ನಟ ಕಿಚ್ಚ ಸುದೀಪ್ ಅವರು ತಮ್ಮ 25 ವರ್ಷಗಳ ಸಿನಿಮಾ ಪ್ರಯಾಣದ ಸವಿ ನೆನಪಿನ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಿಕೊಂಡರು.
ಭಾನುವಾರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಸುದೀಪ್ ಅವರು, ಕಳೆದ 25 ವರ್ಷಗಳ ಸಿನಿ ಪಯಣವನ್ನು ನೆನಪಿಸಿಕೊಂಡರು. ತಮ್ಮ ಮೊದಲ ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಮೊದಲ ಶೋ ಕಂಡ ಖುಷಿಯಿಂದ ಹಿಡಿದು ಇಂದಿನ ಬುಜ್‌ರ್ ಖಲೀಫಾವರೆಗೂ ನಡೆದು ಬಂದ ಹಾದಿಯನ್ನು ಸಂಕ್ಷಿಪ್ತವಾಗಿ ಹೇಳಿದರು. ಜೊತೆಗೆ ಈ ಬೆಳವಣಿಗೆಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಬೆಳವಣಿಗೆಯ ಪ್ರತಿ ಹಂತದಲ್ಲೂ ಕೈ ಹಿಡಿಯುತ್ತಿರುವ ಚಿತ್ರೋದ್ಯಮ, ಪ್ರೇಕ್ಷಕರು, ಮಾಧ್ಯಮಗಳು ಹಾಗೂ ಸ್ನೇಹಿತರು ಇವರೆಲ್ಲರೂ ನನ್ನ 25 ವರ್ಷದ ಸಿನಿಮಾ ಪಯಣದಲ್ಲಿ ಪಾಲುದಾರರು ಎಂದು ತಿಳಿಸಿದರು.
ದುಬೈನ ಬುರ್ಜ್ ಖಲೀಫಾದಲ್ಲಿ ಕನ್ನಡ ಧ್ವಜ: ಕಿಚ್ಚ ಸಿನಿ ಜರ್ನಿಗೆ 25 ವರ್ಷ
ಈ ಸಂದರ್ಭದಲ್ಲಿ ನಟ ಸುದೀಪ್ ಅವರನ್ನು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಪ್ರಧಾನ ಸಂಪಾದಕರಾದ ರವಿ ಹೆಗಡೆ ಹಾಗೂ ಕನ್ನಡಪ್ರಭ ಪುರವಣಿ ಪ್ರಧಾನ ಸಂಪಾದಕರಾದ ಗಿರೀಶ್ ರಾವ್ ಹತ್ವಾರ್ (ಜೋಗಿ) ಅವರು ಹೂಗುಚ್ಛ ನೀಡಿ ಅಭಿನಂದಿಸಿದರು. ಸಮಾರಂಭದಲ್ಲಿ ‘ವಿಕ್ರಾಂತ್ ರೋಣ’ ಚಿತ್ರತಂಡ, ಸುದೀಪ್ ಅವರ ಆತ್ಮೀಯ ಸ್ನೇಹಿತರು, ಚಿತ್ರರಂಗದವರು ಉಪಸ್ಥಿತರಿದ್ದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 8, 2021, 9:45 AM IST