ಬೆಂಗಳೂರು (ಮಾ. 09): ಸ್ಯಾಂಡಲ್ ವುಡ್ ನಲ್ಲಿ ಧೂಳ್ ಎಬ್ಬಿಸುತ್ತಿರುವ ’ಯಜಮಾನ’ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಸಣ್ಣಿ ಬಾ... ಹಾಡಿಗೆ ಥಳಕು ಬಳುಕಾಗಿ ಮೈ ಕುಣಿಸಿರುವ ತಾನ್ಯಾ ಹೋಪ್ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

ನೀನು ಹುಟ್ಟಿದ್ದು ನನಗಾಗಿಯೇ..' ಮಡದಿಗೆ ಯಶ್ ವಿಶ್

ಈಗ ಬಸಣ್ಣಿ ಚಿರಂಜೀವಿ ಸರ್ಜಾಗೆ ನಾಯಕಿಯಾಗಿದ್ದಾರೆ. ಯಜಮಾನದಲ್ಲಿ ದರ್ಶನ್ ಜೊತೆ ಬಸಣ್ಣಿಯಾಗಿ ನಟಿಸಿದ್ದ ತಾನ್ಯಾ ಚಿರಂಜೀವಿ ಸರ್ಜಾ ಅಭಿನಯದ ’ಖಾಕಿ’ ಚಿತ್ರಕ್ಕೆ ನಾಯಕಿಯಾಗಿ ಅಭಿನಯಿಸಲಿದ್ದಾರೆ. 

ಹೆಣ್ಣು ಹುಟ್ಟಿತು ಎಂದು ಅಪ್ಪ ಆತ್ಮಹತ್ಯೆ, ಅಂಧ ಮಗಳು ಕಟ್ಟಿದ ಸಾಧನೆ ತೊಟ್ಟಿಲು

ಸದ್ಯ ತಾನ್ಯಾ ಹೋಪ್, ಬಹು ನಿರೀಕ್ಷಿತ ’ಅಮರ್’, ಉದ್ಘರ್ಷ, ಹೋಮ್ ಮಿನಿಸ್ಟರ್ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೈತುಂಬಾ ಸಿನಿಮಾ ಇಟ್ಟುಕೊಂಡು  ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿಯೆಸ್ಟ್ ನಟಿ ಎನಿಸಿಕೊಂಡಿದ್ದಾರೆ.