ನಮ್ಮ ಕರ್ನಾಟಕದಲ್ಲಿ ಮಾತ್ರವಲ್ಲ ಇಂಟರ್ ನ್ಯಾಷನಲ್ ಶೋಸ್ ಕೂಡ ಫುಲ್ ಆಗಿವೆ. ಕತ್ತಾರ್, ಮಸ್ಕಟ್, ಸೌದಿಯಲ್ಲೂ ಸಿನಿಮಾ ಹೌಸ್ ಫುಲ್ ಆಗಿದೆ. ಒಟ್ರಾರೆ ಹೇಳಬೇಕು ಎಂದರೆ, ಜೈ ಸಿನಿಮಾಗೆ ಎಲ್ಲೆಲ್ಲೂ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಥಿಯೇಟರ್ ನಲ್ಲಿ ನೋಡಿದಾಗ ಸಿನಿಮಾದ ಮಜವೇ ಬೇರೆ ಎನ್ನಲಾಗ್ತಿದೆ.
ಕಮಾಲ್ ಮಾಡ್ತಿದೆ ಜೈ ಸಿನಿಮಾ!
ಸ್ಯಾಂಡಲ್‌ವುಡ್ ಸೇರಿದಂತೆ, ಈಗಿನ ಸಿನಿಮಾ ಇಂಡಸ್ಟ್ರಿ ಸಿಕ್ಕಾಪಟ್ಟೆ ಸ್ಪರ್ಧಾತ್ಮಕವಾಗಿದೆ. ಕಾರಣ ವಾರಕ್ಕೆ ಏಳೆಂಟು ಸಿನಿಮಾಗಳು ಒಟ್ಟಿಗೆ ರಿಲೀಸ್ ಆಗುತ್ತವೆ. ಆ ಸಿನಿಮಾಗಳ ಗೆಲುವಿಗೆ ಇರುವುದು ಕೇವಲ ಒಂದು ವಾರಗಳ ಸಮಯ. ಅಷ್ಟರಲ್ಲಿ ಹಾಕಿರುವ ಬಂಟವಾಳವನ್ನು ಎತ್ತಬೇಕು, ಜನರಿಗೆ ಸಿನಿಮಾ ತೋರಿಸಿದ ಸಂತೃಪ್ತಿಯು ಇರಬೇಕು. ಆದರೆ ಒಂದೇ ವಾರದಲ್ಲಿ ಇದು ಅಸಾಧ್ಯದ ಕೆಲಸ.

ಕಂಟೆಂಟ್ ಚೆನ್ನಾಗಿದ್ದು, ಜನರ ಬಾಯಿಂದ ವಾವ್ ಎನಿಸಿಕೊಂಡ ಸಿನಿಮಾ ಖಂಡಿತ ಶನಿವಾರ ಮತ್ತು ಭಾನುವಾರ ಗಲ್ಲಾ ಪೆಟ್ಟಿಗೆಯನ್ನ ತುಂಬಿಸಿಕೊಳ್ಳುತ್ತೆ. ಇಷ್ಟೆಲ್ಲಾ ಹೇಳೋದಕ್ಕೆ ಕಾರಣ 'ಜೈ' ಸಿನಿಮಾ. ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ (Roopesh Shetty) ಅವರು ನಿರ್ದೇಶನ ಹಾಗೂ ನಟನೆ ಮಾಡಿರುವಂಥ (Jai) ಸಿನಿಮಾ ಇದು.

ಜೈ ಸಿನಿಮಾದೊಳಗಿನ ಕಂಟೆಂಟ್ ಸದ್ದು ಮಾಡ್ತಿದೆ. ತಿಳಿ ಹಾಸ್ಯ, ಪೊಲಿಟಿಕಲ್ ಡ್ರಾಮಾ, ರೂಪೇಶ್ ಶೆಟ್ಟಿ ಆಕ್ಟಿಂಗ್, ಸುನಿಲ್ ಶೆಟ್ಟಿ ಫಸ್ಟ್ ಟೈಮ್ ಕನ್ನಡದಲ್ಲಿ ಮಾಡ್ತಾ ಇರುವುದು. ಈ ಎಲ್ಲಾ ಒಟ್ಟುಗಳು ಸೇರಿ ಜೈ ಸಿನಿಮಾ ಥಿಯೇಟರ್ ತುಂಬುತ್ತಿದೆ. ಇದು ನಿಜವಾಗಿಯೂ ಖುಷಿಯ ವಿಚಾರ. ಸಿನಿಮಾ ನೋಡಲು ಜನ ಬರ್ಲಿಲ್ಲ ಅಂದ್ರೆ ಅಲ್ಲಿ ಥಿಯೇಟರ್ ಮಾಲೀಕರು ಗೋಳಾಡುತ್ತಾರೆ.
ಡಿಮ್ಯಾಂಡ್ ಹೆಚ್ಚಿಸಿಕೊಳ್ಳುತ್ತಿದೆ
ಆದ್ರೆ ಜೈ ಸಿನಿಮಾ ಆ ನೋವನ್ನ ಮರೆಸುತ್ತಿದೆ. ಆರಂಭದಲ್ಲಿ ಕಡಿಮೆ ಥಿಯೇಟರ್‌ಗಳಲ್ಲಿ ರಿಲೀಸ್ ಆದಂತ ಸಿನಿಮಾ, ಈಗ ತಾನಾಗಿಯೇ ಡಿಮ್ಯಾಂಡ್ ಹೆಚ್ಚಿಸಿಕೊಳ್ಳುತ್ತಿದೆ. ದಿನೇ ದಿನೇ ಸಿನಿಮಾದ ಶೋಗಳು ಜಾಸ್ತಿಯಾಗ್ತಿವೆ. ಸದ್ಯಕ್ಕೆ 103 ಶೋಗಳು ಕೂಡ ಹೌಸ್ ಫುಲ್ ಆಗಿದೆ ಅನ್ನೋದು ಸಂತಸದ ವಿಚಾರವಾಗಿದೆ.
ಸಿನಿಮಾ ತಂಡ ಕೂಡ ತನ್ನ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಬಹಳಷ್ಟು ಕಡೆ ಓಡಾಟ ನಡೆಸುತ್ತಿದೆ. ನಿನ್ನೆಯೆಲ್ಲಾ (ಮಂಗಳವಾರ) ಬೆಂಗಳೂರಿನ ಲುಲುಮಾಲ್ ಪಿವಿಆರ್, ವೆಗಾಸಿಟಿ ಮಾಲ್ ಗಳಿಗೆ ಭೇಟಿ ನೀಡಿ, ಪ್ರೇಕ್ಷಕರ ಅಭಿಪ್ರಾಯವನ್ನು ಕೇಳಿದೆ. ಉತ್ತಮ ರೆಸ್ಪಾನ್ಸ್ ಕೇಳಿ ಖುಷಿ ಪಟ್ಟಿದೆ. ನಮ್ಮ ಕರ್ನಾಟಕದಲ್ಲಿ ಮಾತ್ರವಲ್ಲ ಇಂಟರ್ ನ್ಯಾಷನಲ್ ಶೋಸ್ ಕೂಡ ಫುಲ್ ಆಗಿವೆ.
ಎಲ್ಲೆಲ್ಲೂ ಭರ್ಜರಿ ರೆಸ್ಪಾನ್ಸ್
ಕತ್ತಾರ್, ಮಸ್ಕಟ್, ಸೌದಿಯಲ್ಲೂ ಸಿನಿಮಾ ಹೌಸ್ ಫುಲ್ ಆಗಿದೆ. ಒಟ್ರಾರೆ ಹೇಳಬೇಕು ಎಂದರೆ, ಜೈ ಸಿನಿಮಾಗೆ ಎಲ್ಲೆಲ್ಲೂ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಥಿಯೇಟರ್ ನಲ್ಲಿ ನೋಡಿದಾಗ ಸಿನಿಮಾದ ಮಜವೇ ಬೇರೆ. ಮಿಸ್ ಮಾಡಿಕೊಳ್ಳದೆ ಥಿಯೇಟರ್‌ನಲ್ಲಿಯೇ ನೋಡಿ ಎಂಜಾಯ್ ಮಾಡಿ. ಯಾರಿಗುಂಟು ಯಾರಿಗಿಲ್ಲ ಈ ಚಾನ್ಸ್, ಮಿಸ್ ಮಾಡದೇ ನೋಡಿ, ನಮ್ಮ ಸಿನಿಮಾದ ಯಶಸ್ಸನಿಲ್ಲಿ ನೀವೂ ಪಾಲುದಾರರಾಗಿ..


