ನಟಿ ಆರತಿ ಚಿತ್ರರಂಗವನ್ನು ತೊರೆದ ನಿಜವಾದ ಕಾರಣ ಕೊನೆಗೂ ಬಹಿರಂಗವಾಯ್ತು!

ನಟಿ ಆರತಿಯವರು ಬಹಳಷ್ಟು ಕಲಾವಿದರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ. ಏಕೆಂದರೆ, ತಮ್ಮ ಬದುಕಿನಲ್ಲಿ ಬಹಳಷ್ಟು ನೋವು ಉಂಡರೂ, ದುರಂತ ಎನ್ನುವ ಜೀವನ ಕಟ್ಟಿಕೊಂಡಿದ್ದರೂ ಕೂಡ ನೋವಿನಲ್ಲಿದ್ದವರ ಬಾಳಿಗೆ ಬೆಳಕಾಗುವಂತೆ..

Kannada actress Arathi adopted some villages in Karnataka for Social Welfare srb

ಕನ್ನಡ ಸಿನಿಮಾ ಪ್ರೇಮಿಗಳಿಗೆ ಅದರಲ್ಲೂ 70-80ರ ದಶಕದ ಪ್ರೇಕ್ಷಕರಿಗೆ ನಟಿ ಆರತಿ (Aarathi) ಪರಿಚಯವನ್ನು ಹೊಸದಾಗಿ ಮಾಡಬೇಕಿಲ್ಲ. ರಂಗನಾಯಕಿ, ಗೆಜ್ಜೆ ಪೂಜೆ, ಸತಿ ಸಕ್ಕೂಬಾಯಿ, ರಾಮಾಪುರದಲ್ಲಿ ರಾವಣ, ಪೂಜಾಫಲ, ಹೀಗೆ ಅಸಂಖ್ಯಾತ ಸಿನಿಮಾಗಳಲ್ಲಿ ಮಿಂಚಿ ಮರೆಯಾದ ನಟಿ ಆರತಿ. ಅವರನ್ನು ನಟಿ ಎನ್ನುವುದಕ್ಕಿಂತ ಅಭಿನೇತ್ರಿ ಎನ್ನಬಹುದು. ಡಾ ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್‌ ನಾಗ್, ಅನಂತ್‌ ನಾಗ್ ಸೇರಿದಂತೆ ಅಂದಿನ ಕಾಲದ ಎಲ್ಲ ಘಟಾನುಘಟಿ ನಾಯಕರೊಂದಿಗೆ ಆರತಿ ನಟಿಸಿದ್ದಾರೆ. 

ಆರತಿಯವರ ವೃತ್ತಿಬದುಕು ತುಂಬಾ ರೋಚಕ ಎನ್ನಿಸಿದರೂ ಅವರ ವೈಯಕ್ತಿಕ ಬದುಕು ಸಾಕಷ್ಟು ಏಳುಬೀಳುಗಳು ಹಾಗೂ ವಿವಾದಗಳಿಂದ ಕೂಡಿದೆ. ಹಲವು ನಟನಟಿಯರಿಗೆ ಇರುವ ಖಾಯಿಲೆ, ಅಂದರೆ ಮದುವೆಯಾದ ಪುರುಷರು ಅಥವಾ ಮಹಿಳೆ ಹಿಂದೆ ಬಿದ್ದು ಅವರ ಸಂಸಾರವನ್ನು ಹಾಳು ಮಾಡಿ ಇವರ ಜೀವನವನ್ನೂ ಹಾಳು ಮಾಡಿಕೊಳ್ಳುವ ಚಟ ಆರತಿಯವರಿಗೂ ಇತ್ತು. ಈ ಕಾರಣಕ್ಕೇ ಪುಟ್ಟಣ್ಣ, ರಘುಪತಿ, ಬಳಿಕ ಚಂದ್ರಶೇಖರ್ ಹೀಗೆ ಸಾಲು ಸಾಲು ಪರಪುರುಷರ ಸಂಬಂಧಕ್ಕೆ ಬಿದ್ದು ಕೊನೆಗೆ ಎಲ್ಲವನ್ನೂ ಬಿಟ್ಟು ಮಗಳ ಜೊತೆ ಅಮೆರಿಕಾಕ್ಕೆ ಹೋಗಿ ನೆಲೆಸಿದ್ದಾರೆ. 

ದೊಡ್ಮನೆ ಜನರನ್ನು ಸುದೀಪ್ ಹ್ಯಾಂಡಲ್‌ ಮಾಡೋ ಗುಟ್ಟು ಕೊನೆಗೂ ರಟ್ಟಾಯ್ತು!

ಆದರೂ ಕೂಡ ನಟಿ ಆರತಿಯವರು ಬಹಳಷ್ಟು ಕಲಾವಿದರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ. ಏಕೆಂದರೆ, ತಮ್ಮ ಬದುಕಿನಲ್ಲಿ ಬಹಳಷ್ಟು ನೋವು ಉಂಡರೂ, ದುರಂತ ಎನ್ನುವ ಜೀವನ ಕಟ್ಟಿಕೊಂಡಿದ್ದರೂ ಕೂಡ ನೋವಿನಲ್ಲಿದ್ದವರ ಬಾಳಿಗೆ ಬೆಳಕಾಗುವಂತೆ ಬದುಕುತ್ತಿದ್ದಾರೆ ಮಾಜಿ ನಟಿ ಆರತಿ. ಒಮ್ಮೆ ಚಿತ್ರರಂಗವನ್ನು ತೊರೆದು ಹೋದ ಅವರು ಮತ್ತೆಂದೂ ಬಣ್ಣದ ಬದುಕಿನ ಕಡೆ ಮುಖ ಮಾಡಲೇ ಇಲ್ಲ ಅವರು. ತಮ್ಮ ಮಗಳನ್ನು ಕೂಡ ನಟನಾವೃತ್ತಿಗೆ ಬರದಂತೆ ನೋಡಿಕೊಂಡರು ಆರತಿ. 

ಆದರೆ, ಅಮೆರಿಕಾದಲ್ಲಿ ನೆಲೆಸಿದ್ದರೂ ಭಾರತದಲ್ಲಿ, ಅದರಲ್ಲೂ ಕರ್ನಾಟಕದ 20 ಹಳ್ಳಿಗಳನ್ನು ದತ್ತು ತೆಗೆದುಕೊಂಡು ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ ಆರತಿ. ಮಗಳು ರೇಖಾಗಾಗಿ, ತಾವು ನಟನೆ ಮಾಡುತ್ತಿದ್ದರೆ ಅವಳು ಮನೆಯಲ್ಲಿ ಒಬ್ಬಳೇ ಇರಬೇಕಾಗುತ್ತದೆ ಎಂಬ ಕಾರಣಕ್ಕೇ ಚಿತ್ರರಂಗ ತೊರೆದರು ಎನ್ನಲಾಗಿದೆ. ಬಣ್ಣದ ಬದುಕಿನ ಏಳುಬೀಳುಗಳನ್ನು ಅನುಭವಿಸಿದ್ದ ಆರತಿಯವರು ಒಂದು ಹಂತದಲ್ಲಿ ಇವೆಲ್ಲಾ ಸಾಕು ಎಂದು ನಿರ್ಧರಿಸಿ ಫುಲ್ ಸ್ಟಾಪ್ ಇಟ್ಟುಬಿಟ್ಟಿದ್ದಾರೆ. 

ನನ್ನ ಮಗಳಿಗೆ ನೇಚರ್ ಪ್ಲಾನ್ ಮಾಡಿರುತ್ತೆ, ನಾನು ಜಸ್ಟ್ ಸಪೋರ್ಟ್ ಮಾಡ್ತೀನಿ: ಕಿಚ್ಚ ಸುದೀಪ್ 

ಸದ್ಯ ಅಮೆರಿಕಾದಲ್ಲಿ ನೆಲೆಸಿದ್ದರೂ ಆಗಾಗ ಭಾರತಕ್ಕೆ ಬರುವುದು, ಇಲ್ಲಿನ ಕುಗ್ರಾಮಗಳ ಜನರಿಗೆ ತಮ್ಮಿಂದಾದ ಸಹಾಯ ಮಾಡುವುದು ಆರತಿಯವ ಕೆಲಸ. ಆದರೆ, ಅವರು ಮಾಡುತ್ತಿರುವ ಯಾವುದೇ ಸಮಾಜಸೇವೆಯನ್ನು ಪ್ರಚಾರದ ದೃಷ್ಟಿಯಿಂದ ಮಾಡದೇ, ತಮ್ಮ ಆತ್ಮತೃಪ್ತಿಗಾಗಿ ಮಾಡುತ್ತಿದ್ದಾರೆ. ಅವರು ಮಾಡುತ್ತಿರುವ ಸಮಾಜಸೇವೆಯನ್ನು ಬೇರೆಯವರು ಗುರುತಿಸುವ ಮೂಲಕ ಅದು ಪ್ರಚಾರ ಪಡೆಯುತ್ತಿದೆ. ಇವೆಲ್ಲ ಕಾರಣಗಳಿಂದ ನಟಿ ಆರತಿಯವರು ಜನರ ಮಧ್ಯೆ ಇರದಿದ್ದರೂ ಅವರ ಬಗ್ಗೆ ಮಾಹಿತಿಗಳು ಓಡಾಡುತ್ತಲೇ ಇರುತ್ತವೆ. 

Latest Videos
Follow Us:
Download App:
  • android
  • ios