ಸಿತಾರಾ ಗಟ್ಟಿ ನಿರ್ಧಾರದಿಂದ ಬಹಳಷ್ಟು ಪುರುಷರು ಬ್ರಹ್ಮಚಾರಿಗಳಾಗಿಯೇ ಉಳಿದ್ರಾ!
ಅವರ ಅಕಾಲಿಕ ನಿಧನದಿಂದ ನನಗೆ ಅದೆಷ್ಟು ಶಾಕ್ ಆಯ್ತು ಎಂದರೆ, ನಾನು ಜೀವನದಲ್ಲಿ ಪ್ರೀತಿ-ಮದುವೆ ಹೀಗೆ ಎಲ್ಲ ಆಸೆಗಳನ್ನೂ ಕಳೆದಯಕೊಂಡೆ. ಜೊತೆಗೆ, ಅದೇ ಸಮಯದಲ್ಲಿ ನನ್ನ ಪಾಲಿನ ಹೀರೋ ಆಗಿದ್ದ ನಮ್ಮ..
'ಹಾಲುಂಡ ತವರು' ಚಿತ್ರದ ಮೂಲಕ ಕನ್ನಡಿಗರ ಮನ-ಮನೆಯಲ್ಲಿ ಸ್ಥಾನ ಪಡೆದಿರುವ ನಟಿ ಸಿತಾರಾ. ಸಿತಾರಾ ನಾಯರ್ (Sithara Nair) ಹೆಸರಿನ ಈ ನಟಿ ಮಲಯಾಳಂ ಮೂಲದವರಾದರೂ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ನಟಿಸಿದ್ದಾರೆ. ಸಾಹಸಸಿಂಗ ವಿಷ್ಣುವರ್ಧನ್ ಜೋಡಿಯಾಗಿ ಹಾಲುಂಡ ತವರು ಚಿತ್ರದಲ್ಲಿ ನಟಿ ಸಿತಾರಾ ನಟಿಸಿ, ಮಹಿಳಾ ಅಭಿಮಾನಿಗಳನ್ನೂ ಸಂಪಾದಿಸಿಕೊಂಡಿದ್ದಾರೆ. ಜೇನುಗೂಡು, ಅಮ್ಮ ಐ ಲವ್ ಯೂ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ ಈ ಸಿತಾರಾ.
ಇಂಥ ನಟಿ ಸಿತಾರಾ ಬಗ್ಗೆ ಜನಸಾಮಾನ್ಯರಿಗೆ ಒಂದು ಕುತೂಹಲ ಹುಟ್ಟಿಸುವ ಸಂಗತಿ ಒಂದಿದೆ. ಅವರಿಗೆ ಈಗಾಗಲೇ 51 ವರ್ಷ ವಯಸ್ಸಾಗಿದ್ದರೂ ಕೂಡ ಇನ್ನೂ ಅವರು ಮದುವೆಯಾಗಿಲ್ಲ, ಸಿಂಗಲ್ ಆಗಿಯೇ ಇದ್ದಾರೆ. ಆದರೆ, ಅದಕ್ಕೆ ಕಾರಣವನ್ನು ಕೂಡ ಅವರೇ ಬಹಿರಂಗ ಪಡಿಸಿದ್ದಾರೆ. ನಟಿ ಸಿತಾರಾ ಅವರೇ ಒಮ್ಮೆ ಹೇಳಿಕೊಂಡಂತೆ ' ನಾನು ನಟ ಮುರಳಿ ಅವರನ್ನು ಮನಸಾರೆ ಪ್ರೀತಿಸುತ್ತಿದ್ದೆ.. ನನಗೆ ಅವರನ್ನು ಬಿಟ್ಟರೆ ಬೇರೆ ಪ್ರಪಂಚ ಇರಲಿಲ್ಲ.
ಅಮೆರಿಕಾಗೆ ಹೊರಟ ಶಿವಣ್ಣ: ಈ ಸರ್ಜರಿ ಅದೆಷ್ಟು ಡೇಂಜರ್? ಹೇಗಿರುತ್ತೆ ಶಸ್ತ್ರಚಿಕಿತ್ಸೆ?
ಅವರ ಅಕಾಲಿಕ ನಿಧನದಿಂದ ನನಗೆ ಅದೆಷ್ಟು ಶಾಕ್ ಆಯ್ತು ಎಂದರೆ, ನಾನು ಜೀವನದಲ್ಲಿ ಪ್ರೀತಿ-ಮದುವೆ ಹೀಗೆ ಎಲ್ಲ ಆಸೆಗಳನ್ನೂ ಕಳೆದಯಕೊಂಡೆ. ಜೊತೆಗೆ, ಅದೇ ಸಮಯದಲ್ಲಿ ನನ್ನ ಪಾಲಿನ ಹೀರೋ ಆಗಿದ್ದ ನಮ್ಮ ತಂದೆಯನ್ನೂ ಸಹಾ ನಾನು ಕಳೆದುಕೊಂಡೆ. ನನ್ನ ಜೀವನದಲ್ಲಿ ತುಂಬಾ ಮುಖ್ಯವಾಗಿದ್ದ ಆ ಇಬ್ಬರು ಪುರುಷರನ್ನು ಕಳೆದುಕೊಂಡ ಬಳಿಕ ನನಗೆ ಜೀವನದಲ್ಲಿ ಆಸಕ್ತಿಯೇ ಹೊರಟುಹೋಯ್ತು. ನಾನು ಆಧ್ಯಾತ್ಮದತ್ತ ಸಾಗುತ್ತಿದ್ದೇನೆ.
ನನಗೆ ಲವ್, ಮ್ಯಾರೇಜ್ ಎಲ್ಲದರ ಬಗ್ಗೆ ನಂಬಿಕೆಯೇ ಈಗ ಹೊರಟುಹೋಗಿದೆ. ಬಣ್ಣದ ಬದುಕು, ಆ ಬದುಕಿನಲ್ಲೇ ನನಗೆ ನಿಜ ಜೀವನದಲ್ಲಿಯೂ ಸ್ಪೂರ್ತಿಯ ಚೇತನ ಎಂಬಂತಿದ್ದ ನಟ ಮುರಳಿ ಅವರು ಈ ಲೋಕದಿಂದ ದೂರವಾಗಿದ್ದು ನನ್ನ ಬದುಕಿನಲ್ಲಿ ನಡೆದ ಘೋರ ದುರಂತ ಎಂದೇ ಹೇಳಬೇಕು. ಅಪ್ಪ ಹಾಗು ಮುರಳಿ ಅವರಿಬ್ಬರನ್ನು ಕಳೆದಕೊಂಡ ನಂತರದ ನನ್ನ ಬದುಕು ಬೇರೆಯದೇ ರೀತಿಯಲ್ಲಿ ಸಾಗುತ್ತಿದೆ. ಈ ಬಗ್ಗೆ ನಾನು ಹೆಚ್ಚು ಹೇಳಲು ಬಯಸುವುದಿಲ್ಲ..' ಎಂದಿದ್ದಾರೆ ಸಿತಾರಾ.
ನಟಿ ಆರತಿ ಚಿತ್ರರಂಗವನ್ನು ತೊರೆದ ನಿಜವಾದ ಕಾರಣ ಕೊನೆಗೂ ಬಹಿರಂಗವಾಯ್ತು!
ನಟಿಯಾಗಿ ಸಿತಾರಾರನ್ನು ತೆರೆಯೆ ಮೇಲೆ ನೋಡಿದ ಅದೆಷ್ಟೋ ಮಂದಿ, ಇಂಥ ಲಕ್ಷ್ಣವಾದ ಹುಡುಗಿ ಸಿಕ್ಕರೆ ಮದುವೆ ಮಾಡಿಕೊಳ್ಳದೇ ಇರಲು ಹೇಗೆ ಸಾಧ್ಯ ಎಂದೇ ಯೋಚಿಸಿದ್ದಾರೆ. ಅದೆಷ್ಟೋ ಮಂದಿ ಸಿತಾರಾ ಅವರನ್ನೇ ಮದುವೆಯಾಗುವ ಕನಸನ್ನು ಕೂಡ ಕಂಡಿರಲಿಕ್ಕೆ ಸಾಕು. ಆದರೆ, ನಟಿ ಸಿತಾರಆ ಅವರ ಈ ಗಟ್ಟಿ ನಿರ್ಧಾರದಿಂದ ಕೆಲವರು ಬೇಸತ್ತು, ಜೀವನ ಪರ್ಯಂತ ಬ್ರಹ್ಮಚಾರಿಗಳಾಗಿಯೇ ಉಳಿಯಲು ನಿರ್ಧರಿಸಿರಬಹುದು.
ಒಟ್ಟಿನಲ್ಲಿ ಸದ್ಯ 51 ವರ್ಷವಾದರೂ ಇನ್ನೂ ಸಿಂಗಲ್ ಆಗಿಯೇ ಇರುವ ನಟಿ ಸಿತಾರಾ, ತಾವು ಮದುವೆಯಾಗುವ ಯಾವುದೇ ಗುರಿ, ಕನಸು ಹೊಂದಿಲ್ಲ ಎಂದಿದ್ದಾರೆ. ನಟಿಯಾಗಿ ಕೂಡ ಅವರು ಈಗ ಮೊದಲಿನಷ್ಟು ಕ್ರಿಯಾಶೀಲವಾಗಿಲ್ಲ. ಜೀವನದಲ್ಲಿ ಘಟಿಸಿದ ದುರಂತದಿಂದ ನೊಂದು ಬೆಂದಿರುವ ಮುದ್ದು ಮುಖದ ಸಿತಾರಾ, ಸದ್ಯ ಒಂಟಿಯಾಗಿಯೇ ಬದುಕು ಕಳೆಯುತ್ತಿದ್ದಾರೆ. ಕನ್ನಡ ಸಿನಿಪ್ರೇಕ್ಷಕರಂತೂ ಅವರನ್ನು ಎಂದಿಗೂ ಮರೆಯಲಾಗದು.
ದೊಡ್ಮನೆ ಜನರನ್ನು ಸುದೀಪ್ ಹ್ಯಾಂಡಲ್ ಮಾಡೋ ಗುಟ್ಟು ಕೊನೆಗೂ ರಟ್ಟಾಯ್ತು!