ಅಪ್ಪು ಕಪ್ ಪ್ರ್ಯಾಕ್ಟೀಸ್‌ ವೇಳೆ ಸೃಜನ್ ಲೋಕೇಶ್ ಮತ್ತು ವಿ ಸೋಮಣ್ಣ ಪುತ್ರ ಅರುಣ್ ಸೋಮಣ್ಣ ನಡುವೆ ಜಗಳ? ಟ್ವೀಟರ್‌ನಲ್ಲಿ ಕ್ಲಾರಿಟಿ....

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಅಪ್ಪು ಕಪ್ ಬ್ಯಾಡ್ಮಿಂಟನ್‌ ಟೂರ್ನಮೆಂಟ್ ನಡೆಯಲಿದೆ. ಪ್ರತಿಷ್ಠಿತ ಕ್ಲಬ್‌ವೊಂದರಲ್ಲಿ ಕನ್ನಡ ಚಿತ್ರರಂಗದ ಟಾಕಿಂಗ್ ಟಾಮ್ ಸೃಜನ್ ಲೋಕೇಶ್ ತಮ್ಮ ತಂಡದ ಜೊತೆ ಪ್ರಾಕ್ಟೀಸ್ ಮಾಡುತ್ತಿದ್ದರು ಅದೇ ಸಮಯಕ್ಕೆ ವಿ ಸೋಮಣ್ಣ ಅವರ ಪುತ್ರ ಅರುಣ್ ಸೋಮಣ್ಣ ಕೂಡ ಆಗಮಿಸಿ ಮಾತಿಗೆ ಮಾತು ಬೆಳೆದು ಜಗಳ ಆಗಿದೆ ಎನ್ನುಲಾಗಿದೆ. ಸೋಮವಾರ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ಅಪ್ಪು ಕಪ್ ಬ್ಯಾಡ್ಮಿಂಟನ್‌ ಪ್ರ್ಯಾಕ್ಟೀಸ್‌ ಸಮಯದಲ್ಲಿ ನಟ ಸೃಜನ್ ಲೋಕೇಶ್ ಮತ್ತು ಅರುಣ್ ಸೋಮಣ್ಣ ನಡುವೆ ಕದನ ಆಗಿದೆ ಎನ್ನಲಾಗಿದೆ. ಸೋಮವಾರ ರಾತ್ರಿ ಬೆಂಗಳೂರಿನ ಮುದ್ದಿನಪಾಳ್ಯದಲ್ಲಿರುವ ಕ್ಲಬ್‌ವೊಂದರಲ್ಲಿ ಬ್ಯಾಡ್ಮಿಂಟನ್‌ ಪ್ರ್ಯಾಕ್ಟೀಸ್‌ ಬಳಿಕ ನಟ ಸೃಜನ್ ಲೋಕೇಶ್ ಮತ್ತು ಅರುಣ್ ನಡುವೆ ಆಗಿರುವ ಜಗಳದ ಬಗ್ಗೆ ಯಾರೂ ದೂರು ನೀಡಿಲ್ಲ ಎನ್ನುವ ಮಾಹಿತಿ ಸಿಕ್ಕಿದೆ. ಪ್ರತಿ ದಿನ ಸೃಜನ್ ಲೋಕೇಶ್ ತಂಡ ಬ್ಯಾಡ್ಮಿಂಟನ್‌ ಪ್ರ್ಯಾಕ್ಟೀಸ್ ಮಾಡುತ್ತಿದ್ದರು ಎಂದಿನಂತೆ ಸೋಮವಾರ ಕೂಡ ಪ್ರ್ಯಾಕ್ಟೀಸ್ ಮುಗಿಸಿ ತಮ್ಮ ತಂಡದ ಜೊತೆ ಪಾರ್ಟಿ ಮಾಡುತ್ತಿದ್ದರು ಎನ್ನಲಾಗಿದೆ. ಪಾರ್ಟಿ ಮಾಡುವಾಗ ಏರು ಧ್ವನಿಯಲ್ಲಿ ಕಿರುಚಾಡುತ್ತಿದ್ದರು ಈ ವೇಳೆ ಅರುಣ್ ಸೋಮಣ್ಣ ಆಂಡ್ ಟೀಂ ಕ್ಲಬ್‌ಗೆ ಆಗಮಿಸಿದ್ದಾರೆ, ಯಾಕೆ ಇಷ್ಟೊಂದು ಜೋರಾಗಿ ಗಲಾಟೆ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ ಆಗ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದಿದೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. 

ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಯಾರೂ ದೂರು ನೀಡಿಲ್ಲ. ಟ್ವಿಟರ್‌ ಮೂಲಕ ಅರುಣ್ ಸ್ಪಷ್ಟನೆ ಕೊಟ್ಟಿದ್ದಾರೆ. 'ಸಾಮಾಜಿಕ ಜಾಲತಾಣಗಳಲ್ಲಿ ನನಗೂ ಹಾಗೂ ಸೃಜನ್ ಲೋಕೇಶ್ ಅವರ ನಡುವೆ ಜಗಳವಾಗಿದೆ ಎನ್ನುವ ಸುಳ್ಳು ಸುದ್ದಿಯೊಂದು ಹರಿದಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆ ತರಹದ ಯಾವುದೇ ಘಟನೆ ನಡೆದಿಲ್ಲ, ಅದೊಂದು ಸುಳ್ಳು ಸುದ್ದಿಯಾಗಿರುತ್ತದೆ. ಯಾರೋ ವಿರೋಧಿಗಳು ಈ ತರಹದ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ' ಎಂದು ಹೇಳಿದ್ದಾರೆ.

Scroll to load tweet…

ಅರುಣ್ ಮತ್ತು ಸೃಜನ್ ನಡುವೆ ಆಗಿರುವ ಜಗಳದ ಬಗ್ಗೆ ಸೋಮಣ್ಣ ಅವರಿಗೆ ಪ್ರಶ್ನೆ ಮಾಡಿದ್ದಾಗ ಗರಂ ಆಗಿದ್ದಾರೆ. 'ಏನೂ ಗೊತ್ತಿಲ್ಲದೆ ಆಗುವ ಘಟನೆಗಳ ಬಗ್ಗೆ ಹಿಟ್ ಆಂಡ್ ರನ್ ಕೆಲಸಗಳನ್ನು ಮಾಡೋದು ಬೇಡ. ನಾನೊಬ್ಬ ರಾಜಕಾರಣಿ ಯಾರಾದ್ದರೂ ತಪ್ಪು ಮಾಡಿದ್ದರೆ ಅದು ತಪ್ಪು ಎಂದು ಹೇಳಿವೆ. ಈ ಘಟನೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನನ್ನ ಮಗ ನನ್ನನ್ನು ಬಿಟ್ಟು ಸುಮಾರು 10-12 ವರ್ಷ ಆಗಿದೆ ಬೇರೆ ಮನೆಯಲ್ಲಿದ್ದಾರೆ. ಈ ವಿಚಾರದ ಬಗ್ಗೆ ಏನ್ ಎನೋ ಮಾತಾಡುವುದರಲ್ಲಿ ಅರ್ಥವಿಲ್ಲ. ದಯಮಾಡಿ ಸತ್ಯ ಸಂಗತಿಗಳನ್ನು ತಿಳಿದುಕೊಂಡು ಹೇಳಿ ಇದರ ಬಗ್ಗೆ ನನಗೆ ಒಂದು ಕಿಂಚಿತ್ತು ಮಾಹಿತಿ ಇಲ್ಲ' ಎಂದು ವಿ ಸೋಮಣ್ಣ ಹೇಳಿದ್ದಾರೆ. 

'ಕನ್ನಡ ಸಿನಿಮಾಗೆ ರೀಮೇಕ್ ರೈಟ್ಸ್‌ ಕೇಳಿ ತೆಲುಗು- ತಮಿಳು ಆಫೀಸ್‌ಗಳಿಂದ ಕರೆ ಮಾಡ್ತಿದ್ದಾರೆ'

'ಸೋಮವಾರ ರಾತ್ರಿ ಅರುಣ್ ಸೋಮಣ್ಣ ಅವರು ಬಂದಿರಲಿಲ್ಲ ಅಂದು ಸೃಜನ್ ಲೋಕೇಶ್‌ ಯಾರ ಜೊತೆನೂ ಮಾತನಾಡಿಲ್ಲ. ಪ್ರ್ಯಾಕ್ಟೀಸ್ ಆದ್ಮೇಲೆ ಆಟಗಾರರನ್ನು ಕಳುಹಿಸಲಾಗಿತ್ತು ಆದರೆ ಈ ವಿಚಾರ ಯಾವ ತರ ಹೊರ ಬಂದಿದೆ ಯಾಕೆ ಸೃಜನ್ ಮತ್ತು ಅರುಣ್ ಸೋಮಣ್ಣ ಅವರ ಹೆಸರು ಬಂದಿದೆ ನಮಗೆ ಗೊತ್ತಿಲ್ಲ' ಎಂದು ಸೃಜನ್ ತಂಡದ ಸದಸ್ಯ ವಿಕಾಸ್ ಹೇಳಿದ್ದಾರೆ.