ಸಂಸ್ಥೆಯ 43ನೇ ವಾರ್ಷಿಕೋತ್ಸವ ಜತೆಗೆ 19ನೇ ವರ್ಷದ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ನಟಿ ಹಾಗೂ ಮಾಜಿ ಸಚಿವೆ ಉಮಾಶ್ರೀ, ಹಿರಿಯ ನಿರ್ದೇಶಕ ಬರಗೂರು ರಾಮಚಂದ್ರಪ್ಪ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ ಆರ್‌ ಜೈರಾಜ್‌, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್‌ ಕುಮಾರ್‌ ಪಿ ಯು, ಹಿರಿಯ ಪತ್ರಕರ್ತರಾದ ಡಾ ವಿಜಯಾ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಸಾಕ್ಷಿ ಆದರು. ಕಾರ್ಯಕ್ರಮದ ಅಂಗವಾಗಿ ಶ್ರೀಧರ್‌ ಸಾಗರ್‌ ಅವರ ತಂಡದಿಂದ ಸ್ಯಾಕ್ಸೊಫೋನ್‌ ವಾದನ ನಡೆಯಿತು.

ಇನ್ನೂ ನನಸಾಗಿಲ್ಲ ಹಾಜಬ್ಬನ ಪಿಯು ಕಾಲೇಜು ಕನಸು

ರಾಘವೇಂದ್ರ ಚಿತ್ರವಾಣಿ ಹೆಸರಿನಲ್ಲಿ ನೀಡುವ ಎರಡು ಪ್ರಶಸ್ತಿ ಸೇರಿದಂತೆ ಡಾ ರಾಜ್‌ಕುಮಾರ್‌ ಕುಟುಂಬ, ಹಿರಿಯ ನಟಿ ಭಾರತಿ ವಿಷ್ಣುವರ್ದನ್‌, ಜಯಮಾಲ ಹಾಗೂ ಎಚ್‌ ಎಂ ರಾಮಚಂದ್ರ ದಂಪತಿ, ಎಂ ಎಸ್‌ ರಾಮಯ್ಯ ಮೀಡಿಯಾ ಆಂಡ್‌ ಎಂಟರ್‌ಟೈನ್‌ಮೆಂಟ್‌, ಡಾ ಎಚ್‌ ಕೆ ನರಹರಿ ಬಿ ಸುರೇಶ್‌ ಹೀಗೆ ಹಲವರು ಚಿತ್ರರಂಗದ ಬೇರೆ ಬೇರೆ ವಿಭಾಗಗಳು ಹಾಗೂ ಸಿನಿಮಾ ಪತ್ರಿಕೋದ್ಯಮದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತ ಬಂದಿದ್ದಾರೆ.

23ನೇ ವಯಸ್ಸಿನಿಂದಲೂ ಗಿಡ ನೆಡುತ್ತಲೇ ಇದ್ದಾರೆ 72 ವರ್ಷದ ತುಳಸಿಗೌಡ

ನಿರ್ಮಾಪಕ ಕೆ ಪ್ರಭಾಕರ್‌, ಪತ್ರಕರ್ತೆ ತುಂಗಾ ರೇಣುಕಾ, ಗಾಯಕಿ ಪಿ ಸುಶೀಲ, ಎಸ್‌ ಉಮೇಶ್‌, ನಟಿ ಪ್ರಮೀಳಾ ಜೋಷಾಯ್‌, ಸಂಗೀತ ನಿರ್ದೇಶಕ ಸಾಗರ್‌ ಗುರುರಾಜ್‌, ನಟ ಶ್ರೀನಿವಾಸ ಪ್ರಭು, ನಿರ್ದೇಶಕರಾದ ಪಿ ಶೇಷಾದ್ರಿ, ರಮೇಶ್‌ ಇಂದಿರಾ, ರೂಪಾ ರಾವ್‌, ಪೋಷಕ ನಟ ರಮೇಶ್‌ ಭಟ್‌, ಗೀತ ರಚನೆಕಾರ ಕಿನಾಲ್‌ ರಾಜ್‌ ಅವರು 2020ನೇ ಸಾಲಿನ ರಾಘವೇಂದ್ರ ಚಿತ್ರವಾಣಿ ಹೆಸರಿನಲ್ಲಿ ನೀಡುವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.