ನಟ ರಾಜ್‌ಕುಮಾರ್ 'ಡಾ ರಾಜ್‌ಕುಮಾರ್' ಆದಾಗ ಅವ್ರು ಹೇಳಿದ್ದೇನು; ಹೀಗಂದಿದ್ರಾ ಅಣ್ಣವ್ರು!
ಕರ್ನಾಟಕದ ಮೈಸೂರು ಯೂನಿವರ್ಸಿಟಿಯವರು ರಾಜ್‌ಕುಮಾರ್ ಅವರಿಗೆ 8 ಫೆಬ್ರವರಿ 1976 (8 February 1976) ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದಾರೆ. ಆ ಬಳಿಕ ರಾಜ್‌ಕುಮಾರ್ ಅವರು 'ಡಾ ರಾಜ್‌ಕುಮಾರ್' ಆಗಿ ಪ್ರಸಿದ್ಧರಾಗಿದ್ದು ಈಗ ಇತಿಹಾಸ.
ಕನ್ನಡ ಚಿತ್ರರಂಗದ ಮೇರು ನಟ, ಪದ್ಮಭೂಷಣ ಡಾ ರಾಜ್‌ಕುಮಾರ್ (Dr Rajkumar) ಅವರು ಕನ್ನಡ ಚಿತ್ರರಂಗದ ದೊಡ್ಡ ಆಸ್ತಿ ಎಂದೇ ಎಲ್ಲರೂ ಒಪ್ಪಿದ್ದಾರೆ. ನಟನೆ ಮಾತ್ರವಲ್ಲ, ವ್ಯಕ್ತಿತ್ವದಲ್ಲಿ ಕೂಡ ಡಾ ರಾಜ್‌ಕುಮಾರ್ ಅವರದು ತುಂಬಾ ವಿಶಿಷ್ಠ ಎನಿಸುವ ವ್ಯಕ್ತಿತ್ವ. ತುಂಬಾ ಸರಳ, ತುಂಬಾ ವಿರಳ ಎನ್ನುವಂತಹ ಜನನಾಯಕರಾಗಿರುವ ಡಾ ರಾಜ್, ಕರುಣೆ ಹಾಗೂ ಮಾನವೀಯತೆಯೇ ಮೂರ್ತಿವೆತ್ತಂತೆ ಬದುಕಿರುವ ಜೀವ. ಅಂಥವರು ಇನ್ನೊಬ್ಬರಿಲ್ಲ ಎಂಬಂತೆ ಬಾಳಿ ಬದುಕಿದರವರು. ಅಂಥ ರಾಜ್‌ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಕೊಟ್ಟಿದ್ದಾರೆ.
ಹೌದು, ಕರ್ನಾಟಕದ ಮೈಸೂರು ಯೂನಿವರ್ಸಿಟಿಯವರು ರಾಜ್‌ಕುಮಾರ್ ಅವರಿಗೆ 8 ಫೆಬ್ರವರಿ 1976 (8 February 1976) ರಲ್ಲಿ ಗೌರವ ಡಾಕ್ಟರೇಟ್ (Honorary Doctorate) ನೀಡಿ ಗೌರವಿಸಿದ್ದಾರೆ. ಆ ಬಳಿಕ ರಾಜ್‌ಕುಮಾರ್ ಅವರು 'ಡಾ ರಾಜ್‌ಕುಮಾರ್' ಆಗಿ ಪ್ರಸಿದ್ಧರಾಗಿದ್ದು ಈಗ ಇತಿಹಾಸ. ತಮಗೆ ಗೌರವ ಡಾಕ್ಟರೇಟ್ ನೀಡಿದಾಗ, ಅದನ್ನು ಪಡೆದ ಬಳಿಕ ಬೇರೆ ವೇದಿಕೆಯಲ್ಲಿ ಆ ಬಗ್ಗೆ ಡಾ ರಾಜ್‌ಕುಮಾರ್ ಅವರು ಏನು ಮಾತನಾಡಿದ್ದರು ಎಂಬುದು ಇಂದು ಹಲವರಿಗೆ ಗೊತ್ತಿಲ್ಲ. ಆದರೆ, ಅಂದು ಡಾ ರಾಜ್‌ಕುಮಾರ್ ಗೌರವ ಡಾಕ್ಟರೇಟ್ ಪಡೆದ ಬಳಿಕ ಮಾತನಾಡಿರುವ ಕಪ್ಪು-ಬಿಳುಪು ವೀಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮತ್ತೆ ಬರಲಿದೆ 'ನಾ ನಿನ್ನ ಬಿಡಲಾರೆ; ಅನಂತ್ ನಾಗ್-ಲಕ್ಷ್ಮೀ ಬದಲು ಪಂಚಿ-ಅಂಬಾಲಿ ಭಾರತಿ ಜೋಡಿ!
ಅಂದು ಮೈಸೂರಿನಲ್ಲಿ ಗೌರವ ಡಾಕ್ಟರೇಟ್ ಪಡೆದು ವೇದಿಕೆಯಲ್ಲಿ ಡಾ ರಾಜ್‌ಕುಮಾರ್ ಹೀಗೆ ಹೇಳಿದ್ದರು 'ಮೊದಲೇ ನಾನು ಓದಿದೋನು ಅಲ್ಲ, ವಿದ್ಯಾವಂತನೂ ಅಲ್ಲ, ಯಾವ ಡಿಗ್ರಿನೂ ಪಡಕೊಂಡವ್ನಲ್ಲ. ಮೈಸೂರು ವಿಶ್ವವಿದ್ಯಾನಿಲಯದವ್ರು , ಮೈಸೂರು ಯೂನಿವರ್ಸಿಟಿಯವ್ರು ನಿಮ್ ರಾಜ್‌ಕುಮಾರ್‌ಗೆ ಡಾಕ್ಟರೇಟ್ ಕೊಟ್ರು.. ಅಲ್ಲೇ ಕೇಳಿದೆ ನಾನು, ಏನ್ ನೋಡಿ ನನಗೆ ಡಾಕ್ಟರೇಟ್ ಕೊಟ್ರಿ? ನಾನು ಏನ್ ಮಾಡಿದೆ, ಯಾವ ಎಮ್ಮೆ (MA) ಪಾಸ್ ಮಾಡಿದ್ನ? ಎಂಎ ಪಿಹೆಚ್‌ಡಿ ಏನಾದ್ರೂ ಓದಿದ್ನಾ? ಏನಿಲ್ಲ ಎಂತಿಲ್ಲ, ಬಾಲ್ಯದಲ್ಲಿ ನಾನು ಚಿಕ್ಕವನಾಗಿದ್ದಾಗ ಹಳ್ಳಿಲಿ ಇದ್ದಂತಹ ಕಾಲದಲ್ಲಿ ಎಮ್ಮೆ ಮೇಯಿಸ್ತಾ ಇದ್ದೆ ನಾನು ಅಂತ ಹೇಳ್ದೆ ಅವ್ರಿಗೆ.
ಅಪ್ಪು-ಉಪ್ಪಿ ಓಲ್ಡ್ ವೀಡೀಯೋ ಮತ್ತೆಮತ್ತೆ ವೈರಲ್; ಪುನೀತ್ ಪ್ರಶ್ನೆ, ಉಪೇಂದ್ರ ಉತ್ತರಕ್ಕೆ ಶಾಕ್ ಆಗ್ತೀರಾ!
ಹೀಗೆ ಒಂದಲ್ಲಾ ಎರಡಲ್ಲಾ, ಎನೋನೋ ಎಲ್ಲ, ರಸಿಕರ ರಾಜ ಅಂತ , ರಸಿಕನಿಗೆ ರಾಜ ಅಂತೆ ನೋಡಿ, ಏನ್ ಚೆನ್ನಾಗಿದೆ, ಎಲ್ಲಾ ನೀವು ಕಟ್ಟಿದ ಹೆಸರು, ಎಲ್ಲಾ ನೀವು ಕೊಟ್ಟ ಆಸ್ತಿ, ಎಲ್ಲಾ ನೀವು ಕೊಟ್ಟಂತಹ ಕರುಣೆ, ನಿಮ್ ವಿನಃ ಈ ರಾಜ್‌ಕುಮಾರ್‌ಗೆ ಏನೂ ಗೊತ್ತಾಗೋದಕ್ಕೆ ಸಾಧ್ಯವೇ ಇಲ್ಲ.. ' ಎಂದು ಹೇಳಿ ತಮ್ಮ ಸ್ವಭಾವದಲ್ಲೇ ಇರುವ ವಿನಯವಂತಿಕೆಯನ್ನು ಮರೆದಿದ್ದಾರೆ ಡಾ ರಾಜ್‌ಕುಮಾರ್. ಅವರು ಹೇಳಿದ ಮಾತು ಮಾತ್ರವಲ್ಲ, ಅವರ ಧ್ವನಿಯಲ್ಲಿನ ಏರಿಳಿತ, ಅವರ ನಡೆಯೂ ಕೂಡ ನುಡಿಯಂತೆಯೇ ವಿನಯ ಪ್ರದರ್ಶಿಸುತ್ತಿತ್ತು. ಡಾ ರಾಜ್ ಅವರಿಗೆ ಅವರು ಮಾತ್ರವೇ ಸಾಕ್ಷಿ ಎಂಬಂತೆ ಬದುಕಿದ ಮೇರು ಚೇತನ ಈಗ ಕನ್ನಡಿಗರ ಮನದಲ್ಲಿ ಸವಿನೆನಪಾಗಿದೆ ಉಳಿದಿದೆ.
ಗೆಲುವು ಕೆಟ್ಟ ಶಿಕ್ಷಕ, ಸೋಲು ಕಲಿಸುವ ಪಾಠ ಮರೆಯಲಾಗದು; ಯಾಕೆ ಹೀಗಂದ್ರು ನಟ ಶಾರುಖ್ ಖಾನ್?