Asianet Suvarna News Asianet Suvarna News

ಪಾಪ...ಕರುಳು ಕಿತ್ತು ಬರುತ್ತೆಅನುಶ್ರೀ ಕಥೆ ಕೇಳಿದ್ರೆ, ಕೆನ್ನೆ ಮೇಲೆ ಬಿಸಿ ಹನಿ ಬೀಳದಿದ್ರೆ ನಿಮಗೇನೋ ಆಗಿದೆ..!

ಅಷ್ಟಕ್ಕೂ ನನಗೆ ದೇವರು ಭಿಕ್ಷೆ ಬೇಡುವಂತ ಪರಿಸ್ಥಿತಿಯನ್ನೇನೂ ಕೊಟ್ಟಿಲ್ಲ. ಮೂರು ಹೊತ್ತು ಊಟಕ್ಕೇನೂ ತೊಂದರೆಯಿಲ್ಲ. ಸ್ವಾಭಿಮಾನದಿಂದ ಜೀವನ ಸಾಗಿಸುವ ಬದುಕು ಕೊಟ್ಟಿದ್ದಾನೆ. ಇದಕ್ಕಿಂತ ಇನ್ನೇನು ಬೇಕು?

Anchor anushree talks about a woman called bhagyalakshmi in mahanati show srb
Author
First Published Jul 8, 2024, 11:12 AM IST | Last Updated Jul 8, 2024, 12:59 PM IST

ಆ್ಯಂಕರ್​ ಅನುಶ್ರೀ (Anchor Anushree) ಬಹುಮುಖ ಪ್ರತಿಭೆ ಎಂಬುದನ್ನು ಹೇಳಬೇಕಾಗಿಯೇ ಇಲ್ಲ. ಅವರು ನಿರೂಪಣೆ ಮಾಡುವುದು ಮಾತ್ರವಲ್ಲ, ನಟನೆ ಕೂಡ ಮಾಡುತ್ತಾರೆ. ಜೊತೆಗೆ, ಅದೆಷ್ಟೋ ಸಮಾಜಮುಖಿ ಕಾರ್ಯಕ್ರಮಗಳಿಗೆ ನಿರೂಪಣೆ ಹಾಗು ಗೆಸ್ಟ್ ಆಗಿ ಕೂಡ ಹೋಗುತ್ತಾರೆ. ಹಾಗೇ ಹಲವಾರು ಪ್ರೋಗ್ರಾಂಗಳಲ್ಲಿ ಕೂಡ ಅನುಶ್ರೀ ಭಾಗಿಯಾಗುತ್ತಾರೆ. ಇಲ್ಲಿ ಸಂದರ್ಶನವೊಂದರಲ್ಲಿ ನಿರೂಪಕಿ ಅನುಶ್ರೀ ಅವರು 'ಮಹಾನಟಿ' ಕಾರ್ಯಕ್ರಮದ ಬಗ್ಗೆರ ಮಾತನಾಡುತ್ತ ಭಾಗ್ಯಲಕ್ಷ್ಮೀ ಅನ್ನೋ ಅಜ್ಜಿಯ ಬಗ್ಗೆ ಹೇಳಿಕೊಂಡಿದ್ದಾರೆ.

ಆ ಅಜ್ಜಿ ಮಾಡುವ ಕೆಲಸ ಎಂದರೆ ದೇವರ ದೀಪ ಬೆಳಗಲು ಉಪಯೋಗಿಸುವ ಹತ್ತಿಯ ಬತ್ತಿ ಹೊಸೆಯುವುದು. ಅದನ್ನೇ ಮಾರಿ ತನ್ನ ಹಾಗೂ ಕುಟುಂಬದ ಹೊಟ್ಟೆ ಹೊರೆಯುವುದು. ಅವಳಿಗೆ ಒಬ್ಬ ಮಗ ಹಾಗು ಮೂವರು ಹೆಣ್ಣುಮಕ್ಕಳು ಇದ್ದರು. ಅವಳ ಮಗನಿಗೆ 21-22 ವರ್ಷದವನಿದ್ದಾಗ ಎರಡೂ ಕಿಡ್ನಿ ಪೇಲ್ ಆಗಿದೆ. ಕಿಡ್ನಿ ಕಸಿಗೆ ಮೂವತ್ತು ನಲವತ್ತು ಲಕ್ಷ ಖರ್ಚಾಗುತ್ತೆ ಎಂದಾಗ ಅವಳೇನು ಮಾಡಲು ಸಾಧ್ಯ? ಟೆಸ್ಟ್ ಮಾಡಿಸಿ ಮ್ಯಾಚ್ ಆಗುತ್ತೆ ಎಂದಾಗ ತನ್ನದೇ ಕಿಡ್ನಿ ಒಂದನ್ನು ಕೊಟ್ಟು ಮಗನನ್ನು ಬದುಕಿಸಿಕೊಂಡಳು. ಆದರೆ ಎರಡೇ ವರ್ಷಕ್ಕೆ ಆ ಮಗ ರೋಡ್ ಅಪಘಾತದಲ್ಲಿ ತೀರಿಕೊಂಡ.

ಡಾ ರಾಜ್‌ ಸೋಮವಾರದ ವೃತ ಕೆಡಿಸಿಬಿಟ್ಟಿದ್ರು ಅಂಬರೀಷ್; ಅದಕ್ಕೆ ಪಾರ್ವತಮ್ಮ ಏನ್ ಅಂದಿದ್ರು..?

ಅದೇ ದುಃಖದಲ್ಲಿ ಅವಳ ಗಂಡ ತೀರಿಕೊಂಡರು. ಇನ್ನು ಎರಡು ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ. ಆದರೆ, ಅವಳ ಗಂಡ ಕುಡುಕ, ಸಂಸಾರವನ್ನು ಸಾಗಿಸಲು ಸಾಧ್ಯವಾಗದೇ ಮಗಳು ಡಿಪ್ರೆಶನ್‌ಗೆ ಹೋಗಿದ್ದಾಳೆ. ಜೊತೆಗೆ ಆಕೆ ಹಾರ್ಟ್ ಪೇಶಂಟ್. ಆಕೆಯನ್ನು 'ನಿನಗೆ ದೇವರ ಮೇಲೆ ಕೋಪ ಇಲ್ಲವೇ..?' ಎಂದು ಕೇಳಿದರೆ, 'ಅಯ್ಯೋ, ನಾನು ನಂಬಿರುವ ರಾಮ ನನ್ನ ಕೈ ಬಿಡುವುದಿಲ್ಲ. ನನಗೆ ಬಂದಿರುವ ಒಂದೆರಡು ಕಷ್ಟಗಳಿಗೇ ನಾನು ದೇವರನ್ನು ಬೈಯಲು ಶುರು ಮಾಡಿದರೆ, ನನಗೆ ಕೊಟ್ಟಿರುವ ಬಹಳಷ್ಟು ಭಾಗ್ಯಗಗಳಿಗೆ ಏನಿದೆ ಅರ್ಥ?

KGF 3 ಚಿತ್ರಕ್ಕೆಂದು ಏನೇನೋ ರೆಡಿ ಇದೆ, ಆದ್ರೆ ಒಂದೇ ಒಂದು ಪ್ರಾಬ್ಲಂ; ಯಶ್ ಮಾತಿನ ಒಳಗುಟ್ಟೇನು?

ನನ್ನ ರಾಮ ನನಗೆ ಕೊಟ್ಟಿರುವುದು ಎರಡೋ ಮೂರೋ ಕಷ್ಟಗಳು. ಆದರೆ ಕೊಟ್ಟಿರೋ ಅನುಕೂಲತೆಗಳು ನೂರಾರು. ಅಷ್ಟಕ್ಕೂ ನನಗೆ ದೇವರು ಭಿಕ್ಷೆ ಬೇಡುವಂತ ಪರಿಸ್ಥಿತಿಯನ್ನೇನೂ ಕೊಟ್ಟಿಲ್ಲ. ಮೂರು ಹೊತ್ತು ಊಟಕ್ಕೇನೂ ತೊಂದರೆಯಿಲ್ಲ. ಸ್ವಾಭಿಮಾನದಿಂದ ಜೀವನ ಸಾಗಿಸುವ ಬದುಕು ಕೊಟ್ಟಿದ್ದಾನೆ. ಇದಕ್ಕಿಂತ ಇನ್ನೇನು ಬೇಕು? ನಾನು ದೇವರಿಗೆ ಬೈಯೋದು ಅಲ್ಲ, ಆತ ದಯಪಾಲಿಸಿರುವ ಈ ಒಳ್ಳೆಯ ಬದುಕನ್ನು ನಾನು ಅರ್ಥ ಮಾಡಿಕೊಳ್ಳದಿದ್ರೆ ಅವನೇ ನನಗೆ ಬೈಯ್ಯಬೇಕು ಎಂದಿದ್ದಾರೆ ಆ ಅಜ್ಜಿ.

ಎಳ್ಳುನೀರು ಬಿಡೋದೇ ಒಳ್ಳೆಯದಾ..? ದರ್ಶನ್ ಡ್ರೀಮ್ ಪ್ರಾಜೆಕ್ಟ್ ಆಗೋದೇ ಕಷ್ಟ ಅನ್ನೋದ್ಯಾಕೆ...?

ಆ ತಿಳುವಳಿಕೆಗೆ, ಅಪರಿಮಿತ ಜ್ಞಾನಕ್ಕೆ ಕೈ ಮುಗಿಯದೇ ಇರಲು ಹೇಗೆ ಸಾಧ್ಯ ಎಂದಿದ್ದಾರೆ ಆಂಕರ್ ಅನುಶ್ರೀ. ಹೌದು, ಅನುಶ್ರೀ ಹೇಳಿದಂತೆ ಆ ಅಜ್ಜಿಯ ಸ್ವಾಭಿಮಾನದ ಬದುಕನ್ನು ನೋಡಿದರೆ ನಿಜವಾಗಿಯೂ ಅಚ್ಚರಿಯಾಗುತ್ತದೆ. ಆಕೆಗೆ ದೇವರ ಮೇಲೆ ಇರುವ ಅಪಾರವಾದ ಶ್ರದ್ಧೆಯ ಬಗ್ಗೆ ನಮಗೆ ಶ್ರದ್ಧೆ ಮೂಡುತ್ತದೆ. ದೇವರ ಮೇಲೆ ಇರುವ ಆಕೆಯ ನಂಬಿಕೆಗೆ ನಿಜವಾಗಿಯೂ ನಾವು ಕೈ ಮುಗಿಯಬೇಕು ಎನಿಸುತ್ತದೆ ಅಲ್ಲವೇ?

ಅಜ್ಜಿಯದು ಸ್ವಾಭಿಮಾನದ ಬದುಕು, ದೇವರ ಮೇಲಿನ ಅಚಲವಾದ ನಂಬಿಕೆ ಪ್ರಶ್ನಾತೀತ. ಜೀವನದಲ್ಲಿ ಬಂದಿರುವ ಯಾವುದೇ ಕಷ್ಟ ಆಕೆಯ ಜೀವನೋತ್ಸಾಹವನ್ನು ಕುಂದಿಸಿಲ್ಲ. ಅದನ್ನು ಅರ್ಥ ಮಾಡಿಕೊಂಡು ಆ ಬಗ್ಗೆ ಮಾತನಾಡಿ, ಅದನ್ನು ಜಗತ್ತಿನ ಜೊತೆ ಶೇರ್ ಮಾಡಿರುವ ಅನುಶ್ರೀ ಕೂಡ ಗ್ರೇಟ್.

ಅಪ್ಪ-ಅಮ್ಮಂಗೆ ಹುಟ್ಟಿದವ್ರೇ ನಾವೂನೂ, ಅವ್ರ ಬಗ್ಗೆ ಮಾತಾಡ್ತಾ ಇದ್ರೂ ನಮ್ ಇಮೇಜು ಅಂತ ಸುಮ್ನಿರ್ಬೇಕಾ..? 

Latest Videos
Follow Us:
Download App:
  • android
  • ios