ಮೊನ್ನೆಯಷ್ಟೆಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಆಯ್ತು. ಮುಖ ಕಾಣದ, ಪೊಲೀಸ್‌ ಡ್ರೆಸ್‌ನಲ್ಲಿದ್ದ ವ್ಯಕ್ತಿಯೊಬ್ಬನ ಚಿತ್ರವನ್ನು ನ್ಯೂಸ್‌ ಪೇಪರ್‌ ಹಿನ್ನೆಲೆಯಲ್ಲಿ ಮೂಡಿಸಲಾಗಿತ್ತು. ಹೀಗೆ ಭಿನ್ನವಾಗಿ ಫಸ್ಟ್‌ ಲುಕ್‌ ಬಿಡುಗಡೆ ಮಾಡಿಕೊಂಡ ಈ ಚಿತ್ರದ ನಿರ್ದೇಶಕರು ಅಜಿತ್‌ ಕುಮಾರ್‌ ಜೆ. ಜ್ಞಾನ ಶೇಖರ್‌ ಚಿತ್ರದ ನಿರ್ಮಾಪಕರು. ಸುಷ್ಮಾ ನಾಯರ್‌ ಚಿತ್ರದ ನಾಯಕಿ. ಫಸ್ಟ್‌ ಬಿಡುಗಡೆ ನೆಪದಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು. ‘ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿರುವ ಕತೆ ಹಾಗೂ ಈ ಕತೆಯನ್ನು ಹೇಳಲು ಬಳಸಿಕೊಂಡಿರುವ ತಾಂತ್ರಿಕತೆ ಹೊಸ ರೀತಿಯಲ್ಲಿದೆ. ಕನ್ನಡದ ಮಟ್ಟಿಗೆ ಇದೊಂದು ಬೇರೆಯದ್ದೇ ಆದ ಸಿನಿಮಾ ಅನಿಸುವುದರಲ್ಲಿ ಎರಡು ಮಾತಿಲ್ಲ. ಕ್ರೈಮು, ಪ್ರೀತಿ ಹಾಗೂ ಸಂಬಂಧಗಳು ಚಿತ್ರದ ಪ್ರಧಾನ ಅಂಶಗಳು’ ಎಂದು ಚಿತ್ರದ ಕುರಿತು ಹೇಳಿಕೊಂಡಿದ್ದು ನಿರ್ದೇಶಕರು.

ಐರಾ ಉಗುರು ಕತ್ತರಿಸಿದ ರಾಧಿಕಾ ಪಂಡಿತ್, ಮುದ್ದಾದ ವಿಡಿಯೋ ನೋಡಿ

ಚೆನ್ನೈ ಮೂಲದ ಶಕ್ತಿ ಚಿತ್ರಕ್ಕೆ ಸಂಗೀತ ನೀಡಿದರೆ, ಕೇರಳದ ಅರ್ಜುನ್‌ ಅಕ್ಕೋಟ್‌ ಕ್ಯಾಮೆರಾ ಹಿಡಿದಿದ್ದಾರೆ. ನಗರದಲ್ಲಿ ಒಂದಿಷ್ಟುಕೊಲೆಗಳು ನಡೆಯಲಾರಂಭಿಸುತ್ತವೆ. ಇವುಗಳ ತನಿಖೆಗೆ ಇಳಿಯುವ ಪೊಲೀಸ್‌ ಅಧಿಕಾರಿಗೆ ಪತ್ರಿಕೆಯೊಂದರ ತನಿಖಾ ವರದಿಗಾರ್ತಿ ಜತೆಯಾಗುತ್ತಾಳೆ. ಹೀಗೆ ಕೊಲೆಯಾದ ಪ್ರಕರಣವೊಂದು ಸಿಬಿಐಗೆ ವರ್ಗಾಯಿಸಲಾಗುತ್ತದೆ. ಮುಂದೇನಾಗುತ್ತದೆ ಎಂಬುದು ಚಿತ್ರದ ಒಂದು ಸಾಲಿನ ಕತೆ. ಇಲ್ಲಿ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಅಜಿತ್‌ ಜಯರಾಜ್‌ ಕಾಣಿಸಿಕೊಂಡಿದ್ದಾರೆ. ‘ಇಲ್ಲಿವರೆಗೂ ಒಂದಿಷ್ಟುಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ಮಾಡಿಕೊಂಡು ಬಂದಿರುವೆ. ಈಗ ರೈಮ್ಸ್‌ ಮೂಲಕ ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ಬರುತ್ತಿದ್ದೇನೆ. ಹೊಸ ರೀತಿಯ ಅನುಭವ ಕೊಟ್ಟಸಿನಿಮಾ ಇದು’ ಎಂದರು ಅಜಿತ್‌ ಜಯರಾಜ್‌.

ಡಿಪ್ರೆಷನ್‌ನಲ್ಲಿ 'ಕಿರಾತಕ' ನಟಿ, ಬಿಗ್ ಬಾಸ್‌ ಸ್ಪರ್ಧಿ? ಏನಿದು ಟ್ಟೀಟ್!

ಸುಷ್ಮಾ ನಾಯರ್‌, ಪೊಲೀಸ್‌ ಅಧಿಕಾರಿ ಪತ್ನಿ ಪಾತ್ರ ಮಾಡಿದ್ದಾರೆ. ಇವರಿಗೆ ಇದು ಮೂರನೇ ಸಿನಿಮಾ. ಅಭಿನಯ, ಮಿಮಿಕ್ರಿಗೋಪಿ, ಅರ್ಪಣ, ಚನ್ನರಾಜು, ಬೇಬಿ ಬಾಸುತಿ ಮುಂತಾದವರು ನಟಿಸುತ್ತಿದ್ದಾರೆ. ತುಮಕೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದ್ದು, ಎಂ.ರಮೇಶ್‌ ಆರ್ಯ, ಗಿರೀಶ್‌ ಹಾಗೂ ರವಿಕುಮಾರ್‌ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ.