ಮಜಾ ಟಾಕೀಸ್‌ನಲ್ಲಿ ನಟಿ ಸೋನಲ್ ತಮ್ಮ ಸಿನಿಮಾ ಪ್ರಚಾರಕ್ಕೆ ಆಗಮಿಸಿದ್ದರು. ಯೋಗರಾಜ್ ಭಟ್, ಸೋನಲ್ ಹಿಂದೆ ಮಂಗಳೂರಿನ ಹಾಸ್ಟೆಲ್ ಹುಡುಗರು ಬಿದ್ದಿದ್ದ ವಿಚಾರವನ್ನು ಬಹಿರಂಗಪಡಿಸಿದರು. ತರುಣ್, ಸೋನಲ್‌ಗೆ ತೊಂದರೆ ಕೊಡುತ್ತಿದ್ದವರ ಸಮಸ್ಯೆಯನ್ನು ಬಗೆಹರಿಸಿದ್ದರು. ಮದುವೆಯಾಗುವುದಿಲ್ಲ ಎಂದಿದ್ದ ತರುಣ್ ನಂತರ ಸೋನಲ್ ಅವರನ್ನು ವರಿಸಿದರು. ಮದುವೆಯ ನಂತರವೂ ತರುಣ್ ಬದಲಾಗಿಲ್ಲ ಎಂದು ಸೋನಲ್ ಹೇಳಿದರು.

ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ನಟಿ ಸೋನಲ್ ಆಗಮಿಸಿದ್ದರು. ತಮ್ಮ ಸಿನಿಮಾ ಪ್ರಚಾರ ಮಾಡಲು ಬಂದ ನಟಿ ತಮ್ಮ ಲವ್ ಸ್ಟೋರಿ, ಮದುವೆ ಸ್ಟೋರಿ ಹಾಗೂ ಮದುವೆ ನಂತರದ ಸ್ಟೋರಿ ಹೇಳುವುದರಲ್ಲಿ ಬ್ಯುಸಿಯಾಗಿಬಿಟ್ಟರು. ಆದರೆ ಯಾರಿಗೂ ಗೊತ್ತಿರದ ವಿಚಾರ ಒಂದನ್ನು ಯೋಗರಾಜ್‌ ಭಟ್ ರಿವೀಲ್ ಮಾಡಿದ್ದಾರೆ. 

'ಮಂಗಳೂರಿನ ಅರ್ಧ ಬಾಯ್ಸ್ ಹಾಸ್ಟಲ್‌ ಸೋನಲ್ ಹಿಂದೆ ಬಿದ್ದಿತ್ತು. ಸೋನಲ್ ಕರ್ನಾಟಕದ ಬೆಸ್ಟ್‌ ಕ್ಯೂಟಿ ಎಂದು ಮೀಮ್ಸ್‌ಗಳು ಹರಿದಾಡುತ್ತಿದ್ದ ಸಮಯ. ನಾನು ಸಿನಿಮಾ ಮಾಡುತ್ತಿದ್ದ ಅದರಲ್ಲಿ ದರ್ಶನ್ ನಟಿಸುತ್ತಿದ್ದರು. ಎಲ್ಲಾ ಕೆಲಸ ಮುಗಿತ್ತು ಒಂದು ದಿನ ಫೋನ್ ಬರುತ್ತೆ, ಅವರು ಸೋನಲ್‌ಗೂ ಬೆಸ್ಟ್‌ ಫ್ರೆಂಡ್ ಹಾಗೂ ನನಗೂ ಬೆಸ್ಟ್‌ ಫ್ರೆಂಡ್ ಹೀಗಾಗಿ ಹೆಸರು ಹೇಳುವುದಿಲ್ಲ. ಸೋನಲ್‌ಗೆ ಒಬ್ಬರು ಕಾಟ ಕೊಡುತ್ತಿದ್ದಾರೆ ಆದರೆ ನಾನು ಊರಿನಲ್ಲಿ ಇಲ್ಲ ಅಂತಾರೆ. ಏನ್ ಆಯ್ತು ಅಂತ ಕೇಳ್ದೆ. ಒಂಥರಾ ಕಾಟ ಕೊಡುತ್ತಿದ್ದಾರೆ ನೀವು ಮಾತನಾಡಿ ಸರಿ ಮಾಡಬೇಕು ಅಂದ್ರು. ಸೋನಲ್ ಕರಾವಳಿ ಹುಡುಗಿ ಇಂಡಸ್ಟ್ರಿಗೆ ನಾವೇ ತಂದವರು ಅವರಿಗೆ ಒಂದಾದ ಮೇಲೊಂದು ಸಿನಿಮಾ ಕೊಟ್ಟವರು ನಾವು. ನಾನು ಫೋನ್ ಮಾಡಿದೆ ಆದರೆ ಕಾಟ ಕೊಟ್ಟ ವ್ಯಕ್ತಿ ತೆಗೆಯಲಿಲ್ಲ. ಪಾಪ ಅವರು ಕೂಡ ಒಳ್ಳೆಯ ವ್ಯಕ್ತಿನೇ. ಅದಾದ ಮೇಲೆ ಇನ್ನೂ ದೊಡ್ಡ ವ್ಯಕ್ತಿ ಫೋನ್ ಮಾಡಿದ್ದರು ಆಗ ಕೂಡ ತೆಗೆಯಲಿಲ್ಲ. ಯಾರೂ ಫೋನ್ ತೆಗೆಯದೆ ತೆಗೆಯದೆ ಕೊನೆಯಲ್ಲಿ ತರುಣ್‌ಗೆ ಫೋನ್ ಮಾಡಿದೆ. ಆಗ ತುರಣ್ ಮತ್ತು ಸೋನಲ್ ನಡುವೆ ಏನ್ ಇತ್ತು ಗೊತ್ತಿಲ್ಲ ಆದರೆ ಓನ್‌ ವೇ ದಾರಿಯಲ್ಲಿ 5ನೇ ಗೇರ್ ಹಾಕೊಂಡು ತರುಣ್ ಓಡ್ತಿದ್ದಾನೆ. ಬೇರೆ ಯಾರಿಗೂ ಹೇಳಲು ಹೋಗಬೇಡಿ ನಾನು ಇದ್ದೀನಿ ಎಂದು ಮಿಸ್ಟ್ರಿ ಆಫೀಸರ್ ತರ ಹೇಳಿದ. ಮಾಸ್ ಸಿನಿಮಾ ಹೀರೋ ರೀತಿಯಲ್ಲಿ ಬೆಳಗ್ಗೆ ಅಷ್ಟರಲ್ಲಿ ಸಂಪೂರ್ಣವಾಗಿ ಸರಿ ಮಾಡಿಬಿಟ್ಟ' ಎಂದು ಮಜಾ ಟಾಕೀಸ್‌ನಲ್ಲಿ ಯೋಗರಾಜ್ ಭಟ್ ಮಾತನಾಡಿದ್ದಾರೆ. 

ತರುಣ್‌ ಸುಧೀರ್‌ ಜೊತೆ ದೇವಸ್ಥಾನ ಸುತ್ತುತ್ತಿರುವ ಸೋನಲ್; ಕತ್ತಲಿರುವ ತಾಳಿ ನೋಡಿ ಎಲ್ಲರೂ ಶಾಕ್

'ಈ ಘಟನೆ ಆದ್ಮೇಲೆ ತರುಣ್ ನನಗೆ ಮೆಸೇಜ್ ಮಾಡಿದ್ದರು. ಒಂದು ದಿನ ಶೂಟಿಂಗ್ ಮುಗಿಸಿಕೊಂಡು ಯೋಗರಾಜ್‌ ಭಟ್‌ ಸರ್ ಜೊತೆ ಮಾತನಾಡಿದ್ದೀನಿ ಇಲ್ಲ ಸರ್ ನಾನು ಮದುವೆ ಮಾಡಿಕೊಳ್ಳುವುದಿಲ್ಲ ಅಂತ. ಅಂದ್ರೆ ಜಸ್ಟ್‌ 6 ತಿಂಗಳು ಮುನ್ನ ಹೇಳಿದ್ದೆ ಅಷ್ಟೇ' ಎಂದು ಸೋನಲ್ ಹೇಳಿದ್ದಾರೆ.'ಆಗಲ್ಲ ಹಾಗೆ ಹೀಗೆ ಎಂದು 6 ತಿಂಗಳು ಎಳೆದಾಡಿದ್ದಾರೆ' ಎಂದು ಭಟ್ರು ಸತ್ಯ ರಿವೀಲ್ ಮಾಡುತ್ತಿದ್ದರು. ಇಷ್ಟಲ್ಲಾ ತರುಣ್ ಬಗ್ಗೆ ಹೇಳುವವರು ಮದುವೆ ಆದ್ಮೇಲೆ ನಮ್ಮ ತರುಣಾ ಹೇಳಿದ್ದಾನೆ ಎಂದು ಸ್ವಲ್ಪ ಹೇಳಬೇಕು ಅಲ್ವಾ ಎಂದು ಸೃಜನ್ ಲೋಕೇಶ್ ಪ್ರಶ್ನಿಸುತ್ತಾರೆ.

ಕಷ್ಟಪಟ್ಟ ತಗೊಂಡ ಕಾರು ಮಾರಿದೆ, ಈಗ EMI ಕಟ್ಟಲು ಮನೆ ಖರ್ಚು ನೋಡಿಕೊಳ್ಳುವಷ್ಟು ಇದೆ: ಧರ್ಮ ಕೀರ್ತಿರಾಜ್

'ಮದುವೆ ಅದ್ಮೇಲೆ ತರುಣ್ ಸ್ವಲ್ಪನೂ ಬದಲಾಗಿಲ್ಲ. ನಾವು ಮಾಲ್ಡೀವ್ಸ್‌ಗೆ ಹೋದಾಗಲೂ ಎಳೆನೀರು ಇಟ್ಕೊಂಡು ಕೂತ್ತಿದ್ದರು. ನಮ್ಮ ವಂಶದಲ್ಲಿ ಅಳಿಯಂದಿರಲ್ಲಿ ಕುಡಿಯುವುದಿಲ್ಲ ಅಂದ್ರೆ ತರುಣ್ ಒಬ್ರೆ. ನಮ್ಮ ಫ್ಯಾಮಿಲಿ ಜೊತೆ ಸೇರಿಕೊಂಡಾಗ ಒಂದು ಬಿಯರ್ ಇಟ್ಕೊಂಡು ಒಳಗೆ ಹೋಗಿ ಕುಡಿಯುತ್ತಾರೆ' ಎಂದಿದ್ದಾರೆ ಸೋನಲ್. 

ಸ್ನೇಹಿತೆ ಲವ್‌ ಪ್ರಪೋಸಲ್‌ ಮುಂದಿಡಲು ಹೋಗಿ ಸೋನಲ್‌ ಲವಲ್ಲಿ ಬಿದ್ದ ಕಥೆ ಲೀಕ್; ತರುಣ್‌ ಸುಧೀರ್ ಲಕ್ಕಿ ಎಂದ ನೆಟ್ಟಿಗರು

View post on Instagram