ತಮಿಳು ಬಿಗ್ ಬಾಸ್‌ ಸುಂದರ ಚೆಲುವೆ ಒವಿಯಾ ಕಾಲಿವುಡ್‌ನಲ್ಲಿ ಮಾತ್ರವಲ್ಲದೇ ಸ್ಯಾಂಡಲ್‌ವುಡ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆ 'ಕಿರಾತಕ' ಚಿತ್ರದಲ್ಲಿ ಮಿಂಚಿದ್ದಾರೆ. ಈ ಮುದ್ದು ಮುಖದ ಹುಡುಗಿ ಡಿಪ್ರೆಷನ್‌ನಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು ಈ ಬಗ್ಗೆ ಸ್ವತಃ ಒವಿಯಾ ಕ್ಲಾರಿಟಿ ನೀಡಿದ್ದಾರೆ. 

ಕ್ರಿಕೆಟರ್‌ ಅಯ್ಯಪ್ಪ - ಕಿರುತೆರೆ ನಟಿ ಅನು ಪೋವಮ್ಮ ಪೇಮ ಕಥೆ ರಿವೀಲ್‌! ಇಲ್ಲಿದೆ ನೋಡಿ

ಒವಿಯಾ ಸಾಕಷ್ಟು ಚಿತ್ರಗಳಲ್ಲಿ ಮಿಂಚಿದ್ದರೂ ಪ್ರೇಕ್ಷಕರ ಮನಸ್ಸು ಗೆದ್ದಿದ್ದು ಮಾತ್ರ ತಮಿಳು ಬಿಗ್ ಬಾಸ್‌ ಸೀಸನ್‌ 1 ರಲ್ಲಿ.  ವಿಭಿನ್ನ ವ್ಯಕ್ತಿತ್ವವುಳ್ಳ ಒವಿಯಾ ಬಿಗ್ ಬಾಸ್‌ನಲ್ಲಿ ಒಂಟಿಯಾಗಿ ಅಟ ಶುರು ಮಾಡಿದ್ದರು. ಸ್ಪರ್ಧೆಯಲ್ಲಿ ಆಕೆ ಪ್ರಾಮಾಣಿಕತೆಗೆ ಅಭಿಮಾನಿಗಳು ಫಿದಾ ಆಗಿ  'ಒವಿಯಾ ಆರ್ಮಿ' ಎಂದು ಪೇಜ್‌ ಶುರು ಮಾಡಿಕೊಂಡು ಮಾನಸಿಕವಾಗಿ ಆಕೆಗೆ ಸಾಥ್ ನೀಡಿದರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಸ್ಪರ್ಧಿ; ಲಾಸ್ಟ್‌ ಕಿಸ್‌ ಫೋಟೋ ಲೀಕ್!

ಜನವರಿ 29 ರಂದು ಟ್ಟಿಟರ್ ಖಾತೆಯಲ್ಲಿ ಒವಿಯಾ 'Life has no meaning' ಎಂದು ಟ್ಟೀಟ್‌ ಮಾಡಿದರು.  ತಕ್ಷಣವೇ ಈ ಟ್ಟೀಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಭಿಮಾನಿಗಳು ಅಕೆ ಡಿಪ್ರೆಷನ್‌ನಲ್ಲಿದ್ದಾರೆ ಎಂದು ಕಲ್ಪಿಸಿಕೊಂಡರು.  ಗಾಳಿ ಮಾತು ದೊಡ್ಡ ಮಟ್ಟದಲ್ಲಿ ಸೌಂಡ್‌ ಮಾಡುತ್ತಿದ್ದಂತೆ ಒವಿಯಾ ' ಇದೊಂದು ಕಲ್ಪನೆ ಅಷ್ಟೇ. ನನಗೆ ಏನೂ ಆಗಿಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.