ಸ್ಯಾಂಡಲ್‌ವುಡ್‌ನ‌ಲ್ಲಿ ಲವರ್‌ ಬಾಯ್‌ ಇಮೇಜ್‌ನಲ್ಲೇ ಹೆಚ್ಚಾಗಿ ಗುರುತಿಸಿಕೊಂಡ ನಟ ಅಜಯ್ ರಾವ್‌ ಆ ಇಮೇಜ್‌ನಿಂದ ಹೊರಬಂದು ನಟಿಸುತ್ತಿದ್ದಾರೆ. ಡಿಫರೆಂಟ್ ಲುಕ್‌ & ಇಮೇಜ್‌ನಲ್ಲಿ ಕೃಷ್ಣ ಟಾಕೀಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ನಟ.

ಸಸ್ಪೆನ್ಸ್‌, ಥ್ರಿಲ್ಲರ್‌ ಹಾರರ್ ಎಲಿಮೆಂಟ್ ಇರುವ ಈ ಸಿನಿಮಾದಲ್ಲಿ ಸೀರಿಯಸ್ ರೋಲ್ನಲ್ಲಿ ಅಜಯ್ ರಾವ್ ಕಾಣಿಸಿಕೊಂಡಿದ್ದಾರೆ. ‘ಕೃಷ್ಣ ಟಾಕೀಸ್‌’ಚಿತ್ರದ ಟ್ರೇಲರ್‌ ಬಿಡುಗಡೆಯಾಗಿ ನೋಡುಗರ ಗಮನ ಸೆಳೆದಿದೆ. ಅಜಯ್ ರಾವ್ ಪಾತ್ರ ಕೂಡ ಇಂಟ್ರಸ್ಟಿಂಗ್ ಆಗಿ ಮೂಡಿಬಂದಿದೆ.

40 ಸೆಕೆಂಡ್‌ ಡೈಲಾಗ್‌ ಹೇಳಿ ನಟ ಅಜಯ್ ರಾವ್‌ಗೆ ಸವಾಲ್ ಹಾಕಿದ ಹಾಸ್ಯ ನಟ ಚಿಕ್ಕಣ್ಣ ವಿಡಿಯೋ ವೈರಲ್!

ಚಿತ್ರದಲ್ಲಿ ಅಜಯ್ ರಾವ್ ಪತ್ರಕರ್ತನ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕ ವಿಜಯಾನಂದ್ ಸಸ್ಪೆನ್ಸ್‌, ಥ್ರಿಲ್ಲರ್‌ ಶೈಲಿಯಲ್ಲೇ ಇದೊಂದು ಹೊಸ ಪ್ರಯತ್ನ ಎನ್ನುತ್ತಾರೆ. ಸಿನಿಮಾದಲ್ಲಿ ಹಾರರ್‌, ಫ್ಯಾಮಿಲಿ ಸೆಂಟಿಮೆಂಟ್‌, ಎಮೋಷನ್‌, ಆಕ್ಷನ್‌ ಎಲ್ಲವೂ ಇದೆ. ಅಜಯ್‌ ರಾವ್‌ ತಮ್ಮ ಸಿನಿಮಾ ಕೆರಿಯರ್‌ನಲ್ಲೇ ಫ‌ಸ್ಟ್‌ ಟೈಮ್‌ ಇಂಥದ್ದೊಂದು ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದು ಚಿತ್ರದ ಬಗ್ಗೆ ನಿರ್ದೇಶಕರ ಮಾತುಗಳು.

ಗೋಕುಲ್ ಎಂಟರ್‌ಟೈನರ್ ಬ್ಯಾನರ್‌ನಲ್ಲಿ ಗೋವಿಂದರಾಜು ಎ.ಹೆಚ್ ಆಲೂರು ಈ ಚಿತ್ರ ನಿರ್ಮಿಸಿದ್ದಾರೆ. ಒಂದಷ್ಟು ನೈಜಘಟನೆಗಳನ್ನು ಆಧರಿಸಿ ಚಿತ್ರ ನಿರ್ಮಾಣವಾಗಿದೆ. ಸತತ 3 ವರ್ಷಗಳ ಪರಿಶ್ರಮದ ‘ಕೃಷ್ಣ ಟಾಕೀಸ್’ ಏಪ್ರಿಲ್ 16ರಂದು ತೆರೆ ಕಾಣುತ್ತಿದೆ. ಎಲ್ಲ ಅಂದುಕೊಂಡಂತೆ ಆಗಿದ್ರೆ ಕಳೆದ ವರ್ಷವೇ ಸಿನಿಮಾ ತೆರೆಕಂಡಿರಬೇಕಿತ್ತು ಆದ್ರೆ ಕೋವಿಡ್ 19 ಎಲ್ಲರ ಲೆಕ್ಕಾಚಾರ ತಲೆಕೆಳಗೆ ಮಾಡಿತ್ತು.

ಕೃಷ್ಣ ಹೆಸರಲ್ಲಿ ನೂರು ಸಿನಿಮಾ ಬಂದ್ರೂ ಮಾಡ್ತೀನಿ: ಅಜಯ್‌ ರಾವ್‌

ಈಗ ಸಿನಿಮಾ ಬಿಡುಗಡೆಗೆ ರೆಡಿಯಾಗಿ ನಿಂತಿದೆ. ಚಿತ್ರತಂಡ ಕೂಡ ಸಿನಿಮಾ ಪ್ರಚಾರ ಕಾರ್ಯದಲ್ಲಿ ನಿರತವಾಗಿದ್ದು ಸಿನಿರಸಿಕರ ಪ್ರತಿಕ್ರಿಯೆ ಕಂಡು ಚಿತ್ರತಂಡ ಹರುಷಗೊಂಡಿದೆ. ‘ಕೃಷ್ಣ ಟಾಕೀಸ್‌’ ಚಿತ್ರದಲ್ಲಿ ಅಪೂರ್ವ ಮತ್ತು ಸಿಂಧೂ ಲೋಕನಾಥ್‌ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಕಾಮಿಡಿ ಪಾತ್ರಕ್ಕೆ ಮೊದಲ ಬಾರಿ ಅಜಯ್ ರಾವ್ ಸಿನಿಮಾದಲ್ಲಿ ಚಿಕ್ಕಣ್ಣ ಬಣ್ಣ ಹಚ್ಚಿದ್ದಾರೆ.

 

ಉಳಿದಂತೆ ಶೋಭರಾಜ್‌, ಪ್ರಮೋದ್‌ ಶೆಟ್ಟಿ, ಮಂಡ್ಯ ರಮೇಶ್, ನಿರಂತ್, ಪ್ರಕಾಶ್ ತುಮಿನಾಡು ಮೊದಲಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ‘ಕೃಷ್ಣ ಟಾಕೀಸ್’ ಚಿತ್ರಕ್ಕೆ ಶ್ರೀಧರ್‌ ವಿ. ಸಂಭ್ರಮ್‌ ಸಂಗೀತ ಸಂಯೋಜನೆಯಿದ್ದು, ಈ ಸಿನಿಮಾ ಮೂಲಕ ಕೃಷ್ಣ ಸೀರೀಸ್ ಐದು ಸಿನಿಮಾಗೂ ಸಂಗೀತ ನಿರ್ದೇಶನ ಮಾಡಿದ ಖ್ಯಾತಿ ಇವರದ್ದಾಗಿದೆ. ಚಿತ್ರಕ್ಕೆ ಅಭಿಷೇಕ್‌ ಜಿ.ಕಾಸರಗೋಡು ಛಾಯಾಗ್ರಹಣವಿದೆ.