Asianet Suvarna News Asianet Suvarna News

ನಟ ವಿನೋದ್ ರಾಜ್ ಮದುವೆ ಗುಟ್ಟಾಗಿ ಇಟ್ಟಿದ್ದು ಯಾಕೆ; ಸ್ಪಷ್ಟ ಉತ್ತರ ಇಲ್ಲಿದೆ ನೋಡಿ!

ಹಿರಿಯ ನಟಿ ಲೀಲಾವತಿ ಮಗ ವಿನೋದ್ ರಾಜ್‌ ತಮ್ಮ ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕಿನಲ್ಲಿ ಬಹಳಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಡಾನ್ಸ್‌ ಕಿಂಗ್ ಎಂಬ ಬಿರುದು ಪಡೆದಿದ್ದರೂ, ನಟರಾಗಿ ಗುರುತಿಸಿಕೊಂಡಿದ್ದರೂ ಅವರಿಗೆ ಹೇಳಿಕೊಳ್ಳುವಂತ ಅವಕಾಶಗಳಾಗಲೀ ಸಕ್ಸಸ್ ಆಗಲಿ ಸಿಗಲಿಲ್ಲ.

Many have confusion about the place where actor and Leelavathi son Vinod Raj got married srb
Author
First Published Feb 25, 2024, 6:37 PM IST

ನಟ, ಹಿರಿಯ ನಟಿ ಲೀಲಾವತಿ ಮಗ ವಿನೋದ್ ರಾಜ್‌ (Vinod Raj)ಅವರು ತಮ್ಮ ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕಿನಲ್ಲಿ ಬಹಳಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಡಾನ್ಸ್‌ ಕಿಂಗ್ ಎಂಬ ಬಿರುದು ಪಡೆದಿದ್ದರೂ, ನಟರಾಗಿ ಗುರುತಿಸಿಕೊಂಡಿದ್ದರೂ ಅವರಿಗೆ ಹೇಳಿಕೊಳ್ಳುವಂತ ಅವಕಾಶಗಳಾಗಲೀ ಸಕ್ಸಸ್ ಆಗಲಿ ಸಿಗಲಿಲ್ಲ. ಆದರೆ, ಅವರ ವೈಯಕ್ತಿಕ ಜೀವನದ ಒಂದು ಘಟನೆ ಬಗ್ಗೆ ಮಾತ್ರ ಅವರ ಅಭಿಮಾನಿಗಳಲ್ಲಿ ಕೆಲವರು ಸೇರಿದಂತೆ, ಹಲವರಿಗೆ ಗೊಂದಲವಿದೆ. ಅದೇನೆಂದರೆ, ಅವರು ಮದುವೆಯಾಗಿದ್ದು ಎಲ್ಲಿ ಎಂಬುದು. ಅದಕ್ಕೆ ಸ್ಪಷ್ಟವಾದ ಉತ್ತರವಿದೆ. 

ನಟ ವಿನೋದ್ ರಾಜ್ ಅವರು ಮದುವೆಯಾಗಿದ್ದು ತಿರುಪತಿಯಲ್ಲಿ, ವೆಂಕಟೇಶ್ವರನ ಸನ್ನಿಧಿಯಲ್ಲಿ ಎಂಬುದು ಸತ್ಯ ಸಂಗತಿ. ಲೀಲಾವತಿ (Leelavathi)ಪುತ್ರ ವಿನೋದ್ ರಾಜ್‌ ಹೆಂಡತಿ ಹೆಸರು ಅನು ಬಿ. ಮಗನ ಹೆಸರು ಯುವರಾಜ್ ವಿ. ಸದ್ಯ ವಿನೋದ್ ರಾಜ್ ಹೆಂಡತಿ ಹಾಗೂ ಮಗ ಚೆನ್ನೈ ಬಂಗಲೆಯಲ್ಲಿ ವಾಸವಾಗಿದ್ದಾರೆ ಎಂಬ ಮಾಹಿತಿಯಿದೆ. ಹಾಗಿದ್ದರೆ ವಿನೋದ್ ರಾಜ್ ಅಥವಾ ಲೀಲಾವತಿಯವರು ಮದುವೆಯನ್ನು ಯಾಕೆ ಗುಟ್ಟಾಗಿ ಇಟ್ಟಿದ್ದರು ಎಂಬುದಕ್ಕೆ ಉತ್ತರ ಹುಡುಕಲು ಹೊರಟರೆ ಬಹಳ ಸರಳ ಉತ್ತರವಿದೆ, ಅದು ಹೀಗಿದೆ. 

ಲೀಲಾವತಿಯವರು ತಮ್ಮ ಮಗನ ಮದುವೆಯನ್ನು ಕೇವಲ ಏಳು ಕನ್ನಡಿಗರ ಸಮ್ಮುಖದಲ್ಲಿ ಮಾಡಿದ್ದರಂತೆ. 'ನಾನು 650ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ನಟಿಯಾಗಿದ್ದರೂ, ಬಹಳಷ್ಟು ಜನರನ್ನು ಕರೆದು ಮಾಡುವ ಶಕ್ತಿಯಿದ್ದರೂ ಅವರ ಸರಳ ಮದುವೆಯನ್ನು ಇಷ್ಟಪಟ್ಟು ಹಾಗೆ ಮಾಡಿದ್ದೇನೆ' ಎಂದು ನಟಿ ಲೀಲಾವತಿಯವರು ಬದುಕಿರುವಾಗಲೇ ಸಂದರ್ಶನವೊಂದರಲ್ಲಿ ಹೇಳಿದ್ದರು. ಅವರಿಗೆ ಅದನ್ನು ಜಗತ್ತಿಗೇ 'ಟಾಂ ಟಾಂ' ಮಾಡುವ ಉದ್ದೇಶ ಇರಲಿಲ್ಲವಂತೆ. ಹೀಗಾಗಿ 'ಆ ಬಗ್ಗೆ ಯಾರೂ ಕೇಳಿರಲಿಲ್ಲ, ನಾನೂ ಹೇಳಿರಲಿಲ್ಲ' ಎಂದಿದ್ದಾರೆ ನಟಿ ಲೀಲಾವತಿ. 

ಅಪ್ಪು-ಉಪ್ಪಿ ಓಲ್ಡ್ ವೀಡೀಯೋ ಮತ್ತೆಮತ್ತೆ ವೈರಲ್; ಪುನೀತ್ ಪ್ರಶ್ನೆ, ಉಪೇಂದ್ರ ಉತ್ತರಕ್ಕೆ ಶಾಕ್ ಆಗ್ತೀರಾ!

ಇನ್ನು ವಿನೋದ್ ರಾಜ್ ವಿಷಯಕ್ಕೆ ಬರುವುದಾದರೆ, ಮಾಧ್ಯಮದವರು ನೇರವಾಗಿ ಯಾವತ್ತೂ ನಟ ವಿನೋದ್ ರಾಜ್ ಅವರನ್ನು ಮದುವೆ ಬಗ್ಗೆ ಕೇಳಿರಲಿಲ್ಲ. ನಿಮಗೆ ಹೆಂಡತಿ, ಮಕ್ಕಳು ಇದ್ದಾರಾ' ಎಂದು ಯಾವತ್ತೂ ಪ್ರಶ್ನೆ ಮಾಡಿರಲಿಲ್ಲ. ವಿನೋದ್ ರಾಜ್ ಕೂಡ ಆ ಬಗ್ಗೆ ತಾವಾಗಿಯೇ ಹೇಳಿಕೊಂಡಿರಲಿಲ್ಲ. ಆದರೆ, ಒಮ್ಮೆ ಕೆಲವು ಮಾಧ್ಯಮದವರೇ ಸ್ವ ಇಚ್ಛೆಯಿಂದ 'ವಿನೋದ್‌ ರಾಜ್ ಅವರಿಗೆ ಮದುವೆಯಾಗಿಲ್ಲ, ತಾಯಿಗೋಸ್ಕರ, ತಾಯಿ ಸೇವೆ ಮಾಡುವುದಕ್ಕೋಸ್ಕರ ಇನ್ನೂ ಒಂಟಿಯಾಗಿಯೇ ಇದ್ದಾರೆ ಎಂದು ಬಿಂಬಿಸಿದವು'.  ಆಗ ಅನಿವಾರ್ಯ ಎಂಬಂತೆ ನಟ ವಿನೋದ್ ರಾಜ್ ಮತ್ತು ತಾಯಿ ಲೀಲಾವತಿಯವರು ಬಾಯ್ಬಿಟ್ಟು ಹೇಳಿದ್ದಾರೆ. 

ದರ್ಶನ್ ಸೂಪರ್ ಸ್ಟಾರ್, ಉಮಾಪತಿ ದೊಡ್ಡ ನಿರ್ಮಾಪಕರು; ಬುದ್ಧಿ ಹೇಳೋದಕ್ಕೆ ನಾನ್ಯಾರು ಅಂದ್ಬಿಟ್ರಾ ಪ್ರಥಮ್!

ಹೆಚ್ಚಿನ ಮಾಹಿತಿ ಲಭ್ಯವಿಲ್ಲದಿದ್ದರೂ ವಿನೋದ್ ರಾಜ್ ಮದುವೆಯನ್ನು (Vinod Raj Marraige)ಸ್ವತಃ ಲೀಲಾವತಿಯವರೇ ಇಷ್ಟಪಟ್ಟು ತಿರುಪತಯಲ್ಲಿ ಮಾಡಿಸಿದ್ದಾರೆ. ಅವರ ಮಗ ಚೆನ್ನೈನಲ್ಲಿ ಕಾಲೇಜ್ ಓದುತ್ತಿದ್ದಾರೆ ಎಂಬ ಸಂಗತಿ ಆ ಬಳಿಕ ಹೊರಜಗತ್ತಿಗೆ ಅನಾವರಣವಾಗಿದೆ. ತಾಯಿ ಲೀಲಾವತಿಯಾಗಲೀ ಮಗ ವಿನೋದ್ ರಾಜ್ ಆಗಲೀ ತಾವಾಗಿಯೇ ಹೇಳಲಿಲ್ಲ, ಹೇಳೋ ಸಮಯ ಬಂದಾಗ ಮುಚ್ಚಿಡಲಿಲ್ಲ' ಎನ್ನಬಹುದು. ಒಟ್ಟಿನಲ್ಲಿ ಲೀಲಾವತಿ-ವಿನೋದ್ ರಾಜ್ ವೈಯಕ್ತಿಕ ಬದುಕು ಹೇಗೇ ಇರಲಿ, ಅವರು ಸಮಾಜಕ್ಕೆ ಬಹಳಷ್ಟು ಸೇವೆ ಮಾಡಿದ್ದಾರೆ ಎಂಬುದನ್ನು ಯಾರೂ ಮರೆಯಲು ಸಾಧ್ಯವಿಲ್ಲ.

ನಟ ರಾಜ್‌ಕುಮಾರ್ 'ಡಾ ರಾಜ್‌ಕುಮಾರ್' ಆದಾಗ ಅವ್ರು ಹೇಳಿದ್ದೇನು; ಹೀಗಂದಿದ್ರಾ ಅಣ್ಣವ್ರು! 

ಸೋಲದೇವನಹಳ್ಳಿಯ ಜನರು ತಾಯಿ-ಮಗನ ಅನುಪಮ ಸೇವೆಯ ಬಗ್ಗೆ ಯಾವತ್ತೂ ಮಾತನಾಡುತ್ತಾರೆ. ಲೀಲಾವತಿ ನಿಧನ ಹೊಂದಿದಾಗ ಕೂಡ ಅವರಿಬ್ಬರು ಹಳ್ಳಿಯಲ್ಲಿ ಮಾಡಿರುವ ಬಹಳಷ್ಟು ಸಾಮಾಜಿಕ ಜನೋಪಯೋಗಿ ಕೆಲಸಗಳ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಆದರೆ, ಅಚ್ಚರಿ ಎಂಬಂತೆ, ಎಲ್ಲಾ ಸಂಗತಿಗಳಿಗಿಂತ ಹೆಚ್ಚು ವಿನೋದ್ ರಾಜ್ ಮದುವೆ ಗುಟ್ಟಾಗಿ ಮಾಡಿದ್ದಾರೆ ಎಂಬುದೇ ಹೆಚ್ಚು ಪ್ರಚಾರ ಪಡೆದಿತ್ತು. ಆದರೆ, ಈಗ ಅದೇನೂ ಗುಟ್ಟಿನ ಸಂಗತಿಯಲ್ಲ, ಬಹುತೇಕ ಎಲ್ಲರಿಗೂ ಗೊತ್ತಾಗಿದೆ. 

Follow Us:
Download App:
  • android
  • ios