'ಕನ್ನಡದ ರಿಯಲ್ ಹೀರೋ' Puneeth Rajkumar ನಟನೆಯ ಟಾಪ್ Super Hit ಸಿನಿಮಾಗಳಿವು!
Actor Puneeth Rajkumar Movies: ಇಂದು ಪುನೀತ್ ರಾಜ್‌ಕುಮಾರ್ ಅವರು ನಿಧನರಾಗಿ ನಾಲ್ಕು ವರ್ಷಗಳು ಕಳೆದಿವೆ. ಹೃದಯಾಘಾತದಿಂದ ಅವರು ನಿಧನರಾದರು. ನಟನೆಯ ಹೊರತಾಗಿ ಪುನೀತ್ ಅವರ ಸಾಮಾಜಿಕ ಕೆಲಸಗಳು ಜನರ ಮನಸ್ಸಿನಲ್ಲಿ ಉಳಿದಿವೆ. ಇವರ ಸೂಪರ್ ಹಿಟ್ ಸಿನಿಮಾಗಳ ಲಿಸ್ಟ್ ಇಲ್ಲಿದೆ.

'ಜೇಮ್ಸ್' ಸಿನಿಮಾ
'ಜೇಮ್ಸ್' ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶಿಸಿದ್ದರು. ಇದರಲ್ಲಿ ಪುನೀತ್ ಜೊತೆ ಪ್ರಿಯಾ ಆನಂದ್, ಶ್ರೀಕಾಂತ್ ಮುಖ್ಯ ಪಾತ್ರದಲ್ಲಿದ್ದರು.ಪುನೀತ್ ನಿಧನದ ಒಂದು ವರ್ಷದ ನಂತರ ಈ ಸಿನಿಮಾ ಬಿಡುಗಡೆಯಾಗಿತ್ತು. 45 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ 112 ಕೋಟಿ ಗಳಿಕೆ ಮಾಡಿತ್ತು.
ರಾಜಕುಮಾರ
2017ರಲ್ಲಿ ಪುನೀತ್ ರಾಜ್‌ಕುಮಾರ್ ಅವರ 'ರಾಜಕುಮಾರ' ಸಿನಿಮಾ ಬಂದಿತ್ತು. ಸಂತೋಷ್ ಆನಂದ್‌ರಾಮ್ ಈ ಸಿನಿಮಾ ನಿರ್ದೇಶನ ಮಾಡಿದ್ದರು. ಇದರಲ್ಲಿ ಪುನೀತ್ ಜೊತೆ ಪ್ರಿಯಾ ಆನಂದ್ ಮತ್ತು ಶರತ್ ಕುಮಾರ್ ಇದ್ದರು. 20 ಕೋಟಿ ಬಜೆಟ್‌ನ ಈ ಸಿನಿಮಾ 75 ಕೋಟಿ ಗಳಿಸಿತ್ತು.
'ಅಂಜನಿಪುತ್ರ'
2017ರಲ್ಲಿ ನಿರ್ದೇಶಕ ಹರ್ಷ ಮತ್ತು ಪುನೀತ್ ರಾಜ್‌ಕುಮಾರ್ ಅವರ 'ಅಂಜನಿಪುತ್ರ' ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾ ಹಾಡುಗಳು ಫುಲ್ ಹಿಟ್ ಆಗಿತ್ತು. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಮ್ಯಾ ಕೃಷ್ಣನ್ ಮುಖ್ಯ ಪಾತ್ರದಲ್ಲಿದ್ದರು. 17 ಕೋಟಿ ಬಜೆಟ್‌ನ ಈ ಸಿನಿಮಾ 42.2 ಕೋಟಿ ಗಳಿಸಿತ್ತು
'ನಟಸಾರ್ವಭೌಮ'
2019ರಲ್ಲಿ ಬಂದ ಪುನೀತ್ ರಾಜ್‌ಕುಮಾರ್ ಅವರ 'ನಟಸಾರ್ವಭೌಮ' ಚಿತ್ರದಲ್ಲಿ ಸರೋಜಾ ದೇವಿ ಮತ್ತು ಅನುಪಮಾ ಪರಮೇಶ್ವರನ್ ಮುಖ್ಯ ಪಾತ್ರದಲ್ಲಿದ್ದರು. ನಿರ್ದೇಶಕ ಪವನ್ ಒಡೆಯರ್ ಅವರ ಈ ಚಿತ್ರದ ಬಜೆಟ್ 25 ಕೋಟಿ ಆಗಿದ್ದು, 42 ಕೋಟಿ ಗಳಿಸಿತ್ತು.
'ಯುವರತ್ನ' ಸಿನಿಮಾ
2021ರಲ್ಲಿ ಪುನೀತ್ ರಾಜ್‌ಕುಮಾರ್ ಅವರ 'ಯುವರತ್ನ' ಸಿನಿಮಾ 2021ರಲ್ಲಿ ಬಂದಿತ್ತು. ಸಾಯೇಷಾ ಸೈಗಲ್ ಮತ್ತು ಸೋನು ಗೌಡ ಈ ಸಿನಿಮಾದಲ್ಲಿ ನಟಿಸಿದ್ದ. ಈ ಚಿತ್ರದ ನಿರ್ದೇಶಕರು ಸಂತೋಷ್ ಆನಂದ್‌ರಾಮ್. ಚಿತ್ರದ ಬಜೆಟ್ 25 ಕೋಟಿ ಮತ್ತು ಕಲೆಕ್ಷನ್ 40 ಕೋಟಿ ಆಗಿತ್ತು.
'ಪವರ್'
2014ರಲ್ಲಿ ತೆರೆ ಕಂಡ ಪುನೀತ್ ರಾಜ್‌ಕುಮಾರ್ ಅವರ 'ಪವರ್' ಸಿನಿಮಾದಲ್ಲಿ ತ್ರಿಶಾ ಕೃಷ್ಣನ್ ಮತ್ತು ಕೆಲ್ಲಿ ದೋರ್ಜಿ ಮುಖ್ಯ ಪಾತ್ರದಲ್ಲಿದ್ದರು. ನಿರ್ದೇಶಕ ಕೆ. ಮದೇಶ್ ಅವರ ಈ ಚಿತ್ರದ ಬಜೆಟ್ 12 ಕೋಟಿ ಆಗಿದ್ದು, 21 ಕೋಟಿ ಗಳಿಸಿತ್ತು.
'ಮಿಲನ' ಸಿನಿಮಾ
ನಿರ್ದೇಶಕ ಪ್ರಕಾಶ್, ಪುನೀತ್ ರಾಜ್‌ಕುಮಾರ್ ಅವರ 'ಮಿಲನ' ಸಿನಿಮಾ 2007ರಲ್ಲಿ ಬಂದಿತ್ತು. ಪಾರ್ವತಿ, ಪೂಜಾ ಗಾಂಧಿ, ಅಕುಲ್ ಬಾಲಾಜಿ ಜೊತೆಗಿನ ಈ ಸಿನಿಮಾ 28 ಕೋಟಿ ಗಳಿಸಿತ್ತು, ಇದರ ಬಜೆಟ್ 5 ಕೋಟಿ ಆಗಿತ್ತು.