ಅತ್ತೆ ಮತ್ತು ಅಪ್ಪು ಅವರಿಂದ ಕಲಿತು ನಿರ್ಮಾಣ ಸಂಸ್ಥೆ ನಡೆಸುತ್ತಿರುವೆ. ಯಶಸ್ಸಿನ ಗುಟ್ಟು ಹಂಚಿಕೊಂಡ ಅಶ್ವಿನಿ ಪುನೀತ್....
ಪಿಆರ್‌ಕೆ ಸಂಸ್ಥೆ ನಿರ್ಮಾಣ ಮಾಡಿರುವ ಆಚಾರ್ ಆಂಡ್ ಕೋ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಸೂಪರ್ ಹಿಟ್ ಆಗಿದ್ದು ಪಕ್ಕಾ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಹೊಂದಿದೆ. ಈ ಸಕ್ಸಸ್ ಮೀಟ್‌ನಲ್ಲಿ ಮಾಧ್ಯಮಗಳ ಜೊತೆ ದೊಡ್ಡಮನೆ ಸೊಸೆ ಮಾತನಾಡಿದ್ದಾರೆ.
'ಆರಂಭದಿಂದ ಮಾಧ್ಯಮಗಳು ನಮಗೆ ಸಪೋರ್ಟ್ ಮಾಡಿದ್ದಾರೆ ಹಾಗೂ ಒಳ್ಳೆ ವಿಮರ್ಶೆ ಕೊಟ್ಟಿರುವುದಕ್ಕೆ ಧನ್ಯವಾದಗಳು. 6 ನಿಮಿಷ ವಿಡಿಯೋ ನೋಡಿದ ಮೇಲೆ ಇದು ಫ್ಯಾಮಿಲಿ ಸಿನಿಮಾ ಅಂತ ಒಪ್ಪಿಕೊಂಡೆ. ವಜ್ರೇಶ್ವರಿ ಕಂಬೈನ್ಸ್ ಕೂಡ ಆರಂಭದಿಂದ ಫ್ಯಾಮಿಲಿ ಸಿನಿಮಾ ಮಾಡಿಕೊಂಡು ಬಂದಿದೆ ಅದೇ ಯೋಚನೆ ಬಂತು ಅಪ್ಪು ಮತ್ತು ನಮಗೆ. ಕಳೆ ಕಥೆ ಆದರೆ ಹೊಸ ಏಜ್ ಸಿನಿಮಾ' ಎಂದು ಅಶ್ವಿನಿ ಮಾತು ಆರಂಭಿಸಿದ್ದಾರೆ.
ಚೂರು ರೆಡಿಯಾಗಲು ಇಷ್ಟವಿಲ್ಲ, ನಾನು ಫುಲ್ ಟಾಮ್‌ಬಾಯ್ ರೀತಿ: ಅಶ್ವಿನಿ ಪುನೀತ್ ರಾಜ್‌ಕುಮಾರ್
ದೊಡ್ಡಮನೆ ಅವರು ಸಿನಿಮಾ ಮಾಡುತ್ತಿದ್ದಾರೆ ಅಂದ್ಮೇಲೆ ಫ್ಯಾಮಿಲಿ ಸಿನಿಮಾ ಆಗಿರುತ್ತದೆ ಹಾಗೂ ವಯಸ್ಸಿನ ಮಿತಿ ಇಲ್ಲದೆ ಸಿನಿಮಾ ನೋಡಬಹುದು ಎಂದು ಸಿನಿ ರಸಿಕರಿಗೆ ಗೊತ್ತಿದೆ. ಈಗ ಅದೇ ಹಾದಿಯಲ್ಲಿ ಅಶ್ವಿನಿ ನಡೆಯುತ್ತಿದ್ದಾರೆ. 'ನಾನು ಮದುವೆಯಾಗಿ ಬಂದ ಮೇಲೆ ಅಮ್ಮ ಪ್ರೊಡಕ್ಷನ್ ಸ್ಟಾಪ್ ಮಾಡಿದರು ಅಂದ್ರೆ ಆಫೀಸ್‌ಗೆ ಹೋಗುವುದು ನಿಲ್ಲಿಸಿದರು. ಕಾದಂಬರಿ ಓದಬೇಕು ಅದರಿಂದ ಕಥೆ ಸಿಗುತ್ತದೆ ಹಾಗೆ ಅಪ್ಪಾಜಿ ಸಿನಿಮಾಗಳು ಮಾಡಿರುವುದು ಎಂದು ಅಮ್ಮ ಹೇಳುತ್ತಿದ್ದರು. ನಾನು ಕೂಡ ಕಥೆಗಳನ್ನು ಓಡುತ್ತಿರುವೆ. ಪ್ರೊಡಕ್ಷನ್ ಬಜೆಟ್ ಸ್ವಲ್ಪ ಹಿಡಿತದಲ್ಲಿ ಇರಬೇಕು ಎಂದು ಅಮ್ಮ ಹೇಳುತ್ತಿದ್ದರು ಆದರೆ ಅಪ್ಪು ಹಾಗೆ ಇರಲಿಲ್ಲ ಫ್ರೀ ಆಗಿ ಬಿಡಬೇಕು ನಿರ್ದೇಶಕರು ನಿರ್ಧಾರ ಮಾಡಲು ಹೇಳಬೇಕು ಎನ್ನುತ್ತಿದ್ದರು. ಇಬ್ಬರಿಂದ ಸಲಹೆ ಪಡೆದುಕೊಂಡು ನನ್ನ ಯೋಚನೆಗಳನ್ನು ಹಾಕಿಕೊಂಡು ಕೆಲಸ ಮಾಡುತ್ತಿರುವೆ. ನಮ್ಮ ಸಂಸ್ಥೆಯಲ್ಲಿ ಒಳ್ಳೆ ವ್ಯಕ್ತಿಗಳಿದ್ದಾರೆ ಕೆಲಸ ಚೆನ್ನಾಗಿ ನಡೆಯುತ್ತಿದೆ' ಎಂದು ಅಶ್ವಿನಿ ಹೇಳಿದ್ದಾರೆ.
ಗಾಜನೂರಿನಿಂದ ಸಾಂಬರ್ ಪೌಡರ್ ಬರುತ್ತೆ, ಅಕ್ಕಿ ರೊಟ್ಟಿ- ಕಡುಬು ಮಾಡೋದು ಕಲಿತೆ: ಅಶ್ವಿನಿ ಪುನೀತ್ ರಾಜ್‌ಕುಮಾರ್
'ನಿರ್ಮಾಣ ವಿಚಾರದಲ್ಲಿ ನನಗೆ ಯಾರು ಪ್ರೇರಣೆ ಅಂದ್ರೆ ಅದು ಅಮ್ಮನೇ. ಪ್ರೊಡಕ್ಷನ್‌ನಲ್ಲಿ ಅಮ್ಮ ತುಂಬಾ ಸ್ಟ್ರಿಕ್ಟ್ ಆಗಿರುತ್ತಿದ್ದರಂತೆ ಆದರೆ ನಾನು ಸ್ಟ್ರಿಕ್ಟ್ ಆಗಿಲ್ಲ. ಕಥೆ ಆಯ್ಕೆ ವಿಚಾರದಲ್ಲಿ ನಾನು ಹೆಚ್ಚಿಗೆ ಹೋಮ್‌ವರ್ಕ್ ಮಾಡುವುದಿಲ್ಲ ಆದರೆ ನನಗೆ ಓದುವ ಅವ್ಯಾಸವಿದೆ, ಸಿನಿಮಾ ನೋಡಲು ಆರಂಭಿಸಿರುವ. ದೊಡ್ಡ ಮನೆಗೆ ಸೊಸೆಯಾಗಿ ಬಂದ ಮೇಲೆ ಸಿನಿಮಾ ಮೇಲೆ ನನಗೆ ಆಸಕ್ತಿ ಬಂದಿರುವುದು. ಮುಂಬರುವ ದಿನಗಳಲ್ಲಿ ಒಳ್ಳೆ ಕಥೆಗಳನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಬೇಕು..ಒಂದೇ ರೀತಿ ಕಥೆಗಳನ್ನು ಮಾಡಲು ನನಗೆ ಇಷ್ಟವಿಲ್ಲ ಏಕೆಂದರೆ ಪಿಆರ್‌ಕೆ ಸಂಸ್ಥೆ ಸದಾ ವಿಭಿನ್ನವಾಗಿ ನಡೆದುಕೊಂಡು ಬಂದಿದೆ. ನನಗೆ ಥ್ರಿಲರ್ ಸಿನಿಮಾಗಳು ಇಷ್ಟವಾಗುತ್ತದೆ' ಎಂದಿದ್ದಾರೆ ಅಶ್ವಿನಿ.
