Asianet Suvarna News Asianet Suvarna News

ಕನ್ನಡದ 'ಕಿಸ್'​ ಚೆಲುವೆಗೆ ಕೂಡಿ ಬಂತಾ ಕಂಕಣ ಭಾಗ್ಯ; ಸ್ಟಾರ್ ಕುಟುಂಬಕ್ಕೆ ಸೊಸೆಯಾಗ್ತಾರಾ ಶ್ರೀಲೀಲಾ?

ಶ್ರೀಲೀಲಾ ಸದ್ಯ ತೆಲುಗು ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಮಾಡಿರುವ ಸಿನಿಮಾವೆಲ್ಲಾ ಸಕ್ಸಸ್ ಕಾಣದೇ ಇದ್ರೂ ಶ್ರೀಲೀಲಾಗೆ ಡಿಮ್ಯಾಂಡ್​​ ಮಾತ್ರ ದೊಡ್ಡದಿದೆ. ಈ ಮಧ್ಯೆ  ಶ್ರೀಲೀಲಾ ತಾಯಿ ಖ್ಯಾತ ಜ್ಯೋತಿಷಿಯೊಬ್ಬರಿಗೆ ಮಗಳ ಜಾತಕ ತೋರಿಸಿದ್ದಾರಂತೆ. 

Actress Sreeleela marriage news going viral all over South India srb
Author
First Published Feb 25, 2024, 7:24 PM IST

ಟಾಲಿವುಡ್​​ನಲ್ಲಿ ಟಾಕ್ ಆಗುತ್ತಿದೆ ಶ್ರೀಲೀಲಾ ಮದುವೆ ಸುದ್ದಿ. ಹೌದು, ನಟಿ ಶ್ರೀಲೀಲಾ (Sreeleela)ಈಗ ಟಾಲಿವುಡ್​​ನ ಹಾಟ್​ ಟಾಪಿಕ್. ಅದೆಷ್ಟೋ ಗಂಡ್​ ಹೈಕ್ಳ ಮನಸ್ಸಿಗೆ ಟಾನಿಕ್ ಆಗಿದ್ದ ಶ್ರೀಲೀಲಾ ಈಗ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಹಬ್ಬತೊಡಗಿದೆ. ಶ್ರೀಲೀಲಾ ಅಂದ್ರೆ ತೆಲುವು ಮಂದಿ ಹುಚ್ಚೆದ್ದು ಕುಣಿತಾರೆ. ಯಾಕಂದ್ರೆ ಶ್ರೀಲೀಲಾ ತನ್ನ ಡಾನ್ಸ್​ ಮತ್ತು ಮುದ್ದು ಸೌಂದರ್ಯದಿಂದಲೇ ಆ ಮಟ್ಟಿಗಿನ ಕ್ರೇಜ್ ಸೃಷ್ಟಿಸಿದ್ದಾರೆ. ಈ ಸುರ ಸುಂದರಿ ಬಗ್ಗೆ ಈಗ ಟಾಲಿವುಡ್​ನಲ್ಲಿ ಮತ್ತೆ ಮದುವೆ ಟಾಕ್ ಎದ್ದಿದೆ. ಕಿಸ್​ ಚೆಲುವೆಗೆ ಕಂಕಣ ಭಾಗ್ಯ ಕೂಡ ಬಂದಿದೆ ಅಂತ ಜ್ಯೋತಿಷಿಗಳೇ ಭವಿಷ್ಯ ನುಡಿದಿದ್ದಾರೆ.

ಸದ್ಯ ಹರಿದಾಡುತ್ತಿರುವ ಸುದ್ದಿ ಪ್ರಕಾರ, ಶ್ರೀಲೀಲಾ ತಾಯಿ ಜ್ಯೋತಿಷಿ ಬಳಿ ತಮ್ಮ ಮಗಳ ಜಾತಕ ಇಟ್ಟು, ಮದುವೆ ಬಗ್ಗೆ ಕೇಳಿದ್ದಾರೆ. ಅದಕ್ಕೆ ಆ ಜ್ಯೋತಿಷಿಗಳು 'ಶ್ರೀಲೀಲಾ ಸ್ಟಾರ್ ಕುಟುಂಬದ ಸೊಸೆ ಆಗುತ್ತಾಳೆ' ಎಂದಿದ್ದಾರಂತೆ. ಇಷ್ಟಾಗಿದ್ದೇ ತಡ, ನಟಿ ಶ್ರೀಲೀಲಾ ಯಾವ ಸ್ಟಾರ್ ಕುಟುಂಬದ ಹುಡುಗನೊಟ್ಟಿಗೆ ಕ್ಲೋಸ್ ಆಗಿದ್ದಾರೆ ಎಂಬ ಬಗ್ಗೆ ಚರ್ಚೆಗಳು ಹುಟ್ಟತೊಡಗಿವೆ. ವದಂತಿಗಳನ್ನು ನಂಬುವುದಾದರೆ, ನಟಿ ಶ್ರೀಲೀಲಾ ಮದುವೆಯಾಗಲಿರುವುದು ತೆಲುಗು ಚಿತ್ರರಂಗದ ಹಿರಿಯ ನಟ ಬಾಲಯ್ಯ ಅವರ ಮಗ ಮೋಕ್ಷಗಣ ಅವರನ್ನು ಎನ್ನಲಾಗುತ್ತಿದೆ. ಹಾಗಿದ್ರೆ ಈ ಸುದ್ದಿ ಹಬ್ಬಲು ಕಾರಣವೇನು?

ನಟ ವಿನೋದ್ ರಾಜ್ ಮದುವೆ ಗುಟ್ಟಾಗಿ ಇಟ್ಟಿದ್ದು ಯಾಕೆ; ಸ್ಪಷ್ಟ ಉತ್ತರ ಇಲ್ಲಿದೆ ನೋಡಿ!

ಜೋರಾಗಿತ್ತು ಬಾಲಯ್ಯ ಮಗನ ಜೊತೆ ಶ್ರೀಲೀಲಾ ಮದುವೆ ಸುದ್ದಿ; ನಟಿ ಶ್ರೀಲೀಲಾ 'ಭಗವಂತ ಕೇಸರಿ' ಸಿನಿಮಾದಲ್ಲಿ ಟಾಲಿವುಡ್ ಟಾಪ್ ಸ್ಟಾರ್ ಬಾಲಕೃಷ್ಣನ ಮಗಳಾಗಿ ನಟಿಸಿದ್ರು. ಇದೇ ಬಾಲಯ್ಯನ ಮಗ ಮೋಕ್ಷಗಣನ ಜೊತೆ ಶ್ರೀಲೀಲಾ ಹೆಸರು ಓಡಾಡುತ್ತಿದೆ. ಮೋಕ್ಷಗಣ ಜೊತೆ ಶ್ರೀಲೀಲಾ ಮದುವೆ ಆಗುತ್ತಾರೆ ಅಂತಲೂ ಟಾಕ್ ಆಗಿದೆ. ಈ ಮಧ್ಯೆ ಈಗ ಜ್ಯೋತಿಷಿಯೊಬ್ರು ಶ್ರೀಲೀಲಾ ಚಿತ್ರರಂಗದ ದೊಡ್ಡ ಸ್ಟಾರ್ ಕುಟುಂಬಕ್ಕೆ ಸೊಸೆ ಆಗಿ ಹೋಗುತ್ತಾರೆ ಅಂದಿರೋದು ಶ್ರೀಲೀಲಾ ಮದುವೆ ಸುದ್ದಿ ಈಗ ಎಲ್ಲೆಡೆ ಹಬ್ಬಿದೆ. 

ದರ್ಶನ್ ಸೂಪರ್ ಸ್ಟಾರ್, ಉಮಾಪತಿ ದೊಡ್ಡ ನಿರ್ಮಾಪಕರು; ಬುದ್ಧಿ ಹೇಳೋದಕ್ಕೆ ನಾನ್ಯಾರು ಅಂದ್ಬಿಟ್ರಾ ಪ್ರಥಮ್!

ಶ್ರೀಲೀಲಾ ಸದ್ಯ ತೆಲುಗು ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಮಾಡಿರುವ ಸಿನಿಮಾವೆಲ್ಲಾ ಸಕ್ಸಸ್ ಕಾಣದೇ ಇದ್ರೂ ಶ್ರೀಲೀಲಾಗೆ ಡಿಮ್ಯಾಂಡ್​​ ಮಾತ್ರ ದೊಡ್ಡದಿದೆ. ಈ ಮಧ್ಯೆ  ಶ್ರೀಲೀಲಾ ತಾಯಿ ಖ್ಯಾತ ಜ್ಯೋತಿಷಿಯೊಬ್ಬರಿಗೆ ಮಗಳ ಜಾತಕ ತೋರಿಸಿದ್ದಾರಂತೆ.  ಆ ಜ್ಯೋತಿಷಿ ಶ್ರೀಲೀಲಾ ಮ್ಯಾರೇಜ್ ಭವಿಷ್ಯ ಹೇಳಿದ್ದು ಬಣ್ಣದ ಜಗತ್ತಿನ ಸ್ಟಾರ್​ ಕುಟುಂಬಕ್ಕೆ ಶ್ರೀಲೀಲಾ ಸೊಸೆಯಾಗುತ್ತಾರೆ ಅಂತ ಹೇಳಿದ್ದಾರೆ. ಈ ಸುದ್ದಿ ಈಗ ಟಾಲಿವುಡ್​ ತುಂಬಾ ಹಬ್ಬಿದೆ.

ನಟ ರಾಜ್‌ಕುಮಾರ್ 'ಡಾ ರಾಜ್‌ಕುಮಾರ್' ಆದಾಗ ಅವ್ರು ಹೇಳಿದ್ದೇನು; ಹೀಗಂದಿದ್ರಾ ಅಣ್ಣವ್ರು!

ಅಂದಹಾಗೆ, ನಟಿ ಶ್ರೀಲೀಲಾ ಈಗ ತಾನೇ ಟಾಲಿವುಡ್ ಅಂಗಳದಲ್ಲಿ ಮನೆ ಕಟ್ಟಿಕೊಳ್ಳುತ್ತಿದ್ದಾರೆ. ಅಷ್ಟರಲ್ಲೇ ಶ್ರೀಲೀಲಾ ಮ್ಯಾರೇಜ್ ಸ್ಟೋರಿ ಹೊರ ಬರುತ್ತಿದೆ. ಈಗ ಜ್ಯೋತಿಷಿಯೊಬ್ರು ಶ್ರೀಲೀಲಾ ಸ್ಟಾರ್ ಕುಟುಂಬದ ಸೊಸೆ ಆಗುತ್ತಾಳೆ ಅಂತ ಹೇಳಿದ್ದಾರೆ. ಆದ್ರೆ ಇದಕ್ಕು ಮೊದಲೇ ಟಾಲಿವುಡ್​ನ ದೊಡ್ಡ ಮನೆತನ ನಂದಮುರಿ ಬಾಲಕೃಷ್ಣ ಅವರ ಮಗ ಮೋಕ್ಷಗಣ ಜತೆ ಶ್ರೀಲೀಲಾ ಹೆಸರು ತಳುಕು ಹಾಕಿಕೊಂಡಿತ್ತು. ಈಗ ಅದು ನಿಜವಾಗಲಿದೆಯಾ? ಕಾದು ನೋಡಬೇಕು ಅಷ್ಟೇ!

ಅಪ್ಪು-ಉಪ್ಪಿ ಓಲ್ಡ್ ವೀಡೀಯೋ ಮತ್ತೆಮತ್ತೆ ವೈರಲ್; ಪುನೀತ್ ಪ್ರಶ್ನೆ, ಉಪೇಂದ್ರ ಉತ್ತರಕ್ಕೆ ಶಾಕ್ ಆಗ್ತೀರಾ!

Follow Us:
Download App:
  • android
  • ios