Asianet Suvarna News Asianet Suvarna News

ಇಲ್ಲಿವರೆಗು ಯಾರೂ ನನ್ನನ್ನ ಸಿನಿಮಾ ಪ್ರೀ ರಿಲೀಸ್ ಇವೆಂಟ್‌ಗೆ ಕರ್ದಿಲ್ಲ; ನಟಿ ಸುಹಾಸಿನಿ

ಪ್ರೀ ರಿಲೀಸ್ ಈವೆಂಟ್ ‌ನಲ್ಲಿ ಮಾತನಾಡಿದ ಹಿರಿಯ ನಟಿ ಸುಹಾಸಿನಿ ಮಾನ್ಸೂನ್ ರಾಗ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅಚ್ಯುತ್ ಕುಮಾರ್ ಹೇಳಿದ ಹಾಗೆ ಸುಹಾಸಿನಿ ಕೂಡ ಅಚ್ಯುತ್ ಜೊತೆ ನಟಿಸಲು ಭಯವಾಗಿತ್ತು ಎಂದು ಹೇಳಿದರು. 
 

Actress Suhasini talks About Monsoon raga film and Achyut kumar sgk
Author
First Published Sep 14, 2022, 11:35 AM IST

ಮಾನ್ಸೂನ್ ರಾಗ, ಸ್ಯಾಂಡಲ್ ವುಡ್‌ನಲ್ಲಿ ರಿಲೀಸ್‌ಗೆ ರೆಡಿಯಾಗಿರುವ ಬಹುನಿರೀಕ್ಷೆಯ ಸಿನಿಮಾ. ಡಾಲಿ ಧನಂಜಯ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿಯಾಗಿ ಬರ್ತಿರುವ ಮೊದಲ ಸಿನಿಮಾ. ಈಗಾಗಲೇ ಹಾಡು ಮತ್ತು ಟ್ರೈಲರ್ ಮೂಲಕ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿರುವ ಮಾನ್ಸೂನ್ ರಾಗ ಸಿನಿಮಾವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾ ರಿಲೀಸ್‌ಗೂ ಮೊದಲೇ ಸಿನಿಮಾತಂಡ ಪ್ರಿ ರಿಲೀಸ್ ಈವೆಂಟ್ ಹಮ್ಮಿಕೊಂಡು. ಬೆಂಗಳೂರಿನಲ್ಲಿ ನಡೆದ ಅದ್ದೂರಿ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಇಡೀ ಸಿನಿಮಾತಂಡ ಹಾಜರಾಗಿತ್ತು. ವಿಶೇಷ ಅತಿಥಿಯಾಗಿ ದುನಿಯಾ ವಿಜಯ್ ಆಗಮಿಸಿದ್ದರು. ನಟಿ ಸುಹಾಸಿನಿ, ಡಾಲಿ ಧನಂಜಯ್, ರಚಿತಾ ರಾಮ್, ಅಚ್ಯುತ್‌ ಕುಮಾರ್, ಯಶ ಶಿವಕುಮಾರ್ ಸೇರಿದಂತೆ ಇಡಿ ತಂಡ ಹಾಜರಗಿತ್ತು.

ರವೀಂದ್ರ ನಾಥ್ ನಿರ್ದೇಶನದಲ್ಲಿ ಮೂಡಿಬಂದ ಮನ್ಸೂನ್ ರಾಗ ಸಿನಿಮಾ ಇದೇ ತಿಂಗಳು 16ರಂದು ರಿಲೀಸ್ ಆಗುತ್ತಿದೆ. ಪ್ರೀ ರಿಲೀಸ್ ಈವೆಂಟ್ ‌ನಲ್ಲಿ ಮಾತನಾಡಿದ ಹಿರಿಯ ನಟಿ ಸುಹಾಸಿನಿ ಮಾನ್ಸೂನ್ ರಾಗ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅಚ್ಯುತ್ ಕುಮಾರ್ ಹೇಳಿದ ಹಾಗೆ ಸುಹಾಸಿನಿ ಕೂಡ ಅಚ್ಯುತ್ ಜೊತೆ ನಟಿಸಲು ಭಯವಾಗಿತ್ತು ಎಂದು ಹೇಳಿದರು. 

'ನನ್ನ ನಗುವಿಗೆ ಕಾರಣ ನನ್ನ ಸುತ್ತ‌‌ ಇರೋ ನೀವೆಲ್ಲ. ಮಾನ್ಸೂನ್ ರಾಗ ಸಿನಿಮಾಗೆ ನಿರ್ದೇಶಕ ರವಿಂಧ್ರನಾಥ್ ಅವಕಾಶ ನೀಡಿದ್ರು. ಈ ಸಿನಿಮಾಗಾಗಿ ನಾನು ಶೂಟಿಂಗ್ ಬಂದಾಗ ಒಂದು ಆಸ್ಪತ್ರೆಯಲ್ಲಿ ಒಂದು ದಿನ ಕಳೆದೆ. 
ಯಾಕಂದ್ರೆ ಫ್ಲೈಟ್ ಲೇಟ್ ಆಗಿದ್ದಕ್ಕೆ‌ ಹೋಟೆಲ್ ಸಿಕ್ಕಿಲ್ಲ. ಸಿನಿಮಾದಲ್ಲಿ ನಟಿಸಿದ್ರೆ ನಾನು ನನ್ನ ಕಾಸ್ಟ್ಯೂಮ್ ಅನ್ನು ನಾನೆ ಮಾಡಿಕೊಳ್ತೇನೆ.  ಆದರೆ ಈ ಸಿನಿಮಾದಲ್ಲಿ ನನ್ನ ಕಾಸ್ಟ್ಯೂಮ್ ನಿರ್ದೇಶಕರೇ ಮಾಡಿದ್ರು.
ಅಚ್ಯುತ್ ಕುಮಾರ್ ಅದ್ಭುತ ನಟರು. ಅವರ ಜೊತೆ ನಟಿಸುವಾಗ ನನಗೂ ತುಂಬಾ ಭಯ ಇತ್ತು. ಈ ಸಿನಿಮಾದಲ್ಲಿ ನನಗೆ ಹ್ಯಾಪಿ ರೊಮ್ಯಾಂಟಿಕ್ ಪಾತ್ರ ಕೊಟ್ಟಿದ್ದಾರೆ. ಮದುವೆ ಮೊದಲು ಕನ್ನಡ ಸಿನಿಮಾ ಮಾಡೋಕೆ ಅವಕಾಶ ಇರಲಿಲ್ಲ. ಆದ್ರೆ ಮದುವೆ ಆದ ಮೇಲೆ ಕನ್ನಡ ಸಿನಿಮಾ ಅವಕಾಶ ಹೆಚ್ಚು ಸಿಕ್ತು. ನಾನು ಕನ್ನಡ ಸಿನಿಮಾದಲ್ಲೇ ಹೆಚ್ಚು ನಟಿಸುತ್ತೇನೆ. ನನ್ನನ್ನ ಇಲ್ಲಿ ವರೆಗೆ ಯಾರೂ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಗೆ ಕರೆದಿಲ್ಲ. ಆದರೆ ಮಾನ್ಸೂನ್ ರಾಗ ಟೀಂ ನನ್ನನ್ನ ಕರೆದಿದ್ದಾರೆ' ಎಂದು ಸಂತೋಷ ಪಟ್ಟರು.

ಸುಹಾಸಿನಿ ಮೇಡಂ ಜೊತೆ ನಟಿಸುವಾಗ ಎದೆ ಹಿಡಿದುಕೊಳ್ತಿತ್ತು; ನಟ ಅಚ್ಯುತ್ ಕುಮಾರ್

ನಟಿ ಸುಹಾಸಿನಿ ಅವರ ಬಗ್ಗೆ ಅಚ್ಯುತ್ ಕುಮಾರ್ ಮಾತನಾಡಿ, 'ಸುಹಾಸಿನಿ ಮೇಡಮ್ ಜೊತೆ ನಟಿಸುವಾಗ ಭಾಯದಲ್ಲೇ ಇದ್ದೆ. ಸುಹಾಸಿನಿ ಅವರ ನಟನೆಯನ್ನ ನೋಡಿದ್ದೇವೆ. ಸುಹಾಸಿನಿ ಮೇಡಂ ಜೊತೆ ನಟಿಸುವಾಗ ಎದೆ ಹಿಡೆದುಕೊಳ್ಳೊಕೆ ಶುರುವಾಯ್ತು. ತುಂಬಾ ಒಳ್ಳೆ ನಟರ ಜೊತೆ ನಟಿಸೋದು ತುಂಬಾ ಸುಲಭ. ಯಾಕಂದ್ರೆ ಅವರು ಮೊದಲ ದೃಶ್ಯದ ಶೂಟಿಂಗ್ ನಲ್ಲೇ ಕಂಫರ್ಟ್ ಜೋನ್ ಕೊಡ್ತಾರೆ' ಎಂದು ಹೇಳಿದರು. ಅಚ್ಯುತ್ ಮತ್ತು ಸುಹಾನಿಸಿ ಕಾಂಬಿನೇಷನ್ ನೋಡಲು ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ. 

ಸುಹಾಸಿನಿ, ಕಮಲ್ ಹಾಸನ್,ಚಾರುಹಾಸನ್: ಒಂದು ಫೋಟೋದಲ್ಲಿ ಇಡೀ ಫ್ಯಾಮಿಲಿ!

ಮಾನ್ಸೂನ್ ರಾಗ ಮೂಲಕ ನಟಿ ಸುಹಾಸಿನಿ ಮತ್ತೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಮಾನ್ಸೂನ್ ರಾಗ ಸಿನಿಮಾ ಸೆಪ್ಟಂಬರ್ 16ರಂದು ತೆರೆಗೆ ಬರುತ್ತಿದ್ದು ಅಭಿಮಾನಿಗಳು ಕಾರರಾಗಿದ್ದಾರೆ.

Follow Us:
Download App:
  • android
  • ios