ಮೈಸೂರು ಸ್ಯಾಂಡಲ್ ಸೋಪ್‌ ರಾಯಭಾರಿಯಾಗಿ ನಟಿ ತಮನ್ನಾ ಆಯ್ಕೆಗೆ ಭಾರಿ ವಿರೋಧಗಳು ವ್ಯಕ್ತವಾಗುತ್ತಿದೆ. ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ, ಸರ್ಕಾರದ ನಡೆಗೆ ಆಕ್ರೋಶ ಹೊರಹಾಕಿದ್ದರೆ.

ಬೆಂಗಳೂರು(ಮೇ.24) ಕನ್ನಡರ ಪರ ಸಂಘಟನೆಗಳು ಸೇರಿದಂತೆ ಕನ್ನಡಿಗರು ಮೈಸೂರು ಸ್ಯಾಂಡಲ್ ಸೋಪ್ ಹೊಸ ರಾಯಭಾರಿ ನೇಮಕ ಕುರಿತು ಹೋರಾಟ ಶುರುಮಾಡಿದ್ದಾರೆ. ರಾಜ್ಯ ಸರ್ಕಾರ ಮೈಸೂರು ಸ್ಯಾಂಡಲ್ ಸೋಪ್‌ಗೆ ಬಾಲಿವುಡ್ ನಟಿ ತಮನ್ನಾ ರಾಯಬಾರಿಯಾಗಿ ಆಯ್ಕೆ ಮಾಡಿದ್ದಾರೆ. ಕರ್ನಾಟಕದ ಹೆಮ್ಮೆಯ ಉತ್ಪನ್ನಕ್ಕೆ ಕರ್ನಾಟಕದ ಹೊರಗಿನ ನಟಿಯರ ಅವಶ್ಯಕತೆಯಾ ಇದೆಯಾ? ಕನ್ನಡದಲ್ಲೇ ಸಾಕಷ್ಟು ನಟ ನಟಿಯರು ಇರುವಾಗ ಹೊರಗಿನವರ ಆಯ್ಕೆ ಯಾಕೆ ಎಂದು ಹೋರಾಟ ನಡೆಯುತ್ತಿದೆ. ಇದರ ಬೆನ್ನಲ್ಲೇ ಸರ್ಕಾರದ ನಡೆ ವಿರುದ್ದ ಸ್ಯಾಂಡಲ್‌ವುಡ್ ಕ್ವೀನ್ ನಟಿ ರಮ್ಯಾ ಆಕ್ರೋಶ ಹೊರಹಾಕಿದ್ದಾರೆ. ಮೈಸೂರು ಸ್ಯಾಂಡಲ್‌ವುಡ್ ಸೋಪ್‌ಗೆ ಪ್ರತಿಯೊಬ್ಬ ಕನ್ನಡಿಗ ರಾಯಭಾರಿ. ಮೈಸೂರು ಸ್ಯಾಂಡಲ್ ಸೋಪ್ ಬಳಸುವ ಪ್ರತಿಯೊಬ್ಬರು ರಾಯಭಾರಿಯಾಗಿದ್ದಾರೆ. ಆದರೆ ತಮನ್ನಾಗೆ ಕೋಟಿ ಕೋಟಿ ರೂಪಾಯಿ ಕೊಟ್ಟು ರಾಯಭಾರಿ ಮಾಡಿಕೊಂಡಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.

ತೆರಿಗಾರರ ದುಡ್ಡು ರಾಯಭಾರಿಗೆ ಕೊಡುವುದು ತಪ್ಪು

ಮೈಸೂರು ಸ್ಯಾಂಡಲ್ ಸೋಪ್ ಪ್ರಚಾರ ಹಾಗೂ ರಾಯಭಾರಿ ಕುರಿತು ಎದ್ದಿರುವ ವಿವಾದ ಕುರಿತು ನಟಿ ರಮ್ಯಾ ಸೋಶಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯಿಸಿದ್ದಾರೆ. ಈಗ ಯಾವುದೇ ಉತ್ಪನ್ನಗಳನ್ನು ಪ್ರಚಾರ ಮಾಡಲು ಹಲವು ದಾರಿಗಳಿವೆ. ಪ್ರತಿಯೊಬ್ಬರಿಗೆ ಅರ್ಥಪೂರ್ಣವಾಗಿ ಮಾಹಿತಿ ನೀಡಲು ಸುಲಭ ಮಾರ್ಗಗಳಿವೆ. ಇದಕ್ಕೆ ಹಳೇ ಕಾಲದಲ್ಲಿರುವ ಪದ್ಧತಿಯ ಪ್ರಚಾರ ರಾಯಭಾರಿಯೇ ಬೇಕಾಗಿಲ್ಲ. ತೆರಿಗೆದಾರರ ದುಡ್ಡನ್ನು ಪ್ರಚಾರ ರಾಯಭಾರಿಗೆ ಕೊಡುವುದು ತಪ್ಪು ಎಂದು ರಮ್ಯಾ ಹೇಳಿದ್ದಾರೆ.

ಸೆಲೆಬ್ರಿಟಿ ನೋಡಿ ಉತ್ಪನ್ನ ಖರೀದಿಸುವ ಕಾಲ ಹೋಯ್ತು

ಈಗ ಜಮಾನ ಬದಲಾಗಿದೆ. ಸೆಲೆಬ್ರೆಟಿಗಳನ್ನು ನೋಡಿ ಕಣ್ಮುಚ್ಚಿ ಉತ್ಪನ್ನ ಖರೀದಿಸುವ ಕಾಲವಲ್ಲ. ಉತ್ಪನ್ನ ಉತ್ತಮವಾಗಿದ್ದರೆ ಜನರು ಖರೀದಿಸಿದ್ದಾರೆ. ಮೈಸೂರು ಸ್ಯಾಂಡಲ್ ಸೋಪ್ ಉತ್ಪನ್ನ ಅತ್ಯುತ್ತಮ ಗುಣಮಟ್ಟ ಕಾಯ್ದುಕೊಂಡಿದೆ. ಇದಕ್ಕೆ ಅತೀ ದೊಡ್ಡ ಇತಿಹಾಸವೂ ಇದೆ. ಮೈಸೂರು ಸ್ಯಾಂಡಲ್ ಸೋಪ್‌ಗೆ ಘನತೆ, ಜನಪ್ರಿಯತೆ ಎರಡೂ ಇದೆ. ಮೈಸೂರು ಸ್ಯಾಂಡಲ್ ಸೋಪ್‌ಗೆ ಪ್ರತಿಯೊಬ್ಬ ಕನ್ನಡಿಗರೇ ರಾಯಭಾರಿ ಎಂದು ರಮ್ಯಾ ಹೇಳಿದ್ದಾರೆ.

ಪ್ರತಿಷ್ಠಿತ ಆ್ಯಪಲ್‌ಗೆ ಯಾರಿದ್ದಾರೆ ಬ್ರ್ಯಾಂಡ್ ಅಂಬಾಸಿಡರ್?

ದೊಡ್ಡ ದೊಡ್ಡ ಉತ್ನನ್ನಕ್ಕೆ ಯಾರೂ ಬ್ರ್ಯಾಂಡ್ ಅಂಬಾಸಿಡರ್ ಇಲ್ಲ. ಆ್ಯಪಲ್‌ಗೆ ಯಾರೂ ಬ್ರ್ಯಾಂಡ್ ಅಂಬಾಸಿಡರ್ ಇಲ್ಲ. ಆದರೆ ಆ್ಯಪಲ್ ಯಶಸ್ವಿಯಾಗಿ ಮಾರುಕಟ್ಟೆಲ್ಲಿದೆ. ಹೀಗಾಗಿ ಬ್ರ್ಯಾಂಡ್ ಅಂಬಾಸಿಡರ್ ಮೂಲಕ ಜನಪ್ರಿಯತೆ, ಮಾರಾಟ ಹೆಚ್ಚಿಸಿಕೊಳ್ಳುವ ಕಾಲ ಇದಲ್ಲ ಎಂದು ರಮ್ಯಾ ಹೇಳಿದ್ದಾರೆ.

ಸ್ಯಾಂಡಲ್ ಸೋಪು ವಿವಾದಕ್ಕೆ ಜನರ ಅಭಿಪ್ರಾಯ ಕೇಳಿದ ರಜನಿ ರಾಘವನ್

ಮೈಸೂರು ಸ್ಯಾಂಡಲ್ ಸೋಪು ವಿವಾದ ಹೆಚ್ಚಾಗುತ್ತಿದ್ದಂತೆ ನಟಿ ರಜನಿ ರಾಘವನ್ ಜನರ ಅಭಿಪ್ರಾಯ ಕೇಳಿದ್ದಾರೆ. 6.2 ಕೋಟಿ ರೂಪಾಯಿ ಕೊಟ್ಟು ನಟಿ ತಮನ್ನಾ ಭಾಟಿಯಾರನ್ನು ರಾಯಭಾರಿಯಾಗಿ ಆಯ್ಕೆ ಮಾಡಿದ್ದಾರೆ. ಇದರ ಬಗ್ಗೆ ಕನ್ನಡಿಗರ ಅಭಿಪ್ರಾಯವೇನು? ಎಂದು ಸೋಶಿಯಲ್ ಮೀಡಿಯಾದಲ್ಲಿ ರಜನಿ ರಾಘವನ್ ಪೋಸ್ಟ್ ಮಾಡಿದ್ದಾರೆ. ಎರಡು ಆಯ್ಕೆ ಕೊಟ್ಟು ಜನರ ಅಭಿಪ್ರಾಯ ಕೇಳಿದ್ದಾರೆ.

ನಿಮ್ಮ ಅಭಿಪ್ರಾಯ ಏನು?

1.ಕನ್ನಡದ ತಾರೆ ಇರಬೇಕಿತ್ತು.

2.ಕರ್ನಾಟಕದ ಹೊರಗೆ ಮಾರ್ಕೆಟಿಂಗ್ ದೃಷ್ಟಿಯಿಂದ ಸರಿ

ಎರಡು ಅಭಿಪ್ರಾಯದಲ್ಲಿ ನಿಮ್ಮ ಅಭಿಪ್ರಾಯವೇನು ಎಂದು ರಜನಿ ರಾಘವನ್ ಕೇಳಿದ್ದಾರೆ.