ಬೆಂಗಳೂರು[ಮಾ. 08]   ಕನ್ನಡದ ಖಾಸಗಿ ವಾಹಿನಿಯಲ್ಲಿ ಮಕ್ಕಳು ರಾಗಕ್ಕೆ ಕಿವಿಯಾಗುವ ಶೋ ಸರಿಗಮಪ ಲಿಟಲ್ ಚಾಂಪ್ಸ್ ಆರಂಭವಾಗಿದೆ. ಅದರೊಂದಿಗೆ ಕೆಲ ಕಣ್ಣೀರ ಕತೆಗಳು ನಮ್ಮ ಮುಂದೆ ಬಂದಿವೆ.

ಈ ಗದಗದ ಹುಡುಗಿಯ ಕತೆ ನಿಜಕ್ಕೂ ಒಂದು ಕ್ಷಣ ನಮ್ಮ ಕಣ್ಣಲ್ಲಿ ನೀರು ತರಿಸುತ್ತದೆ.  7ನೇ ತರಗತಿ ಓದುತ್ತಿರುವ ಈ ಹುಡುಗಿಗೆ ಎರಡು ಕಣ್ಣು ಕಾಣುವುದಿಲ್ಲ. ವಿಷ ಕುಡಿದು ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ದುರಂತವೂ ಪುಟ್ಟ ಮಗುವಿನ ಬಾಳಲ್ಲಿ ನಡೆದು ಹೋಗಿದೆ.

ಆಕೆಯ ಜೀವನದ ನೋವಿನ ಕತೆಗಳನ್ನೆಲ್ಲ ಮೆಟ್ಟಿ ನಿಂತು ಈಗ ದೊಡ್ಡ ರಿಯಾಲಿಟಿ ಶೋ ಒಂದಕ್ಕೆ ಆಯ್ಕೆಯಾಗಿದ್ದಾರೆ. ಈ ಶೋ ಆಕೆಯ ಬಾಳಲ್ಲಿ ಬೆಳಕನ್ನು ತರಲಿ ಎಂದು ಆಶಿಸೋಣ..