ಕನ್ನಡ ನಟಿ ಅನುಪಮಾ ಗೌಡ ಕಳೆದ ಆರು ತಿಂಗಳಿಂದ ತಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಂಡಿದ್ದಾರೆ. ಬೆಳಿಗ್ಗೆ ಬೇಗ ಎದ್ದು ವ್ಯಾಯಾಮ ಮತ್ತು ಯೋಗ ಮಾಡುತ್ತಾರೆ. ತಮ್ಮ ಆಹಾರ ಕ್ರಮವನ್ನೂ ಬದಲಾಯಿಸಿಕೊಂಡಿದ್ದು, ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. 30 ವರ್ಷ ವಯಸ್ಸಿನ ನಂತರ ಆರೋಗ್ಯ ಮುಖ್ಯವೆಂದು ಅವರು ಹೇಳಿದ್ದಾರೆ. ಅವರ ಈ ಬದಲಾವಣೆಯಿಂದ ಅನೇಕರು ಪ್ರೇರಿತರಾಗಿದ್ದಾರೆ.
ಕನ್ನಡ ಕಿರುತೆರೆ ಹಾಗೂ ಬೆಳ್ಳಿ ತೆರೆ ನಟಿ, ನಿರೂಪಕಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಅನುಪಮಾ ಗೌಡ ಕಳೆದ 6 ತಿಂಗಳಿನಿಂದ ತಮ್ಮ ಲೈಫ್‌ಸ್ಟೈಲ್ ಬದಲಾಯಿಸಿಕೊಂಡಿದ್ದಾರೆ. ದಿನ ಬೆಳಗ್ಗೆ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋ ಮತ್ತು ಡಯಟ್ ಊಟದ ಪ್ಲೇಟ್‌ಗಳ ಫೋಟೋ ಅಪ್ಲೋಡ್ ಮಾಡುತ್ತಾರೆ. ಇದ್ದಕ್ಕಿದ್ದಂತೆ ಫಿಟ್ನೆಸ್, ಸ್ಕಿನ್ ಕೇರ್ ಆಂಡ್ ಹೇರ್ ಕೇರ್ ಅಂತ ಬ್ಯುಸಿಯಾಗಲು ಕಾರಣ ಏನು?
ಹೌದು! ದಿನ ಬೆಳಗ್ಗೆ ವರ್ಕೌಟ್ ಮುಗಿಸಿದ ನಂತರವೇ ಅನುಪಮಾ ಗೌಡ ತಮ್ಮ ದಿನಚರಿ ಆರಂಭಿಸುವುದು. ಅಲ್ಲದೆ ದಿನದ ಮೂರು ಹೊತ್ತಿನ ಊಟವನ್ನು ಅವರೇ ರೆಡಿ ಮಾಡಿಕೊಳ್ಳುತ್ತಾರೆ. ಹೋಟೆಲ್ ಊಟ ಅವಾಯ್ಡ್ ಮಾಡುತ್ತಿರುವ ಅನುಪಮಾ ಈಗ ಫಿಟ್ನೆಸ್ ಫ್ರೀ ಆಗಿದ್ದಾರೆ. ಅವರನ್ನು ನೋಡಿಯೇ ಅದೆಷ್ಟೋ ಮಂದಿ ಆರೋಗ್ಯದ ಕಡೆ ಮುಖ ಮಾಡುತ್ತಿದ್ದಾರೆ. 30 ವರ್ಷ ಮುಟ್ಟುತ್ತಿದ್ದಂತೆ ಹೆಣ್ಣು ಮಕ್ಕಳ ತಮ್ಮ ಆರೋಗ್ಯದ ಮೇಲೆ ಹೆಚ್ಚಿಗೆ ಗಮನ ಕೊಡಬೇಕು. ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಎರಡೂ ಮುಖ್ಯ ಎನ್ನುತ್ತಿದ್ದಾರೆ. ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ತಮ್ಮ ದಿನಚರಿ ಹೇಗಿರುತ್ತದೆ ಎಂದು ರಿವೀಲ್ ಮಾಡಿದ್ದಾರೆ.
ಪತ್ನಿ ಸೋನಲ್ ಹಿಂದೆ ಬಿದ್ದಿದ್ದ ಸ್ಟಾರ್ ನಟ; ಕರೆ ಮೂಲಕವೇ ಸಮಸ್ಯೆ ಬಗೆಹರಿಸಿಕೊಂಡ ತರುಣ್ ಸುಧೀರ್
'ನನ್ನ ದಿನವನ್ನು ಬೇಗ ಆರಂಭಿಸುತ್ತೀನಿ. ನಾನು ಮಾರ್ನಿಂಗ್ ವ್ಯಕ್ತಿ ಅಲ್ಲ ಆದರೆ ಬೇಗ ಎದ್ದೇಳುವ ಚಾಲೆಂಜ್‌ನ ನಾನೇ ತೆಗೆದುಕೊಂಡೆ. ಎದ್ರೆ ತೀರಾ ಲೇಟ್ ಆಗಿ ಗೂಬೆ ರೀತಿ 11 ಅಥವಾ 11.30 ಆಗುತ್ತಿತ್ತು. ಹೀಗಾಗಿ ಬೆಳಗ್ಗೆ 6 ಗಂಟೆಗೆ ಎದ್ದೇಳ ಬೇಕು ಅಂತ ನಿರ್ಧರಿಸಿದೆ ಆದರೆ ಬೆಳ್ಳಂಬೆಳಗ್ಗೆ 4.30ಕ್ಕೆ ದಿನ ಆರಂಭಿಸುತ್ತೀನಿ. ಈಗ ದಿನ ಎದ್ದು ಧ್ಯಾನ ಮಾಡಿ ಪ್ರಾಣಯಾಮ ಮಾಡಿ ಆಮೇಲೆ ಯೋಗ ಮಾಡಿ ಎಲ್ಲಾ ಮುಗಿಸಿ ಗಾಯಿತ್ರಿ ಮಂತ್ರ ಹೇಳುವ ಮೂಲಕ ದಿನ ಆರಂಭಿಸುತ್ತಿದ್ದೀನಿ. ಇತ್ತೀಚಿಗೆ ವೇಟ್ ಟ್ರೈನಿಂಗ್ ಶುರು ಮಾಡಿದ್ದೀನಿ. ಬೆಳಗ್ಗೆ 4 ಗಂಟೆಗೆ ಎದ್ದರೆ ಜಿಮ್‌ಗೆ ಹೋಗುವುದು 5 ಗಂಟೆ. ನನ್ನ ಮನೆಯಿಂದ ಕೇವಲ 5 ನಿಮಿಷ ದೂರದಲ್ಲಿ ಜಿಮ್ ಇದೆ ಅಲ್ಲಿ 1 ಗಂಟೆ ಸಮಯ ಕಳೆಯುತ್ತೀನಿ. ಅದಾದ ಮೇಲೆ ಮನೆಗೆ ಬಂದು ತಿಂಡಿ ಮಾಡ್ಕೊಂಡು ತಿನ್ನುವುದು ಆಮೇಲೆ ಮಧ್ಯಾಹ್ನ ಅಡುಗೆ ಮಾಡ್ಕೊಂಡು ತಿನ್ನುವುದು ದಿನ ಶುರುವಾಗುತ್ತದೆ' ಎಂದು ಅನುಪಮಾ ಗೌಡ ಮಾತನಾಡಿದ್ದಾರೆ.
ಕಷ್ಟಪಟ್ಟ ತಗೊಂಡ ಕಾರು ಮಾರಿದೆ, ಈಗ EMI ಕಟ್ಟಲು ಮನೆ ಖರ್ಚು ನೋಡಿಕೊಳ್ಳುವಷ್ಟು ಇದೆ: ಧರ್ಮ ಕೀರ್ತಿರಾಜ್
ಅನುಪಮಾ ಗೌಡರವರ ಪರ್ಸನಲ್ ಟ್ರೈನರ್ ಹೆಸರು ಪವಿ ಎಂದು. ಆರ್‌ಆರ್ ನಗರದಲ್ಲಿ ಜಿಮ್ ಹೊಂದಿದ್ದಾರೆ. ಇದೇ ಜಿಮ್‌ಗೆ ನಮ್ರತಾ ಗೌಡ ಹಾಗೂ ಕೃಷಿ ತಾಪಂಡ ಹೋಗುತ್ತಾರೆ. ಇಲ್ಲಿ ದಿನ ಬೆಳಗ್ಗೆ ಅನುಪಮಾ ಗೌಡ ಜಿಮ್‌ಗೆ ಬಂದಾಗ ಏನ್ ಮಾಡಬೇಕು ಎಷ್ಟು ವರ್ಕೌಟ್ ಮಾಡಿ ಮುಗಿಸಬೇಕು ಎಂದು ಬರೆಯಲಾಗುತ್ತದೆ. 1 ಗಂಟೆ ಸಂಪೂರ್ಣ ವರ್ಕೌಟ್ ಮುಗಿದ ಮೇಲೆ ಬೋರ್ಡ್‌ನಲ್ಲಿ ಬರೆದಿರುವುದಕ್ಕೆ ಟಿಕ್ ಮಾರ್ಕ್ ಹಾಕಿ ಜನರಿಗೆ ತೋರಿಸುತ್ತಾರೆ. ಅನುಪಮಾ ವರ್ಕೌಟ್ ಬಗ್ಗೆ ಮಾತ್ರ ಕ್ಯೂರಿಯಾಸಿಟಿ ಜನರಿಗೆ ಅಂದುಕೊಳ್ಳಬೇಡಿ ಈ ಹಿಂದೆ ಜಿಮ್‌ಗೆ ಧರಿಸುವ ಬಟ್ಟೆಗಳ ಬಗ್ಗೆನೂ ಜನರು ಪ್ರಶ್ನೆ ಮಾಡಿದ್ದರು. ಒಟ್ಟಾರೆ ಈಗ ಅನು ಆಗಿರೋ ವಯಸ್ಸಿಗಿಂತ ಚಿಕ್ಕ ಹುಡುಗಿ ರೀತಿ ಕಾಣಿಸುತ್ತಾರೆ.
ಹೆಂಡ್ತಿಗೂ ನಂಗೂ 10 ವರ್ಷ ವ್ಯತ್ಯಾಸ, ಮೂರ್ನಾಲ್ಕು ಸಲ ಕಠಿಣವಾದ ಜಗಳ ಆಗಿರಬಹುದು: ಮುಖ್ಯಮಂತ್ರಿ ಚಂದ್ರು

