ಸ್ಯಾಂಡಲ್‌ವುಡ್ 'ಮೊಗ್ಗಿನ ಮನಸ್ಸು' ರಾಧಿಕಾ ಪಂಡಿತ್‌ ಹುಟ್ಟು ಹಬ್ಬಕ್ಕೆ ರಾಕಿಂಗ್ ಸ್ಟಾರ್ ಯಶ್ ತನ್ನ ಇನ್‌ಸ್ಟಾಗ್ರಾಂನಲ್ಲಿ ವಿಶ್ ಮಾಡಿರುವುದು ಹೇಗೆ?

ಸ್ಯಾಂಡಲ್‌ವುಡ್ ದಿ ಮೋಸ್ಟ್ ಡಿಗ್ನಿಫೈಡ್, ಬ್ರಿಲಿಯಂಟ್ ಹಾಗೂ ಬ್ರೇವ್ ನಟಿ ರಾಧಿಕಾ ಪಂಡಿತ್ ತಮ್ಮ ಹುಟ್ಟು ಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಲು ಸಾಧ್ಯವಾಗುವುದಿಲ್ಲವೆಂದು ದಿನಗಳ ಹಿಂದೆಯೇ ವಿಡಿಯೋವೊಂದರಲ್ಲಿ ಮಾತನಾಡಿದ್ದರು.

ಹುಟ್ಟುಹಬ್ಬದ ದಿನ ತಮಗೆ ಬರುವ ಎಲ್ಲ ಮೆಸೇಜ್‌ಗಳಿಗೆ ರಿಪ್ಲೈ ಮಾಡುವುದಾಗಿಯೂ ಭರವಸೆ ನೀಡಿದ್ದರು. ಗೋವಾದಿಂದ ಬಂದನ ನಂತರ ಎಲ್ಲರನ್ನೂ ಭೇಟಿಯಾಗುವುದಾಗಿ ಹೇಳಿದ್ದಾರೆ.

 

ಯಾರು ಏನೇ ವಿಶ್ ಮಾಡಿದರೂ, ಪತಿಯಿಂದ ಬರೋ ವಿಶ್‌ಗೆ ವಿಶೇಷ ಸ್ಥಾನ. ಅಂಥ ಖುಷಿಯನ್ನು ಯಶ್ ‘Life is beautiful.ನನ್ನ ಜೀವನದಲ್ಲಿ ಈಗ ಏನು ಇದೆಯೋ ಅದರಿಂದ ಅಲ್ಲ. ನನ್ನ ಜೀವನದಲ್ಲಿ ಇರುವ ವ್ಯಕ್ತಿಗಳಿಂದ. ಥ್ಯಾಂಕ್ ಯು, ನೀನು ನನಗಾಗೇ ಹುಟ್ಟಿರುವೆ. ಹ್ಯಾಪಿ ಬರ್ತ್ ಡೇ ಮೈ ಲವ್...’ ಎಂದು ಪ್ರೀತಿಯ ಮಡದಿಗೆ ಹುಟ್ಟು ಹಬ್ಬದ ಶುಭ ಕೋರಿದ್ದಾರೆ.