ಹೆಬ್ಬುಲಿ ಕಟ್ ನೋಡುತ್ತಾ ಹೋದಂತೆ ಮನಸು ಭಾರವಾಗುತ್ತದೆ: ಸತೀಶ್ ನೀನಾಸಂ
ರಾಯಚೂರು ಮೂಲದ ಭೀಮರಾವ್ ಪೈದೊಡ್ಡಿ ನಿರ್ದೇಶನದ ಹೆಬ್ಬುಲಿ ಕಟ್ ಚಿತ್ರದ ಟ್ರೇಲರನ್ನು ಕಿಚ್ಚ ಸುದೀಪ್ ಮೆಚ್ಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೇಲರ್ ಹಂಚಿಕೊಂಡಿದ್ದಾರೆ.

ಹೆಸರಿನಿಂದಲೇ ಗಮನ ಸೆಳೆದಿರುವ ‘ಹೆಬ್ಬುಲಿ ಕಟ್’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ರಾಯಚೂರು ಮೂಲದ ಭೀಮರಾವ್ ಪೈದೊಡ್ಡಿ ನಿರ್ದೇಶನದ ಈ ಚಿತ್ರದ ಟ್ರೇಲರನ್ನು ಕಿಚ್ಚ ಸುದೀಪ್ ಮೆಚ್ಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೇಲರ್ ಹಂಚಿಕೊಂಡಿದ್ದಾರೆ.
ಈ ಚಿತ್ರವನ್ನು ಅರ್ಪಿಸುತ್ತಿರುವ ಸತೀಶ್ ನೀನಾಸಂ, ನಾನು ಚಿತ್ರ ನೋಡಿದ್ದೇನೆ. ಈ ಕತೆ ನನಗೆ ತುಂಬಾ ಕನೆಕ್ಟ್ ಆಗುತ್ತದೆ. ಸಿನಿಮಾ ನೋಡುತ್ತಾ ಹೋದಂತೆ ಮನಸು ಭಾರವಾಗುತ್ತದೆ.
ಆದರೆ, ರೀಲ್ಸ್, ಗಲಾಟೆ, ಯುದ್ಧದ ಮಧ್ಯೆ ಇಂಥ ಬ್ಯೂಟಿಫುಲ್ ಸಿನಿಮಾ ಬರುವುದು ಕಷ್ಟ. ಸತ್ಯ ಹೇಳುವ ಇಂಥ ಚಿತ್ರಗಳನ್ನು ಚಿತ್ರಮಂದಿರಗಳಿಗೆ ಬಂದು ನೋಡಬೇಕು ಎಂದರು.
ನಿರ್ದೇಶಕ ಭೀಮರಾವ್ ಪೈದೊಡ್ಡಿ, ತುಂಬಾ ಜನ ಚಿತ್ರ ನೋಡಿ ಮೆಚ್ಚಿಕೊಂಡಿದ್ದಾರೆ. ನೈಜ ಘಟನೆ ಆಧಾರಿತ ಸಿನಿಮಾ. ಸುದೀಪ್ ಅವರನ್ನು ಇಲ್ಲಿ ಐಕಾನ್ ಆಗಿ ತೋರಿಸಿದ್ದೇವೆ ಎಂದರು.
ಮೌನೇಶ್ ನಟರಂಗ, ಅನನ್ಯ ನಿಹಾರಿಕ, ಉಮಾ ವೈ ಜಿ, ವಿನಯ್ ಮಹಾದೇವನ್, ಮಹಾಂತೇಶ್ ಹಿರೇಮಠ, ಪುನೀತ್ ಶೆಟ್ಟಿ ಚಿತ್ರದಲ್ಲಿದ್ದಾರೆ. ಜುಲೈ 4ರಂದು ಚಿತ್ರ ತೆರೆಗೆ ಬರುತ್ತಿದೆ.