ಪ್ರೇಮಿಗಳು ಭೂಗತ ಲೋಕಕ್ಕೆ ಹೋಗುತ್ತಾರೆ. ಖಳನಾಯಕ ಅಕ್ರಮ ಮಾರ್ಗದಲ್ಲಿ ಗಳಿಸಿರುವ ಹಣ ಕದಿಯುತ್ತಾರೆ. ಈ ವಿಷಯ ಗೃಹಮಂತ್ರಿಗೆ ತಿಳಿಯುತ್ತದೆ. ಮುಂದೇನು ಎಂಬುದು ಚಿತ್ರದ ಕತೆ ಡೆಡ್ಲಿ ಲವರ್ಸ್.
‘ಡೆಡ್ಲಿ ಲವರ್ಸ್’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಈ ಚಿತ್ರದ ಕುರಿತು ನಿರ್ದೇಶಕ ನಾಗೇಂದ್ರ, ‘ಪ್ರೇಮಿಗಳು ಭೂಗತ ಲೋಕಕ್ಕೆ ಹೋಗುತ್ತಾರೆ. ಖಳನಾಯಕ ಅಕ್ರಮ ಮಾರ್ಗದಲ್ಲಿ ಗಳಿಸಿರುವ ಹಣ ಕದಿಯುತ್ತಾರೆ. ಈ ವಿಷಯ ಗೃಹಮಂತ್ರಿಗೆ ತಿಳಿಯುತ್ತದೆ. ಮುಂದೇನು ಎಂಬುದು ಚಿತ್ರದ ಕತೆ. ನಿರ್ದೇಶನದ ಜತೆಗೆ ನಾನೇ ನಿರ್ಮಾಣ ಕೂಡ ಮಾಡಿದ್ದೇನೆ’ ಎಂದು ಹೇಳಿದ್ದಾರೆ. ಜೂನ್ 20ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಅನಘ ಎಂಟರ್ ಪ್ರೈಸಸ್ ಸಂಸ್ಥೆಯ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ.
ಹೊಸ ನಟಿ ತನುಪ್ರಸಾದ್ ಅವರು ನಾಯಕಿಯಾಗಿ ನಟಿಸಿದ್ದರೆ, ಅಖಿಲ್ ಕುಮಾರ್ ಅವರು ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಎಸಿಪಿ ಪಾತ್ರದಲ್ಲಿ ಪ್ರೇಮಾ ಗೌಡ ಕಾಣಿಸಿಕೊಂಡಿದ್ದು, ಗೃಹಮಂತ್ರಿ ಪಾತ್ರದಲ್ಲಿ ಲಹರಿ ವೇಲು ಅಭಿನಯಿಸಿದ್ದಾರೆ. ಜೊತೆಗೆ ಭಾಸ್ಕರ್, ವಿನೋದ್, ಎ.ಆರ್. ಲೋಕೇಶ್ ಮುಂತಾದ ಕಲಾವಿದರು ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಹೆಚ್.ಎನ್. ನರಸಿಂಹಮೂರ್ತಿ ಅವರು ಡೆಡ್ಲಿ ಲವರ್ಸ್ ಸಿನಿಮಾಗೆ ಛಾಯಾಗ್ರಹಣ ಮಾಡಿದ್ದಾರೆ. ಲಯ ಕೋಕಿಲ ಸಂಗೀತ ನೀಡಿದ್ದಾರೆ. ವಿಕ್ರಂ ಸಿಂಗ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಕಾರ್ಯಕಾರಿ ನಿರ್ಮಾಪಕರಾಗಿ ಎ.ಆರ್. ಲೋಕೇಶ್ ಕೆಲಸ ಮಾಡಿದ್ದಾರೆ. ಈ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಸಿರಿ ಮ್ಯೂಸಿಕ್ ಮೂಲಕ ಬಿಡುಗಡೆ ಆಗಿವೆ. ಮಂಚನ ಡ್ಯಾಂ ಮತ್ತು ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ಡೆಡ್ಲಿ ಲವರ್ಸ್ ಸಿನಿಮಾ ಮಾಡಲಾಗಿದೆ. ಈವರೆಗೂ ಹದಿನೆಂಟು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಪ್ರಶಾಂತ್ ನಾಯಕ್ ಅವರು ಈಗ ತಾಂಡವ ಮೂವೀ ಮೇಕರ್ಸ್ ಸಂಸ್ಥೆ ಮೂಲಕ ಡೆಡ್ಲಿ ಲವರ್ಸ್ ಸಿನಿಮಾದ ವಿತರಣೆ ಮಾಡುತ್ತಿದ್ದಾರೆ.
ಸಿದ್ದಿ ಸಮುದಾಯದ ಕತೆ ದೇವಸಸ್ಯ: ಒಂದು ಅಪರೂಪದ ಗಿಡದ ಸುತ್ತಾ ನಡೆಯುವ ಕತೆಯನ್ನು ಒಳಗೊಂಡ ಚಿತ್ರಕ್ಕೆ ‘ದೇವಸಸ್ಯ’ ಎನ್ನುವ ಹೆಸರು ಇಟ್ಟಿದ್ದು, ಇದರ ಶೀರ್ಷಿಕೆ ಟೀಸರ್ ಅನಾವರಣ ಆಗಿದೆ. ಅನಂತಕುಮಾರ್ ಹೆಗ್ಡೆ ನಿರ್ಮಾಣದ, ಕಾರ್ತೀಕ್ ಭಟ್ ನಿರ್ದೇಶನದ ಚಿತ್ರವಿದು. ನವೀನ್ ಕೃಷ್ಣ ಟೈಟಲ್ ಟೀಸರ್ ಬಿಡುಗಡೆ ಮಾಡಿದರು. ಕಾರ್ತಿಕ್ ಭಟ್, ಸಿರ್ಸಿ ಸುತ್ತಮುತ್ತಲಿನ ಕಾಡು ಪ್ರದೇಶಗಳಲ್ಲಿ ವಾಸಿಸುವ ಸಿದ್ದಿ ಸಮುದಾಯದ ಕತೆಯಿದು. ಸಿದ್ದಿ ಹುಡುಗನ ಪಾತ್ರವನ್ನು ಸೆಲ್ವಿನ್ ದೇಸಾಯಿ ಮಾಡಿದ್ದಾರೆ. ಮತ್ತೊಂದು ಮುಖ್ಯ ಪಾತ್ರವನ್ನು ಅಹನಾ ಮಾಡಿದ್ದಾರೆ.
ಬಿಂಬಿಕಾ ಚಿತ್ರದ ನಾಯಕಿ. 1995ರಲ್ಲಿ ನಡೆಯುವ ಕತೆಯಾಗಿದ್ದರಿಂದ ಸೆಟ್‌ಗಳನ್ನು ಹಾಕಿದ್ದು, 45 ದಿನಗಳ ಚಿತ್ರೀಕರಣ ಆಗಿದೆ ಎಂದರು. ಅನಂತಕುಮಾರ್ ಹೆಗ್ಡೆ, ‘ನನಗೆ ಮೊದಲಿಂದಲೂ ಸಿನಿಮಾ ಹೀರೋ ಆಗಬೇಕೆಂಬ ಆಸೆಯಿತ್ತು. ಈಗ ನಿರ್ಮಾಪಕನಾಗಿದ್ದೇನೆ. ಇದು ದೇವಸಸ್ಯ ಎನ್ನುವ ಸಂಜೀವಿನಿ ಗಿಡದ ಸುತ್ತ ನಡೆಯುವ ಕತೆ. 30 ವರ್ಷಗಳ ಹಿಂದಿದ್ದ ಊರನ್ನು ಮರುಸೃಷ್ಟಿ ಮಾಡಿದ್ದೇವೆ’ ಎಂದರು.
