ ಈ ಹಿಂದೆ ರಿವೀಲ್ ಆಗಿತ್ತು. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ವಾಸುಕಿ ವೈಭವ್‌ (Vasuki Vaibhav) ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಹಾಗೂ 'ಬಡವ ರಾಸ್ಕಲ್' ಚಿತ್ರಕ್ಕೆ ಪ್ರೀತ ಜಯರಾಮನ್‌ ಛಾಯಾಗ್ರಹಣ, ನಿರಂಜನ್‌ ದೇವರಮನೆ ಸಂಕಲನ ಹಾಗೂ ವಿನೋದ್‌ ಸಾಹಸ ನಿರ್ದೇಶನವಿದೆ. ಅಲ್ಲದೇ ಅಲ್ಲು ಅರ್ಜುನ್ (Allu Arjun) ಅಭಿನಯದ 'ಪುಷ್ಪ' (Pushpa) ಚಿತ್ರದಲ್ಲಿ ಧನಂಜಯ್ 'ಜಾಲಿ' ಹೆಸರಿನ ಪಾತ್ರ ನಿರ್ವಹಿಸಿದ್ದು, ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿತ್ತು.
 

 
 
 
 
 
 
 
 
 
 
 
 
 
 
 

A post shared by Dhananjaya (@dhananjaya_ka)

Follow Us:
Download App:
  • android
  • ios