ದೊಡ್ಮನೆ ಜನರನ್ನು ಸುದೀಪ್ ಹ್ಯಾಂಡಲ್‌ ಮಾಡೋ ಗುಟ್ಟು ಕೊನೆಗೂ ರಟ್ಟಾಯ್ತು!

ನಿಜವಾಗಿ ಹೇಳಬೇಕು ಅಂದ್ರೆ, ಬಿಗ್‌ ಬಾಸ್‌ನಲ್ಲಿ ನಾನು ಅಟೆಂಡ್ ಮಾಡೋದು ಅಲ್ಲಿರೋ ಕ್ಯಾಂಡಿಡೇಟ್ ಪ್ರಶ್ನೆಗಳು, ಗೊಂದಲುಗಳನ್ನು ಮಾತ್ರ ಅಲ್ಲ.. ಅದು ನಿಜವಾಗಿ ನೋಡಿದರೆ ಪಬ್ಲಿಕ್‌ ಪ್ರಶ್ನೆಗಳು. ಮನೆಯಲ್ಲಿ ಕುಳಿತು ಬಿಗ್ ಬಾಸ್ ನೋಡ್ತಿರೋ ವೀಕ್ಷಕರ ಪ್ರಶ್ನೆಗಳೇ ಆಗಿರುತ್ತವೆ ಅವೆಲ್ಲ. ಯಾಕೆ ಅಂದ್ರೆ..

Kichcha Sudeep reveals the secret of handling bigg boss contestants srb

ಸ್ಯಾಂಡಲ್‌ವುಡ್ ನಟ, ಬಿಗ್ ಬಾಸ್ ಹೋಸ್ಟ್ ಕಿಚ್ಚ ಸುದೀಪ್ (Kichcha Sudeep) ಸಂದರ್ಶನವೊಂದರಲ್ಲಿ ಬಿಗ್‌ ಬಾಸ್‌ಗೆ ಬಗ್ಗೆ ಮಾತನ್ನಾಡಿದ್ದಾರೆ. ನಿರೂಪಕರು ಕೇಳಿದ ಪ್ರಶ್ನೆಗೆ ನಟ ಕಿಚ್ಚ ಸುದೀಪ್ ಉತ್ತರಿಸುತ್ತ 'ಎಲ್ಲರನ್ನೂ ಹ್ಯಾಂಡಲ್‌ ಮಾಡೋದು ಕಷ್ಟ ಆಗಲ್ಲ. ತುಂಬಾ ತಿಳ್ಕೊಂಡಿದ್ರೆ, ತುಂಬಾ ಸಾರ್ಟಡ್ ಆಗಿದ್ರೆ, ಎಲ್ಲಾ ವಿಚಾರದಲ್ಲೂ ಕರೆಕ್ಟ್ ಇದ್ರೆ, ಅಂಥವ್ರನ್ನ ಹ್ಯಾಂಡಲ್‌ ಮಾಡೋದು ಕಷ್ಟ ಆಗುತ್ತೆ.. ಕನ್‌ಫ್ಯೂಸನ್‌ನಲ್ಲಿ ಇರೋರು, ಗಲಾಟೆ ಮಾಡ್ಕೊಂಡು ಇರೋರು, ನಾಳೆ ಏನ್ಮಾಡ್ಬೇಕು ಅಂತ ಗೊತ್ತಿಲ್ಲ ಅನ್ನೋರಿಗೆ, ಹ್ಯಾಂಡಲ್‌ ಮಾಡೋದು ತುಂಬಾ ಈಸಿ. 

ತುಂಬಾ ಗೊತ್ತಿರೋರ ಹತ್ರ ಡಿಬೇಟ್ ಮಾಡೋದು ಕಷ್ಟ, ಹೇಳೋದೂ ಕಷ್ಟ.. ಫುಲ್ ಗೊಂದಲದಲ್ಲಿ ಇರ್ತಾರಲ್ಲ, ಅವ್ರನ್ನ ಈಸಿಯಾಗಿ ಮ್ಯಾನೇಜ್ ಮಾಡ್ಬಹುದು. ಅದೇನೂ ದೊಡ್ಡ ಸಂಗತಿಯಲ್ಲ.. ಒಂದು ಅಂದ್ರೆ, ಅವ್ರಿಗೂ ಗೊತ್ತಿರಬೇಕು ನಮಗೆ ಕೋಪ ಬಂದ್ರೆ ಏನಾಗುತ್ತೆ ಅಂತ.. ನಮಗೆ ಕೋಪ ಬರೋದು ಯಾವಾಗ? ಅನಾವಶ್ಯಕ ಏನಾದ್ರೂ ಆದಾಗ.. ಇಲ್ಲ ಅಂದ್ರೆ, ಬೇರೆ ಎಲ್ಲಾನೂ ಈಸಿ, ತುಂಬಾ ಸುಲಭ. ಜನರನ್ನು ಹ್ಯಾಂಡಲ್‌ ಮಾಡೋದು ಅಷ್ಟು ಕಷ್ಟವೇನೂ ಅಲ್ಲ.

ನನ್ನ ಮಗಳಿಗೆ ನೇಚರ್ ಪ್ಲಾನ್ ಮಾಡಿರುತ್ತೆ, ನಾನು ಜಸ್ಟ್ ಸಪೋರ್ಟ್ ಮಾಡ್ತೀನಿ: ಕಿಚ್ಚ ಸುದೀಪ್ 

ಅವ್ರಿಗೆ ಕೆಲವೊಂದು ಘಟನೆ ನಡೆದಾಗ, ನೀವು ನಗಿಸ್ಬೇಕು, ಇರಿಟೇಟ್ ಆಗ್ಬಾರ್ದು.. ಅವ್ರ ಕನ್‌ಫ್ಯೂಸನ್‌ಗೆ ನಿಮ್ಮ ಹತ್ರ ಉತ್ರ ಇದ್ಯಾ, ಎಲ್ಲಾನೂ ಓಕೆ ಆಗುತ್ತೆ.. ನಿಮ್ಮ ಹತ್ರ ಅವರ ಪ್ರಶ್ನೆಗಳಿಗೆ, ಗೊಂದಲಗಳಿಗೆ ಉತ್ತರ ಇಲ್ಲ ಅಂದ್ರೆ ಅದನ್ನ ಟಚ್‌ ಮಾಡೋಕೆ ಹೋಗ್ಬೇಡಿ.. 'ನಿಮ್ಮ ಬಳಿ ಉತ್ತರವಿಲ್ಲ ಅಂದ್ರೆ ನೀವು ಇನ್ನೊಬ್ಬರಿಗೆ ಪ್ರಶ್ನೆ ಯಾಕೆ ಕೇಳ್ತೀರ?' ಎಂದಿದ್ದಾರೆ ಕಿಚ್ಚ ಸುದೀಪ್. 'ಹೌದು, ಇದು ಒಳ್ಳೆಯ ಮ್ಯಾನೇಜ್‌ಮೆಂಟ್ ಪಾಠ' ಎಂದಿದ್ದಾರೆ ನಿರೂಪಕರು. 

ನಿಜವಾಗಿ ಹೇಳಬೇಕು ಅಂದ್ರೆ, ಬಿಗ್‌ ಬಾಸ್‌ನಲ್ಲಿ ನಾನು ಅಟೆಂಡ್ ಮಾಡೋದು ಅಲ್ಲಿರೋ ಕ್ಯಾಂಡಿಡೇಟ್ ಪ್ರಶ್ನೆಗಳು, ಗೊಂದಲುಗಳನ್ನು ಮಾತ್ರ ಅಲ್ಲ.. ಅದು ನಿಜವಾಗಿ ನೋಡಿದರೆ ಪಬ್ಲಿಕ್‌ ಪ್ರಶ್ನೆಗಳು. ಮನೆಯಲ್ಲಿ ಕುಳಿತು ಬಿಗ್ ಬಾಸ್ ನೋಡ್ತಿರೋ ವೀಕ್ಷಕರ ಪ್ರಶ್ನೆಗಳೇ ಆಗಿರುತ್ತವೆ ಅವೆಲ್ಲ. ಯಾಕೆ ಅಂದ್ರೆ, ಫೈನಲೀ ನಾನು ಉತ್ತರ ಕೊಡಬೇಕಾಗಿದ್ದು ವೀಕ್ಷಕರಿಗೆ. ಏಕೆಂದ್ರೆ, ಆ ಸ್ಪರ್ಧಿಗಳು ಕೂಡ ವೀಕ್ಷಕರ ಪ್ರತಿನಿಧಿಗಳೇ ಆಗಿರ್ತಾರೆ. ಯಾಕೆ ಅಂದ್ರೆ ಅವ್ರು ಆಡೋದು ಕೂಡ ವೀಕ್ಷಕರಿಗೇ...' ಎಂದಿದ್ದಾರೆ ಕಿಚ್ಚ ಸುದೀಪ್. 

ಮಗಳು, ಪತ್ನಿಯೊಂದಿಗೆ ಮನೆಯಿಂದ ಹೊರಟಾಗ ಎಮೋಶನಲ್ ಆದ ಶಿವರಾಜ್‌ಕುಮಾರ್ 

Latest Videos
Follow Us:
Download App:
  • android
  • ios