ಸ್ಯಾಂಡಲ್‌ವುಡ್‌ ರಾಕಿಂಗ್ ಸ್ಟಾರ್ ಯಶ್ ಹಾಗೂ ಸಿಂಡ್ರೆಲಾ ರಾಧಿಕಾ ಪಂಡಿತ್ ಪುತ್ರಿ ಐರಾಗೆ 2ನೇ  ಜನ್ಮ ದಿನದ ಸಂಭ್ರಮ. ಐರಾ ಬಾಲ್ಯದಿಂದ ಇಂದಿನವರೆಗೂ ಸೆರೆ ಹಿಡಿದ ಪ್ರತಿಯೊಂದೂ ಡಿಫರೆಂಟ್ ಫೋಟೋಗಳನ್ನು ರಾಧಿಕಾ ಪಂಡಿತ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

ರಾಧಿಕಾ ಪಂಡಿತ್ ಬಾಲ್ಯದ ಫೋಟೋ; ಯಥರ್ವ್‌ ಇಬ್ಬರನ್ನೂ ಹೋಲುತ್ತಾನಾ? 

'ನೀನು ನಮಗೆ ಜೀವನದಲ್ಲಿ ಸಂತೋಷ ನೀಡಿರುವೆ. ಹ್ಯಾಪಿ ಬರ್ತಡೇ ಲಿಟಲ್ ಏಂಜೆಲ್. ದಯವಿಟ್ಟು ಇಷ್ಟು ಬೇಗ ದೊಡ್ಡವಳಾಗಬೇಡ' ಎಂದು ರಾಧಿಕಾ ಪಂಡಿತ್ ಬರೆದಿದ್ದಾರೆ.  ಯಶ್ ಹಾಗೂ ರಾಧಿಕಾ ಅಭಿಮಾನಿ ಬಳಗ ಕಾಮೆಂಟ್‌ನಲ್ಲಿ ಶುಭ ಹಾರೈಸಿದ್ದಾರೆ.  ಪುಟ್ಟು ಕಂದಮ್ಮ ಐರಾ ಎಂದೂ ನೋಡಿರದ ತುಂಟತನದ ಫೋಟೋಗಳನ್ನು ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 

 

ಐರಾ ಮೊದಲ ಹುಟ್ಟುಹಬ್ಬವನ್ನು ಫನ್‌ ವರ್ಲ್ಡ್‌ನಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲಾಗಿತ್ತು. ಎರಡನೇ ಹುಟ್ಟುಹಬ್ಬ ಸಂಭ್ರಮ ಹೇಗಿರುತ್ತದೆ ಎಂಬ ಕುತೂಹಲ ಅಭಿಮಾನಿಗಳದ್ದು. ಇದುವರೆಗೂ ಯಶ್ ಹಾಗೂ ರಾಧಿಕಾ ಶೇರ್ ಮಾಡಿಕೊಂಡಿರುವ ಐರಾ ಪ್ರತಿಯೊಂದೂ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಸೆಲೆಬ್ರಿಟಿ-ಸ್ಟಾರ್ ಕಿಡ್ ಪಟ್ಟಿಯಲ್ಲಿ ಐರಾಳದ್ದೇ ಮೊದಲ ಸ್ಥಾನ ಎನ್ನಬಹುದು.

ರಾಧಿಕಾ ಮನೆ ದೀಪಾವಳಿ; ಮೂರು ವರ್ಷಗಳ ಸಂಭ್ರಮ ಹೇಗಿತ್ತು ನೋಡಿ! 

ಕಳೆದ ತಿಂಗಳು ಪುತ್ರ ಯಥರ್ವ್‌ ಮೊದಲ ಹುಟ್ಟುಹಬ್ಬವನ್ನು ಗೋವಾದಲ್ಲಿ ಆಚರಿಸಲಾಗಿತ್ತು. ಪ್ರೈವೆಟ್ ಹಡಗು ಪಡೆದು, ಆಪ್ತರು ಮಾತ್ರ ಭಾಗಿಯಾಗಿ ಆಚರಣೆ ಮಾಡಿದ್ದರು. ಈ ವಿಡಿಯೋ ಕೂಡ ವೈರಲ್ ಆಗಿದ್ದು ಇಬ್ಬರು ಮಕ್ಕಳು ಅದೃಷ್ಟವಂತರು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದರು.