ಸೋಮವಾರದ ವೃತ ಕೆಡಿಸಿಬಿಟ್ಟಿದ್ರು ಅಂಬರೀಷ್; ಡಾ ರಾಜ್ ಆಚರಣೆ ಬಗ್ಗೆ ಪಾರ್ವತಮ್ಮ ಏನಂದಿದ್ರು?
'ಸರಿ ಎಂದ ನನ್ನಮ್ಮ ಅಷ್ಟೂ ಜನರಿಗೆ ಅವರೊಬ್ಬರೇ ನಾಲ್ಕೈದು ರೀತಿಯ ಭಕ್ಷ್ಯಗಳನ್ನು ಸಿದ್ಧಪಡಿಸಿದ್ದರು. ಅವುಗಳನ್ನು ಶೂಟಿಂಗ್ ಸ್ಟಾಟ್‌ಗೆ ಸಹ ಕಳುಹಿಸಿದ್ದರು. ಸರಿ, ಊಟದ ವೇಳೆಯಲ್ಲಿ ಎಲೆ ಹಾಕಿ, ಊಟ ಬಡಿಸಿ ಮಕ್ಕಳನ್ನೆಲ್ಲ ಕರೆದು..'
ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಅಂಬರೀಷ್ ಇಂದು ನಮ್ಮೊಂದಿಗಿಲ್ಲ. ಆದರೆ, ಅವರ ಬಗ್ಗೆ ಕರುನಾಡಿನ ಜನರಿಗೆ ಹಾಗು ಸಿನಿಪ್ರೇಮಿಗಳಿಗೆ ಇರುವ ಗೌರವ ಕಿಂಚಿತ್ತೂ ಕಮ್ಮಿಯಾಗಿಲ್ಲ. ಕಾರಣ, ನಟ ಅಂಬರೀಷ್ ಎಂದರೆ ಅವರು ಅಜಾತ ಶತ್ರು. ಅಷ್ಟೇ ಅಲ್ಲ, ಇಬ್ಬರು ಶತ್ರುಗಳನ್ನೂ ಸಹ ಹತ್ತಿರ ತಂದು ಮಿತ್ರರನ್ನಾಗಿ ಮಾಡಿದ, ಮಾಡುವ ಹೃದಯವಂತ ಅವರಿ ಎಂಬುದು ಎಲ್ಲರಿಗೂ ಗೊತ್ತು. ಕೊಡುಗೈ ದಾನಿ ಎಂದೂ ಖ್ಯಾತಿ ಹೊಂದಿದ್ದ ನಟ ಅಂಬರೀಷ್ ಅವರನ್ನು 'ಕಲಿಯುಗ ಕರ್ಣ' ಎಂದೂ ಕರೆಯುತ್ತಿದ್ದರು. ಇಂಥ ಅಂಬರೀಷ್ ಅವರು ತಮ್ಮ ಜೀವನದಲ್ಲಿ ನಡೆದ ಘಟನೆಯೊಂದನ್ನು ತಾವು ಬದುಕಿದ್ದಾಗ ಹಂಚಿಕೊಂಡಿದ್ದರು. ಅದೀಗ ವೈರಲ್ ಆಗುತ್ತಿದೆ.
ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡುತ್ತಿದ್ದ ನಟ ಅಂಬರೀಷ್ 'ನಾನು ಮತ್ತು ಡಾ ರಾಜ್‌ಕುಮಾರ್ ಸಿನಿಮಾ ಶೂಟಿಂಗ್ ಒಂದರ ಸಲುವಾಗಿ ಶ್ರೀರಂಗಪಟ್ಟಣ್ಣದಲ್ಲಿ ಇದ್ದೆವು. ಆಗ ಚಿಕ್ಕ ಮಗುವಾಗಿದ್ದ ಪುನೀತ್ ಹಾಗೂ ಕೆಲವು ಹುಡುಗರು ಕೂಡ ಅಲ್ಲಿದ್ದರು. ಪುನೀತ್ ಹಾಗೂ ಕೆಲವರು ನನ್ನ ಬಳಿ ಬಂದು 'ಮಾಮಾ, ಇವತ್ತು ನೀವು ನಮ್ಗೆಲ್ಲಾ ಒಳ್ಳೇ ಊಟ ಹಾಕಿಸ್ಬೇಕು ಅಂದ್ರು..' ಅಷ್ಟು ಹೇಳಿದ್ದು ನನ್ನ ಕಿವಿಗೆ ಬಿದ್ದಮೇಲೆ ಸುಮ್ಮನಿರುವುದು ಹೇಗೆ? ನಾನು ನಮ್ಮಮ್ಮಂಗೆ, ಸಿನಿಮಾ ಟೀಮ್ ಹಾಗೂ ಡಾ ರಾಜ್ ಸೇರಿದಂತೆ ಇಪ್ಪತ್ತೈದು ಜನರಿಗೆ ಊಟ ರೆಡಿಮಾಡಲು ಹೇಳಿದೆ.
ಶಿರಡಿಗೆ ಬಳಿಕ ದುಬೈಗೆ ಹೊರಟ ಚಂದನ್ ಶೆಟ್ಟಿ; ಅಲ್ಲಿಗ್ ಯಾಕೆ ಹೋಗ್ತಿದಾರೆ ಏನ್ ಕಥೆ ಗೊತ್ತಿಲ್ವಾ..?
ಸರಿ ಎಂದ ನನ್ನಮ್ಮ ಅಷ್ಟೂ ಜನರಿಗೆ ಅವರೊಬ್ಬರೇ ನಾಲ್ಕೈದು ರೀತಿಯ ಭಕ್ಷ್ಯಗಳನ್ನು ಸಿದ್ಧಪಡಿಸಿದ್ದರು. ಅವುಗಳನ್ನು ಶೂಟಿಂಗ್ ಸ್ಟಾಟ್‌ಗೆ ಸಹ ಕಳುಹಿಸಿದ್ದರು. ಸರಿ, ಊಟದ ವೇಳೆಯಲ್ಲಿ ಎಲೆ ಹಾಕಿ, ಊಟ ಬಡಿಸಿ ಮಕ್ಕಳನ್ನೆಲ್ಲ ಕರೆದು ಕುಳ್ಳಿರಿಸಿದ ಮೇಲೆ ಡಾ ರಾಜ್ ಅವರನ್ನು ಕರೆದೆವು. ಅವರು ನನ್ನನ್ನು ತಮ್ಮ ಬಳಿಗೆ ಕರೆದು, ಇವತ್ತು ಸೋಮವಾರ, ಹೀಗಾಗಿ ನಾನು ಮಾಂಸಾಹಾರ ಸೇವಿಸುವುದಿಲ್ಲ. ಹೇಗೂ ಮಕ್ಕಳೆಲ್ಲಾ ತಿಂತಾರೆ, ನೀವೂ ಊಟ ಮಾಡಿ ಎಂದರು. ಆಗ ನಾನು, ನಮ್ಮಮ್ಮ ನಿಮಗೆ ಅಂತನೇ ಸ್ಪೆಷಲ್ಲಾಗಿ ಮಾಡಿ ಕಳುಹಿಸಿದ್ದಾರೆ.
ಪ್ಯಾನ್ ಇಂಡಿಯಾ ಚಿತ್ರದಲ್ಲಿ ಸತ್ಯದೇವ್ ನಟ ಧನಂಜಯ್, ಜೀಬ್ರಾದಲ್ಲೂ ಕನ್ನಡಿಗ..!
ಮಕ್ಕಳೆಲ್ಲರೂ ತಿಂತಾರೆ ಸರಿ, ಆದರೆ, ನಿಮ್ಮನ್ನು ಬಿಟ್ಟು ನಾವೆಲ್ಲಾ ಹೇಗೆ ತಿನ್ನೋಕೆ ಸಾಧ್ಯ? ನೀವೂ ತಿನ್ಬೇಕು ಅಂದೆ. ಆದರೆ ಅವರು ಅದಕ್ಕೆ ಮನಸ್ಸು ಮಾಡಲಿಲ್ಲ. ಬದಲಿಗೆ, ನಾನು ಕಳೆದ ಮೂವತ್ತೈದು ವರ್ಷಗಳಿಂದಲೂ ಸೋಮವಾರ ನಾನ್‌ವೆಜ್ ತಿಂದಿಲ್ಲ. ಹೀಗಾಗಿ ನಾನು ತಿನ್ನಲ್ಲ, ನೀವು ಮುಂದುವರೆಸಿ ಅಂದ್ರು. ಅಲ್ಲೇ ಇದ್ದ ಪಾರ್ವತಮ್ಮ ಸಹ ಪತಿಯ ಮಾತಿಗೆ ಸಪೋರ್ಟ್ ಮಾಡುತ್ತ, ಅವ್ರಿಗೆ ಒತ್ತಾಯ ಮಾಡೋದು ಬೇಡ ಅಂಬೀ.. ಅವ್ರು ತುಂಬಾ ವರ್ಷಗಳಿಂದ, ಅವ್ರೇ ಹೇಳಿದ ಹಾಗೆ 35 ವರ್ಷಗಳಿಂದ ಸೋಮವಾರ ಮಾಂಸಾಹಾರ ತಿಂದಿಲ್ಲ. ನಾವು ಊಟ ಮಾಡೋಣ ಬನ್ನಿ ಅಂದ್ರು.
ನಮ್ KGF 3 ಚಿತ್ರಕ್ಕೆಂದು ಏನೇನೋ ರೆಡಿ ಇದೆ, ಆದ್ರೆ ಒಂದೇ ಒಂದು ಪ್ರಾಬ್ಲಂ; ಯಶ್ ಮಾತಿನ ಒಳಗುಟ್ಟೇನು?
ಆಗ ನಾನು ಅಲ್ಲೇ ಸನಿಹದಲ್ಲಿದ್ದ ಹುಡುಗನನ್ನು ಕರೆದು, 'ಊಟ ಇಟ್ಟಿರುವ ಈ ಎಲ್ಲಾ ಎಲೆಗಳನ್ನು ಎತ್ತಿ ಕಾವೇರಿ ನದಿಗೆ ಹಾಕಿ ಬಾ. ಹಾಗೇ, ಆಮೇಲೆ ಅಲ್ಲಿರೋ ಪ್ರೊಡಕ್ಷನ್ ಊಟ ತಗೊಂಡು ಬಂದು ಎಲ್ಲರಿಗೂ ಬಡಿಸು ಎಂದೆ. ಆಗ ನಿಧಾನಕ್ಕೆ ಎದ್ದು ಬಂದು ರಾಜ್ ಅವರು ಊಟ ಮಾಡಿದ್ರು. ಆವತ್ತೇ ಲಾಸ್ಟ್ , ಆಮೇಲೆ ಯಾವತ್ತೂ ಅವ್ರು ಸೋಮವಾರದ ತಮ್ಮ ವೃತವನ್ನು ಪಾಲಿಸಿದಂತೆ ಕಾಣಿಸಲಿಲ್ಲ. ಯಾಕಂದ್ರೆ, ನಾನೊಮ್ಮೆ ಅವರ ಮನೆಗೆ ಸೋಮವಾರವೇ ಹೋಗಿದ್ದೆ. ಆಗ ಅವರು ಬೆಳಿಗ್ಗೆಯ ತಿಂಡಿಗೇನೇ ನಾನ್‌ವೆಜ್ ರೆಡಿಮಾಡಿಸಿ, ನನಗೂ ಕೊಟ್ಟು, ಅವರೂ ಹೊಟ್ಟೆತುಂಬಾ ತಿಂದಿದ್ದು ನೋಡಿದೀನಿ' ಎಂದಿದ್ದಾರೆ ನಟ ಅಂಬರೀಷ್.
ನಿವಿ ಬೊಂಬೆಗೆ ಫುಲ್ ಕ್ಲಾಸ್, ಚಂದನ್ ಟೆಂಪಲ್ ರನ್, ನಿವೇದಿತಾ ರೀಲ್ಸ್ ರಾಣಿ ಅಂತ ಟ್ರೋಲ್..!