ಲಾಲೆಟ್ಟೆನ್ ಮೋಹನ್ ಲಾಲ್ ನಟನೆಯ ಈ ಮೂವಿಯಲ್ಲೂ ಹಲವು ಕನ್ನಡಿಗರ ಕೊಡುಗೆ ತುಂಬಾನೇ ಇದೆ. ಅಸಲಿಗೆ ಇದು ಕನ್ನಡ ನಿರ್ದೇಶಕ ನಂದಕಿಶೋರ್ ನಿರ್ದೇಶನದ ಸಿನಿಮಾ. ರಾಗಿಣಿ ಕನ್ನಡದ ಹುಡುಗ ಸಮರ್ಜಿತ್ ಲಂಕೇಶ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನು, ನಟಿ ರಾಗಿಣಿ ಈ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. 

ಮೋಹನ್‌ಲಾಲ್ ಚಿತ್ರದಲ್ಲಿ ಸಮರ್ಜಿತ್ ಲಂಕೇಶ್

ಮೋಹನ್‌ಲಾಲ್‌ (Mohan Lal) ನಟಿಸುತ್ತಿರುವ ಪ್ಯಾಮ್‌ ಇಂಡಿಯಾ ಸಿನಿಮಾ ‘ವೃಷಭ’ ಚಿತ್ರದಲ್ಲಿ ಇಂದ್ರಜಿತ್‌ ಲಂಕೇಶ್‌ ಪುತ್ರ ಸಮರ್ಜಿತ್‌ (Samarjit Lankesh) ಮೋಹನ್‌ಲಾಲ್ ಪುತ್ರನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ನಾಳೆ (ಡಿ.25) ಬಿಡುಗಡೆಯಾಗುತ್ತಿದೆ. ಸಮರ್ಜಿತ್‌ ಅವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಅವರು, ‘ವೃಷಭ ಸಿನಿಮಾ ಗೂಳಿಯಂತೆ ಮುನ್ನುಗ್ಗಲಿ. ಸಮರ್ಜಿತ್ ಲಂಕೇಶ್ ಅವರಿಗೆ ಒಳ್ಳೆಯದಾಗಲಿ’ ಎಂದರು. ಸಮರ್ಜಿತ್‌ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಈ ಚಿತ್ರವನ್ನು ಕನ್ನಡದ ನಿರ್ದೇಶಕ ನಂದಕಿಶೋರ್‌ ನಿರ್ದೇಶಿಸಿದ್ದಾರೆ. ನಯನ್ ಸಾರಿಕಾ ಅವರು ಸಮರ್ಜಿತ್‌ ಜೋಡಿಯಾಗಿ ನಟಿಸಿದ್ದಾರೆ.

ನಟಿ ರಾಗಿಣಿ ನಟನೆ

ಲಾಲೆಟ್ಟೆನ್ ಮೋಹನ್ ಲಾಲ್ ನಟನೆಯ ಈ ಮೂವಿಯಲ್ಲೂ ಹಲವು ಕನ್ನಡಿಗರ ಕೊಡುಗೆ ತುಂಬಾನೇ ಇದೆ. ಅಸಲಿಗೆ ಇದು ಕನ್ನಡ ನಿರ್ದೇಶಕ ನಂದಕಿಶೋರ್ ನಿರ್ದೇಶನದ ಸಿನಿಮಾ. ರಾಗಿಣಿ ಈ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಇನ್ನೂ ನಮ್ಮ ಕನ್ನಡದ ಹುಡುಗ ಸಮರ್ಜಿತ್ ಲಂಕೇಶ್ ಈ ಚಿತ್ರದಲ್ಲಿ ಮೋಹನ್ ಲಾಲ್ ಪುತ್ರ ಪಾತ್ರದಲ್ಲಿ ನಟಿಸಿದ್ದಾರೆ. ಗೌರಿ ಸಿನಿಮಾ ಮೂಲಕ ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟ ಸಮರ್ಜಿತ್ , ವೃಷಭ ಮೂಲಕ ಪ್ಯಾನ್ ಇಂಡಿಯಾ ಸದ್ದು ಮಾಡೋದಕ್ಕೆ ಸಜ್ಜಾಗ್ತಾ ಇದ್ದಾರೆ. ಅದ್ರಲ್ಲೂ ಮೋಹಲ್​ಲಾಲ್ ರಂಥಾ ಲೆಜೆಂಡ್ ಜೊತೆ ನಟಿಸಿರೋ ಸಮರ್ಜಿತ್ ಸಿನಿದುನಿಯಾದಲ್ಲಿ ಸದ್ದು ಮಾಡ್ತಾ ಇದ್ದಾರೆ.

ಕನ್ನಡದ ಗೌರಿ ಚಿತ್ರದಲ್ಲಿ ನಟಿಸಿದ್ದ ಸಮರ್ಜಿತ್ ಲಂಕೇಶ್

ಅಂದಹಾಗೆ, ನಟ ಸಮರ್ಜಿತ್ ಲಂಕೇಶ್ ಅವರು ಕನ್ನಡದ ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಗ. ಆಕ್ಟಿಂಗ್‌ನಲ್ಲಿ ತರಬೇತಿ ಪಡೆದು, ‘ಗೌರಿ’ ಕನ್ನಡ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ಸಮರ್ಜಿತ್, ಇದೀಗ ಬಾಲಿವುಡ್ ಸೇರಿದಂತೆ ಭಾರತದ ವಿವಿಧ ಭಾಷೆಗಳತ್ತ ತಮ್ಮ ಗಮನ ಹರಿಸಿದ್ದಾರೆ. ಮಲಯಾಳಂ ಸ್ಟಾರ್ ನಟ ಮೋಹನ್‌ಲಾಲ್ ನಟನೆಯ ‘ವೃಷಭ’ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಸಮರ್ಜಿತ್ ನಟಿಸಿದ್ದಾರೆ. ಈ ಚಿತ್ರವು ನಾಳೆ, ಅಂದರೆ 25 ಡಿಸೆಂಬರ್ 2025ರಂದು ಭಾರತದಾದ್ಯಂತ ಬಿಡುಗಡೆ ಅಗುತ್ತಿದೆ. ಈ ಚಿತ್ರದ ಮೇಲೆ ಈಗಾಗಲೇ ಸಾಕಷ್ಟು ನಿರೀಕ್ಷೆ ಸೃಷ್ಟಿಯಾಗಿದೆ.