ನಿಮ್ಮನ್ನೆಲ್ಲ ಬಿಟ್ಟು ನನ್ನ ಹತ್ರ ಲಿಫ್ಟ್ ಕೇಳಿದಳು ಎಂದು ಸುಂದರ್ ಅವರು ಪತ್ನಿ ವೀಣಾಗೆ ಹೇಳಿದ್ದಾರೆ. ಸುಂದರ್ ವೀಣಾ ದಂಪತಿ ಹಾಡಿಗೆ ಡ್ಯಾನ್ಸ್ ಮಾಡಿ ಸರ್ಪ್ರೈಸ್ ನೀಡಿದ್ದಾರೆ. ಈ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ನಿಮ್ಮನ್ನೆಲ್ಲ ಬಿಟ್ಟು ನನ್ನ ಹತ್ರ ಲಿಫ್ಟ್ ಕೇಳಿದಳು, ನಡಿ ಚಲ್ ಚಲ್ ಎಂಬ ಹಾಡು ಈಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಕನ್ನಡ ಕಿರುತೆರೆಯ ಕೆಲ ಸೆಲೆಬ್ರಿಟಿಗಳು ಇದೇ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದಾರೆ. ಅಂದಹಾಗೆ ನಟ ವೀಣಾ ಸುಂದರ್ ದಂಪತಿ ಕೂಡ ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.
ಹಾಡಿಗೆ ಡ್ಯಾನ್ಸ್
GST ಎನ್ನುವ ಈ ಹಾಡಿಗೆ ಈ ದಂಪತಿ ಡ್ಯಾನ್ಸ್ ಮಾಡಿದ್ದಾರೆ. ಈ ದಂಪತಿ ಕನ್ನಡ ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದಾರೆ. ವೀಣಾ ಅವರ ಮೇಲಿನ ಪ್ರೀತಿಗೆ ಸುಂದರ್ ಅವರು ತಮ್ಮ ಹೆಸರನ್ನು ಸುಂದರ್ ವೀಣಾ ಎಂದು ಇಟ್ಟುಕೊಂಡಿದ್ದಾರೆ, ಈ ದಂಪತಿಗೆ ಇಬ್ಬರು ಮಕ್ಕಳಿವೆ.
ನಿರೂಪಕ ಸೃಜನ್ ಲೋಕೇಶ್ ಅವರು ನಟ, ನಿರ್ಮಾಪಕನಾಗಿ ಹೆಸರು ಮಾಡಿದ್ದಾರೆ. ಈಗ GST ಎನ್ನುವ ಸಿನಿಮಾ ಮೂಲಕ ನಿರ್ದೇಶಕನಾಗಿದ್ದರು. ಈ ಸಿನಿಮಾವನ್ನು ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ಬ್ಯಾನರ್‌ನಲ್ಲಿ ಸಂದೇಶ್ ಎನ್ ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕ ಸಂದೇಶ್ ನಾಗರಾಜ್ ಅವರು ಅರ್ಪಿಸುತ್ತಿದ್ದಾರೆ. ನವೆಂಬರ್ 28ರಂದು ಈ ಸಿನಿಮಾ ತೆರೆಗೆ ಬರುತ್ತಿದೆ.
ನಟ ಉಪೇಂದ್ರ ಅವರು ಈ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿದ್ದರು. ಪ್ರಿಯಾಂಕಾ ಉಪೇಂದ್ರ ಅವರು ಹಾಡಿನ ಪ್ರೊಮೊ ರಿಲೀಸ್ ಮಾಡಿದರು.
GST ಎಂದರೆ ಏನು?
GST ಎಂದರೆ ಘೋಸ್ಟ್ ಇನ್ ಟ್ರಬಲ್. ಅದನ್ನು ಈಗ ಸ್ವಲ್ಪ ಬದಲಾವಣೆ ಮಾಡಿ "Go see in theater" ಅಂತ ಕೂಡ ಹೇಳಬಹುದು. “ನಾನು ಕಂಡ GST ಕನಸನ್ನು ಸಂದೇಶ್ ಅವರು ನನಸು ಮಾಡಿದ್ದಾರೆ. ಈ ಸಿನಿಮಾ ಮೂಲಕ ನಿರ್ದೇಶಕನಾಗಿದ್ದೇನೆ. ನಮ್ಮ ತಾತ ಸುಬ್ವಯ್ಯ ನಾಯ್ಡು ಅವರು ‘ಭಕ್ತ ಪ್ರಹ್ಲಾದ’ ಸಿನಿಮಾದಲ್ಲಿ ನಮ್ಮ ತಂದೆ ಲೋಕೇಶ್ ಅವರನ್ನು ಬಾಲನಟನಾಗಿ ತೆರೆಗೆ ತಂದರು. ನಮ್ಮ ತಂದೆ ನಿರ್ದೇಶನದ ‘ಭುಜಂಗಯ್ಯನ ದಶಾವತಾರʼ ಸಿನಿಮಾ ಮೂಲಕ ನಾನು ಬಾಲನಟನಾದೆ. ಈಗ ನನ್ನ ಮಗ ಸುಕೃತ್ ನನ್ನ ಮೊದಲ ನಿರ್ದೇಶನದಲ್ಲಿ ಬೆಳ್ಳಿತೆರೆ ಪ್ರವೇಶಿಸಿದ್ದಾನೆ. ಇದು ಭಾರತೀಯ ಚಿತ್ರರಂಗದಲ್ಲೇ ಪ್ರಥಮ ಎನ್ನಬಹುದು. ಈ ಸಿನಿಮಾದಲ್ಲಿ ನಮ್ಮ ತಾಯಿ, ನಾನು ಹಾಗೂ ನನ್ನ ಮಗ ನಟಿಸಿದ್ದೇವೆ. ಇದು ಹಾರಾರ್ ಚಿತ್ರವಾಗಿದರೂ, ನಗುವೇ ಪ್ರಧಾನ.
ಸಚಿನ್ ತೆಂಡೂಲ್ಕರ್ ಸಹಿ ಹಾಕಿದ ಬ್ಯಾಟ್ ಸಿಗ್ತು
ಈ ಸಿನಿಮಾದಲ್ಲಿ ಯಾರು ಊಹಿಸಲಾಗದ 4O ನಿಮಿಷಗಳ ಕ್ಲೈಮ್ಯಾಕ್ಸ್ ಇದೆಯಂತೆ. ಸೃಜನ್ ಲೋಕೇಶ್ ಅವರ ಮೊದಲ ಚಿತ್ರದ ನಿರ್ದೇಶನಕ್ಕೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ಸಹಿ ಹಾಕಿ ಬ್ಯಾಟ್ ನೀಡಿದ್ದಾರೆ ಎಂದು ಸೃಜನ್ ಲೋಕೇಶ್ ಹೇಳಿದ್ದಾರೆ.


