'ನಿಮ್ಮಿಬ್ರಿಗೂ ಮದ್ವೆ ಯಾವಾಗ?'  ಈ ಪ್ರಶ್ನೆ ಓದಿ ಕವಿತಾ ನಾಲಿಗೆ ಕಚ್ಚಿಕೊಂಡರು. 

ಚಿನ್ನು ಅಲಿಯಾಸ್ ಕವಿತಾ ಬರ್ತ್ ಡೇ ಕಳೆದ ಮೇಲೆ ಈ ಜೋಡಿ ಇನ್‌ಸ್ಟಾ ಲೈವ್ ಗೆ ಬಂದಿತ್ತು. ಚಂದನ್ ಕಾರಿನಲ್ಲಿ ಟ್ರಾವೆಲ್ ಮಾಡ್ತಾ ಲೈವ್ ಗೆ ಬಂದ್ರೆ ಕವಿತಾ ಮನೆಯಿಂದಲೇ ಲೈವ್ ಅಟೆಂಡ್ ಮಾಡುತ್ತಿದ್ದರು. ಶುರುವಲ್ಲಿ ಕವಿತಾ ಹತ್ರ ಚಂದ ಕೇಳಿದ್ದು, 'ಹ್ಯಾಪಿ ಬರ್ತ್ ಡೇ, ಏನು ಲೈವ್ ಗೆ ಬಂದಿದ್ದು?' ಅಂತ. ಬಹಳಾ ಜನ ಬರ್ತ್ ಡೇ ವಿಶ್ ಮಾಡಿದ್ರು. ಪ್ರತಿಯೊಬ್ಬರಿಗೂ ಥ್ಯಾಂಕ್ಸ್ ಹೇಳೋದು ಕಷ್ಟ, ಅದಕ್ಕೆ ಲೈವ್ ಗೆ ಬಂದೆ ಅಂತ ಕ..ವಿ..ತಾ ಉತ್ರ. ಈ ಮಾತು ಕೇಳಿ ಲೈವ್ ನೋಡ್ತಿದ್ದವರಿಗೆ ಶಾನೆ ಡೌಟ್ ಬಂತು. ತೀರಾ ಲೈವ್ ಗೆ ಬಂದು ಧನ್ಯವಾದ ಅರ್ಪಿಸುವಷ್ಟು ದೊಡ್ಡ ಅಭಿಮಾನಿ ಬಳಗ ಈ ಹೆಣ್ಮಗಳಿಗಿದೆಯಾ, ಅಥವಾ ಬರೀ ಸ್ಕೋಪ್ ತಗೊಳ್ಳೋದಕ್ಕೆ ಹೀಗಾಡ್ತಿದ್ದಾರಾ ಅಂತ. ಇರಲಿ. ಚಂದು ಮತ್ತು ಚಿನ್ನು ನಡುವಿನ ಮಾತುಕತೆ ಮುಂದುವರಿಯಿತು. 

'ಹ್ಯಾಪಿ ಬರ್ತ್ ಡೇ' ಅಂತ ಚಂದು ಚಿನ್ನುಗೆ ವಿಶ್ ಮಾಡ್ತಾರೆ! ಅರೆರೇ ಮತ್ತೆ ಡೌಟು.. ಅಷ್ಟು ಕ್ಲೋಸಾಗಿರೋ ಚಂದು ಚಿನ್ನುಗೆ ಬರ್ತ್ ಡೇ ದಿನ ವಿಶ್ ಮಾಡಿಲ್ವಾ.. 'ಥ್ಯಾಂಕ್ಯೂ' ಚಿನ್ನು ಉತ್ತರ. 'ಸೆಲಬ್ರೇಶನ್ ಜೋರಾ?' ಅಮಾಯಕನಂತೆ ಚಂದು ಪ್ರಶ್ನೆ. 'ಹೂಂ, ಫ್ರೆಂಡ್ಸ್ ಎಲ್ಲ ಬಂದಿದ್ರು, ನೀವೂ ಬಂದಿದ್ರಲ್ಲಾ.. ಬೇಗ ಹೋದ್ರಿ..' ಅಂದಾಗ ಕಳ್ ಬೆಕ್ಕು ಸಿಕ್ ಬುಡ್ತು. ಕವಿತಾ ಬರ್ತ್ ಡೇ ಪಾರ್ಟಿಗೆ ಹೋಗಿ ಒಂದಿಷ್ಟು ಹೊತ್ತು ಅಲ್ಲಿದ್ದು, ತುಸು ಬೇಗನೆ ಹೊರನಡೆದ ಚಂದು ಲೈವ್ ನಲ್ಲಿ ಸಖತ್ತಾಗೇ ಓಳು ಬಿಟ್ರು. ಕಿಲಾಡಿ ಜೋಡಿಗಳು ಜನರನ್ನು ಎಷ್ಟು ಚೆನ್ನಾಗಿ ರೈಲು ಹತ್ತಿಸ್ತಾರೆ ಅನ್ನೋದಕ್ಕೆ ಈ ಮಾತುಕತೆಯೇ ಸಾಕು. ಚಿನ್ನು ಬರ್ತ್ ಡೇ ದಿನ ಫ್ರೆಂಡ್ಸ್ ಎಲ್ಲ ಬೆಳಗಿನ ಜಾವ ಆರು ಗಂಟೆಯವರೆಗೂ ಗೇಮ್ಸ್ ಆಡಿ ಆಮೇಲೆ ಆರು ಗಂಟೆಗೆ ನಿದ್ರೆ ಹೋಗಿದ್ದು ಅನ್ನೋ ವಿಚಾರ ಇಲ್ಲೇ ರಿವೀಲ್ ಆಯ್ತು. ಅಷ್ಟೊತ್ತಿಗೆ ಲೈಟಾಗಿ ಎಣ್ಣೆ ಪಾರ್ಟಿ ಬಟ್ಟೆ ಚಂದನ್ ಕೇಳಿ ಕಾಲೆಳೆಯುತ್ತಾರೆ. ಆಗ ಅದೆಲ್ಲ ನಿಮ್ಗೆ ಅಂತ ಹೇಳಿ ಸುಮ್ನಾಗ್ತಾರೆ ಕವಿತಾ. 'ನಮ್ ಬರ್ತ್ ಡೇ ಬರೀ ಜಿಮ್ ನಲ್ಲೇ ಸೆಲೆಬ್ರೇಶನ್' ಅಂದು ಬಿಡಬೇಕಾ ಚಂದು!

ಲಕ್ಷಿ ಬಾರಮ್ಮಾ ಚನ್ನು, ಚಂದನ್ ಮದ್ವೆಯಾಗೋದು ಹೌದಾ? ಏನೀ ಪೋಸ್ಟಿನ ಅರ್ಥ?

ಆಗ ಚಿನ್ನುಗೆ ತಾನೂ ಹುಡುಗನಾಗಿ ಹುಟ್ಟಿ ಆ ಥರ ಜಿಮ್ ನಲ್ಲಿ ಪಾರ್ಟಿ ಮಾಡ್ಬೇಕು ಅನ್ನೋ ಆಸೆ ಕೆರಳಿತು. ಅದನ್ನಾಕೆ ಲೈವ್ ನಲ್ಲಿ ಹೇಳೂ ಬಿಟ್ರು. ಆದ್ರೆ ಕಿಲಾಡಿ ಚಂದನ್ ಜಿಮ್ ನಲ್ಲಿ ಹುಡುಗೀರು ಬಂದ್ರೆ ಟ್ರೈನರ್ಸ್ ಹೆಂಗೆ ಹಿಂದಿದೇ ಸುತ್ಕೊಂಡು ಫಿಟ್ ನೆಸ್ ಪಾಠ ಹೇಳ್ಕೊಡ್ತಾರೆ, ಹುಡುಗ್ರಿಗಾದ್ರೆ ಬರೀ ಏನೋ ಕಲಿಸಿಕೊಟ್ಟಂಗೆ ಮಾಡಿ ಸುಮ್ನಾಗ್ತಾರೆ ಅನ್ನೋ ಪರಮ ಸತ್ಯವನ್ನು ಹೇಳಿ ಹುಡುಗರ ಬದುಕಿನ ಸಂಕಟಗಳನ್ನು ಹಂಚಿಕೊಳ್ತಾರೆ. 

ಈಗ ಮಾತು ಸೀರಿಯಲ್ ಕಡೆ ತಿರುಗುತ್ತೆ. ಹೈದ್ರಾಬಾದ್ ನಲ್ಲಿ ಸೀರಿಯಲ್, ಡಬ್ಬಿಂಗ್ ಅಂತ ಬ್ಯುಸಿಯಾಗಿರೋ ಚಂದನ್ ಅವರ ತೆಲುಗು ಸೀರಿಯಲ್ ಕನ್ನಡಕ್ಕೆ ಬರೋ ಸಿಗ್ನಲ್ ಕೊಡ್ತಾರೆ. ಆಮೇಲೆ ಡಬ್ಬಿಂಗ್ ಸೀರಿಯಲ್ ನಿಂದ ಕಲಾವಿದರಿಗೆ ಆಗ್ತಿರೋ ಸಮಸ್ಯೆ, ಈಗಿನ ಸೀರಿಯಲ್ ಕಲಾವಿದರ ಲೈಫ್ ಬಗ್ಗೆ ಲೈಟಾಗಿ ಮಾತುಕತೆ ನಡೆಯುತ್ತೆ. ಡಬ್ಬಿಂಗ್ ಸೀರಿಯಲ್ ಬೇಡ್ವೇ ಬೇಡ ಅಂತ ಚಿನ್ನು ತೀರ್ಪು ಕೊಡ್ತಾರೆ. 

ಹಾಟ್ ಫೋಟೋ ಶೂಟ್: ಡಿಫರೆಂಟ್ ಲುಕ್‌ನಲ್ಲಿ ಚಿನ್ನು..!

ಅಷ್ಟೊತ್ತಿಗೆ ಲೈವ್ ನಲ್ಲಿ ಯಾರದೋ ಪ್ರಶ್ನೆ, 'ನಿಮ್ಮಬ್ರ ಮದ್ವೆ ಯಾವಾಗ?' ಅಂತ. ಇದನ್ನೋದಿ ನಾಲಿಗೆ ಕಚ್ಚಿಕೊಳ್ತಾರೆ ಕವಿತಾ. ಅಥವಾ ಹಾಗೆ ನಾಟಕ ಮಾಡ್ತಾರೆ. 'ನಮ್ಮಿಬ್ರ ಮದ್ವೆ ಆಗಿದ್ಯಲ್ಲಾ..ನಾನೇ ನಿನ್ನ ಮೊದಲನೇ ಗಂಡ ಸೀರಿಯಲ್ ನಲ್ಲಿ' ಅಂತ ಚಂದು ಪ್ರಶ್ನೆ ಕೇಳಿದವರ ಬಾಯಿ ಮುಚ್ಚಿಸುತ್ತಾರೆ. ಆಗ ಸೀರಿಯಲ್ ಕತೆ ಮತ್ತೆ ಓಪನ್ ಆಗುತ್ತೆ. ಚಿನ್ನು ವಿರೋಧಿಸಿದರೂ ಬಿಡದೇ, ಅಷ್ಟು ಭಾರದ ಚಿನ್ನುವನ್ನು ಎತ್ತಿ ಸ್ಟೇರ್ ಕೇಸ್ ಇಳಿದ ಪ್ರಸಂಗವನ್ನು ಚಂದು ಮಸಾಲೆ ಹಾಕಿ ವಿವರಿಸಬೇಕೆ! ಸಿಟ್ಟಾದ ಚಿನ್ನು ಜಗಳಕ್ಕೆ ಬರ್ತಾರೆ. 

ಇಂಥಾದ್ದೊಂದು ಕಾಲೆಳೆತ, ಜಗಳ, ನಾಟ್ಕವನ್ನು ಲೈವ್ ನಲ್ಲಿ ಮಜವಾಗಿ ನೋಡಿದ ಜನ ಕೊನೆಗೆ ಹೇಳಿದ್ದು, 'ಇಬ್ರಿಗೂ ಮಾಡಕ್ಕೆ ಬೇರೇನು ಕೆಲ್ಸ ಇಲ್ಲ, ಇದ್ಯಾಕೆ ಹಿಂಗ್ ನಾಟ್ಕ ಆಡ್ತಾರೋ..' ಅಂತ!