ಆಚಾರ್ ಆಂಡ್ ಕೋ ಸಿನಿಮಾ ಪ್ರಚಾರದಲ್ಲಿ ಅಶ್ವಿನಿ ಪುನೀತ್. ಅನುಶ್ರೀ ಯುಟ್ಯೂಬ್ ಚಾನೆಲ್‌ನಲ್ಲಿಇಂಟ್ರೆಸ್ಟಿಂಗ್ ವಿಚಾರ ಹಂಚಿಕೊಂಡ ನಿರ್ಮಾಪಕಿ...
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ಪಿಆರ್‌ಕೆ ಸಂಸ್ಥೆ ಮೂಲಕ ಸಿಂಧು ಶ್ರೀನಿವಾಸಮೂರ್ತಿ ನಿರ್ದೇಶನ ಮಾಡಿರುವ ಆಚಾರ್ ಆಂಡ್ ಕೋ ಸಿನಿಮಾ ರಿಲೀಸ್ ಆಗಿದೆ. ಪ್ರಚಾರದಲ್ಲಿ ಬ್ಯುಸಿಯಾಗಿರುವ ತಂಡಕ್ಕೆ ಅಶ್ವಿನಿ ಸಾಥ್ ಕೊಡುತ್ತಿದ್ದಾರೆ. ಅನುಶ್ರೀ ಯುಟ್ಯೂಬ್ ಚಾನೆಲ್‌ನಲ್ಲಿ ನಡೆದ ಫನ್ ಸಂದರ್ಶನದಲ್ಲಿ ಭಾಗಿಯಾಗಿ ತಮ್ಮ ಇಷ್ಟ ಕಷ್ಟಗಳನ್ನು ಹಂಚಿಕೊಂಡಿದ್ದಾರೆ ದೊಡ್ಡ ಮನೆ ಸೊಸೆ.
- ನಿಮ್ಮ ನೆಚ್ಚಿನ ಬಾಲ್ಯದ ಆಹಾರ?
ನನಗೆ ಚಿಪ್ಸ್ ತುಂಬಾ ಇಷ್ಟ. ಆಲೂಗಡೆ ಚಿಪ್ಸ್.
- ತುಂಬಾ ಇಷ್ಟ ಆಗುವ ಫಂಕ್ಷನ್‌ಗಳು?
ಆಂಟಿ ಅಂಗಲ್ ....ಮದುವೆಗಳು ಅಂದ್ರೆ ತುಂಬಾನೇ ಇಷ್ಟ. ನನಗೆ ರೆಡಿಯಾಗುವುದು ಅಂದ್ರೆ ಇಷ್ಟನೇ ಇರಲಿಲ್ಲ ಫುಲ್ ಟಾಮ್‌ಬಾಯ್ ರೀತಿ ಇದ್ದೆ. ನಾನು ತುಂಬಾ ತುಂಟಿ ಎಲ್ಲಾ ಸಹೋದರ ಸಹೋದರಿಯರ ಜೊತೆ ಸೇರಿಕೊಂಡು ಎಂಜಾಯ್ ಮಾಡುತ್ತಿದ್ವಿ.
ಗಾಜನೂರಿನಿಂದ ಸಾಂಬರ್ ಪೌಡರ್ ಬರುತ್ತೆ, ಅಕ್ಕಿ ರೊಟ್ಟಿ- ಕಡುಬು ಮಾಡೋದು ಕಲಿತೆ: ಅಶ್ವಿನಿ ಪುನೀತ್ ರಾಜ್‌ಕುಮಾರ್
- ಫೇವರೆಟ್ ಟೈಮ್‌ಪಾಸ್ ಏನು?
ಫ್ರೆಂಡ್ಸ್ ಜೊತೆ ನಾನು ಪಗಡೆ ಆಡುತ್ತಿದ್ದೆ. ಈಗಲೂ ನಾನು ನನ್ನ ಮಕ್ಕಳು ಮನೆಯಲ್ಲಿ ಪಗಡೆ ಆಡುತ್ತೀವಿ.
- ಆಗಿನ ಕಾಲದಲ್ಲಿ ತುಂಬಾ ಇಷ್ಟ ಪಡುತ್ತಿದ್ದ ಜನ?
ಅಜ್ಜಿ ತುಂಬಾ ಇಷ್ಟ ಆಗುತ್ತಾರೆ. ಸುಮಾರು ಕಥೆಗಳನ್ನು ಹೇಳುತ್ತಿದ್ದರು. ಮನೆಯಲ್ಲಿ ನಾವು 35 ರಿಂದ 40 ಜನ ಮಕ್ಕಳು ಇರುತ್ತಿದ್ವಿ. ನಮ್ಮದು ತುಂಬಾ ದೊಡ್ಡ ಕುಟುಂಬ ನನ್ನ ಅಜ್ಜಿ ಮನೆ ಚಿಕ್ಕಮಗಳೂರಿನಲ್ಲಿ ಇರುತ್ತಿತ್ತು. ನನ್ನ ತಾಯಿ ಅವರ ಸಹೋದರ ಸಹೋದರಿಯರು ಮಕ್ಕಳು ಸೇರಿಕೊಳ್ಳುತ್ತಿದ್ವಿ. ಸೈಲೆಂಟ್ ಅನ್ನೋ ಪದಕ್ಕೆ ಜಾಗವೇ ಇಲ್ಲ. ಯಾರೂ ಒಂದೇ ಸಮಯಕ್ಕೆ ಮಲಗುತ್ತಿರಲಿಲ್ಲ ದೊಡ್ಡ ಹಾಲ್‌ನಲ್ಲಿ ಹಾಸಿಗೆ ಹಾಕಿ ಎಲ್ಲರೂ ಒಟ್ಟಿಗೆ ಮಲಗುತ್ತಿದ್ದರು.
- ಇರಿಟೇಟಿಂಗ್ ಅನಿಸುತ್ತಿದ್ದ ಜನರು ಇದ್ರಾ?
ಹೆಸರು ಹೇಳುವುದಕ್ಕೆ ಅಗಲ್ಲ. 100% ಇದ್ರು ಈಗಲೂ ಇದ್ದಾರೆ.
- ಜೀವನದ ಮೋಸ್ಟ್ embarrassing ಕ್ಷಣ ಯಾವುದು?
ನನಗೆ ಮ್ಯಾಥಮೆಟಿಕ್ಸ್ ಇಷ್ಟ ಇಲ್ಲ ಫೇಲ್ ಅಗುತ್ತಿದ್ದೆ. 100% ಹೋಮ್ ವರ್ಕ್ ಮಾಡುತ್ತಿರಲಿಲ್ಲ. ನನ್ನ ಆಂಟಿನೇ ಸ್ಕೂಲ್ ಪ್ರಿನ್ಸಿಪಲ್ ಆಗಿದ್ದರು ಹೀಗಾಗಿ ಕ್ಷಮಿಸುವ ಜಾನ್ಸ್ ಇರಲಿಲ್ಲ. ಇಡೀ ಕ್ಲಾಸ್‌ಗೆ ಕೇಳುತ್ತಿದ್ದರು ಯಾರು ಮ್ಯಾಥಮೆಟಿಕ್ಸ್ ಹೋಮ್ ವರ್ಕ್ ಮಾಡಿಲ್ಲ ಅಂತ ಆಗ ಆ ಗುಂಪಿನಲ್ಲಿ ನಾನು ಸದಾ ಇರುತ್ತಿದ್ದೆ. ನನ್ನ ಪರ ಅವರು ನಿಲ್ಲುವುದಕ್ಕೆ ಆಗಲ್ಲ. ಒಂದು ಸಮಯ ಆದ್ಮೇಲೆ ನಾನೇ ಸರಿ ಮಾಡಿಕೊಳ್ಳಲು ಶುರು ಮಾಡಿದೆ. 7ನೇ ತರಗತಿ ವರೆಗೂ ನಾನು ICSE ಸಿಲಬಸ್ ಹೈಸ್ಕೂಲ್ ಮ್ಯಾಥಮೆಟಿಕ್ಸ್ ತುಂಬಾ ದಪ್ಪ ಇತ್ತು ಅದಿಕ್ಕೆ ನಾನು ವಾಪಸ್ ಸ್ಕೂಲ್‌ಗೆ ಹೋಗಲ್ಲ ಸ್ಟೇಟ್ ಸಿಲಬಸ್‌ಗೆ ಹಾಕಬೇಕು. ಮ್ಯಾಥಮೆಟಿಕ್ಸ್ ನೋಡಿನೇ ನಿರ್ಧಾರ ಮಾಡಿದೆ ಆಮೇಲೆ ಸ್ಟೇಟ್ಸ್ ಸಿಲಬಸ್‌ಗೆ ಬದಲಾಯಿಸಿದೆ. ಆಮೇಲೆ ಮ್ಯಾಥಮೆಟಿಕ್ಸ್ ಚೆನ್ನಾಗಿ ಕಲಿತೆ.
ಮಹಿಳಾ ನಿರ್ದೇಶಕರಿಗೆ ಆದ್ಯತೆ ನೀಡುತ್ತೇವೆ: ಅಶ್ವಿನಿ ಪುನೀತ್ ರಾಜ್‌ಕುಮಾರ್
- ನೆಚ್ಚಿನ ಕ್ರೀಡೆ?
ಬ್ಯಾಟ್ಮಿಂಟನ್ ಅಂದ್ರೆ ತುಂಬಾನೇ ಇಷ್ಟ.
