ಹೊಟ್ಟೆಯಲ್ಲಿದ್ದ ಮಗು ಎದೆಬಡಿತ ನಿಂತೋಗಿತ್ತು; ಮಗಳನ್ನು ಕಳೆದುಕೊಂಡು ಮಗನನ್ನು ಪಡೆದ ಘಟನೆ ನೆನೆದು ಅಮೃತಾ ಕಣ್ಣೀರು
ಮಗಳನ್ನು ಕಳೆದುಕೊಂಡ ನೋವಿನಲ್ಲಿ ಇರುವ ಅಮೃತಾ ನಾಯ್ಡು....ಮಗ ಹರ್ಷ ತಂದುಕೊಟ್ಟ ಖುಷಿಯನ್ನು ಹಂಚಿಕೊಂಡ ನಟಿ.
ಕನ್ನಡ ಕಿರುತೆರೆಯ ಜನಪ್ರಿಯ ನಟಿ ಅಮೃತಾ ನಾಯ್ಡು ರಸ್ತೆ ಅಪಘಾತದಲ್ಲಿ ಪುತ್ರಿ ಸಮನ್ವಿಯನ್ನು ಕಳೆದುಕೊಳ್ಳುತ್ತಾರೆ. ಆಗಷ್ಟೇ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮುಗಿಸಿಕೊಂಡು ಸಿಕ್ಕಾಪಟ್ಟೆ ಪ್ರೀತಿ ಮತ್ತು ಅಭಿಮಾನಿಗಳನ್ನು ಗಳಿಸಿದ ಸಮನ್ವಿ ಇನ್ನಿಲ್ಲ ಅನ್ನೋ ನೋವು ಜನರನ್ನು ಕಾಡಲು ಆರಂಭಿಸಿತ್ತು. ಆದರೆ ಅಮೃತಾ ನಾಯ್ಡು ಪ್ರೆಗ್ನೆಂಟ್ ಅನ್ನೋ ವಿಚಾರ ಕೇಳಿ ಖುಷಿ ಪಟ್ಟವರೂ ಇದ್ದಾರೆ. ಈ ಘಟನೆ ಬಗ್ಗೆ ಅಮೃತಾ ಮತ್ತೆ ಮಾತನಾಡಿದ್ದಾರೆ.
'ಮಗಳು ಹೋಗಿದ್ದು ನಮ್ಮ ಜೀವನದಲ್ಲಿ ಅನಿರೀಕ್ಷಿತ ತಿರುವು ಪಡೆಯಿತ್ತು. ಆ ಸಮಯದಲ್ಲಿ ದೇವರು ನಮ್ಮ ಜೊತೆಗಿದ್ದ ಅಂತ ಖುಷಿ ಪಡಬೇಕಾ ಅಥವಾ ದೂರ ಬೇಕಾ ಅನ್ನೋ ಗೊಂದಲದಲ್ಲಿ ಇದ್ದೀನಿ. ಯಾಕೆ ಹೀಗೆ ಆಯ್ತು ಅನ್ನೋ ಪ್ರಶ್ನೆ ನಮ್ಮಲ್ಲಿ ಆದರೆ ಯಾವುದಕ್ಕೂ ಉತ್ತರಗಳು ಸಿಗುವುದಿಲ್ಲ. ನಮ್ಮ 10 ವರ್ಷದ ಜೀವನವನ್ನು ಪ್ಲ್ಯಾನ್ ಮಾಡಿರುತ್ತೀವಿ ಆದರೆ ಇದ್ದಕ್ಕಿದ್ದಂತೆ ಈ ಘಟನೆಯಿಂದ ಜೀವನ ಕುಗ್ಗುತ್ತದೆ. ಆಗ ನನ್ನ ಮಗನಿಗೆ ನಾನು ನಾಲ್ಕು ತಿಂಗಳ ಪ್ರೆಗ್ನೆಂಟ್ ಆಗಿದ್ದೆ. ನನ್ನ ಮಗನ ಹೆಸರು ಹರ್ಷ್ ಅಂತ. ಆಗ ನಾವು ಮತ್ತೊಂದು ಮಗುವಿನ ಪ್ಲ್ಯಾನ್ ಮಾಡುತ್ತಿರಲಿಲ್ಲ ಬೇಕಾ ಬೇಡ್ವಾ ಅನ್ನೋ ತರ ಇದ್ದಾಗ ಇರಲಿ ಮತ್ತೊಂದು ಮಗು ಇರಲಿ ಅಂತ ಮುಂದುವರೆಯುತ್ತೀವಿ. ಮಗಳನ್ನು ಮತ್ತೊಮ್ಮೆ ದೇವರು ಕಳುಹಿಸಿ ಕೊಟ್ಟ ಅಂತ ಖುಷಿ ಪಡಬೇಕೋ ಗೊತ್ತಿಲ್ಲ' ಎಂದು ಚಂದನಾ ಗುಡಿ ಯೂಟ್ಯೂಬ್ ಚಾನೆಲ್‌ನಲ್ಲಿ ಅಮೃತಾ ಮಾತನಾಡಿದ್ದಾರೆ.
ಕೊನೆಗೂ ಮದುವೆ ಬಗ್ಗೆ ಮೌನ ಮುರಿದ ಚೈತ್ರಾ ಕುಂದಾಪುರ; ಹುಡುಗ ಸಿನಿಮಾ ಇಂಡಸ್ಟ್ರಿಯಲ್ಲಿದ್ದಾನಾ?
'ಆಕ್ಸಿಡೆಂಟ್ ನಡೆದಾಗ ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಸಾಕಷ್ಟು ಚೆಕಪ್ ಮಾಡಿದರು ಆಗ ನನ್ನ ಹೊಟ್ಟೆಯಲ್ಲಿ ಇದ್ದ ಮಗು ಹಾರ್ಟ್ ಬೀಟ್ ಸಿಗುತ್ತಿರಲಿಲ್ಲ. ಸುಮಾರು ಎರಡು ಗಂಟೆಗಳ ಕಾಲ ಚೆಕಪ್ ಮಾಡುತ್ತಿದ್ದರು. ಮಗುದು ಹಾರ್ಟ್‌ಬೀಟ್ ನಿಂತುಬಿಟ್ಟಿದೆ ಎಂದು ಹೇಳಬೇಕಿತ್ತು ಆದರೆ ಅವರು ಧೈರ್ಯ ಕೊಟ್ಟು....ಹೊರಗಡೆ ನನ್ನ ಫ್ಯಾಮಿಲಿ ಮತ್ತು ಸ್ನೇಹಿತರು ಪ್ರಾರ್ಥನೆ ಮಾಡುತ್ತಿದ್ದರಂತೆ. ದಯವಿಟ್ಟು ಸಮನ್ವಿ ಅಮ್ಮನಿಗೆ ಈ ರೀತಿ ಮಾಡಬೇಕು ದಯವಿಟ್ಟು ವಾಪಸ್ ಬಾ ಅಂತ...ತಕ್ಷಣವೇ ಹಾರ್ಟ್‌ಬೀಟ್ ಬಂತು ಅಂತ ಡಾಕ್ಟರ್ ಹೇಳಿದ್ದರು' ಎಂದು ಅಮೃತಾ ಹೇಳಿ ಭಾವುಕರಾಗಿದ್ದಾರೆ.
ತ್ರಿವಿಕ್ರಮ್ ಭವ್ಯಾಗೆ ಪ್ರಪೋಸ್ ಮಾಡಿದ್ದು ನಿಜನಾ? ಚೈತ್ರಾ ಕುಂದಾಪುರ ಮಾತುಕೇಳಿ ಕುಟುಂಬಸ್ಥರು ಶಾಕ್
'ಯಾವುದೋ ಕರ್ಮ ಫಲದಿಂದ ಇದನ್ನು ಅನುಭವಿಸಿದ್ದು ಆದರೆ ಒಂದೊಳ್ಳೆ ಪುಣ್ಯ ಫಲದಿಂದ ಮಗನನ್ನು ಪಡೆದೆವು. ಆ ಸಮಯದಲ್ಲಿ ನಾನು ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೆವು ಅದರಿಂದ ನನ್ನ ಮಗಳು ಎಲ್ಲರ ಮನೆ ಮಗಳು ಆಗಿಬಿಟ್ಟಿದ್ದಳು. ಆ ಸಮಯದಲ್ಲಿ ತುಂಬಾ ಜನರು ಆಶೀರ್ವಾದ ಮಾಡಿದ್ದಾರೆ ಅವಳಿಗೆ....ಜನರ ಪ್ರೀತಿ ಸಂಪಾದನೆ ಪಡೆದುಕೊಂಡು ಆಕೆ ಹೋಗಿದ್ದಾಳೆ ಅನಿಸುತ್ತದೆ. ನನ್ನ ಮಗ ಹರ್ಷಗೂ ತುಂಬಾ ಪ್ರೀತಿ ಕೊಡುತ್ತಿದ್ದೀರಿ' ಎಂದಿದ್ದಾರೆ ಅಮೃತಾ.
ನಟ ಶರಣ್ ಮಗಳಿಗೆ ಈ ಬಿಗ್ ಬಾಸ್ ಸ್ಪರ್ಧಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ; ಮನೆಯಲ್ಲಿ ಟಿವಿನೇ ಬದಲಾಯಿಸಿ ಬಿಟ್ಟಿದ್ದಾರೆ